ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ‘ಚೌಕಿದಾರ್ ಹೀ ಚೋರ್ ಹೈ’ ಎಂದು ಬರೆದ ಸ್ಟಿಕ್ಕರ್‌ ಅನ್ನು ಗೋಡೆಗೆ ಅಂಟಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನವದೆಹಲಿ (ಮಾ. 09): ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ‘ಚೌಕಿದಾರ್ ಹೀ ಚೋರ್ ಹೈ’ ಎಂದು ಬರೆದ ಸ್ಟಿಕ್ಕರ್‌ಅನ್ನು ಗೋಡೆಗೆ ಅಂಟಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಲಿತ್ ಕುಮಾರ್ ಚೌಹಾಣ್ ಎನ್ನುವವರು ತಮ್ಮ ಫೇಸ್‌ಬುಕ್‌ನಲ್ಲಿ ಈ ಫೋಟೋ ಹಾಕಿ, ‘ತಂದೆಯೇ ಕಳ್ಳ ಅಂತ ಈಗ ಮಗ ಸಹ ಒಪ್ಪಿಕೊಂಡಿದ್ದಾನೆ’ ಎಂದು ಬರೆದಿದ್ದಾರೆ. ಆದರೆ ಬೂಮ್ ಸುದ್ದಿಸಂಸ್ಥೆ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದರ ಮೂಲ ಚಿತ್ರ ಪತ್ತೆಯಾಗಿದೆ.

2019 ಫೆ. 13 ಕ್ಕೆ 2 ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅದರಲ್ಲಿ ಒಂದು ರಾಷ್ಟ್ರಧ್ವಜ ಹಿಡಿದಿರುವುದು, ಇನ್ನೊಂದು ‘ಮೇರಾ ಪರಿವಾರ್ ಭಾಜಪ ಪರಿವಾರ್’ ಅಭಿಯಾನದ ಭಾಗವಾಗಿ ತಮ್ಮ ಮನೆಯ ಹೊರಭಾಗದಲ್ಲಿ ಪ್ರಧಾನಿ ಮೋದಿ ಚಿತ್ರ ಅಂಟಿಸುತ್ತಿರುವುದು. ಎರಡನೇ ಚಿತ್ರವನ್ನು ಎಡಿಟ್ ಮಾಡಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

- ವೈರಲ್ ಚೆಕ್