Akhilesh Yadav : ನಾನು ರಾಮರಾಜ್ಯ ಮಾಡ್ತೀನಿ ಅಂತಾ ಭಗವಾನ್ ಕೃಷ್ಣ ಕನಸಿನಲ್ಲಿ ಬಂದು ಹೇಳಿದ್ದಾನೆ!

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆ
ಗರಿಗೆದರಿದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಣ
ಪ್ರತಿ ದಿನ ರಾತ್ರಿ ಭಗವಾನ್ ಕೃಷ್ಣ ಕನಸಿನಲ್ಲಿ ಬರ್ತಾರಂತೆ

Samajwadi Party chief Akhilesh Yadav on Monday claimed that Lord Krishna comes to his dreams every night san

ಲಖನೌ (ಜ. 4): ಉತ್ತರಪ್ರದೇಶ ವಿಧಾನಸಭೆಯ (Uttar Pradesh Assembly Polls) ಚುನಾವಣೆಯ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ, ಈಗಾಗಲೇ ರಾಜ್ಯದಲ್ಲಿ ಚುನಾವಣಾ ರಣಕಣ ಸಿದ್ಧವಾಗಿದೆ. ದೇವರು ಧರ್ಮ ಎಲ್ಲಾ ವಿಚಾರಗಳೂ ಮುಖ್ಯವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಕಣದಲ್ಲಿ ಈ ಬಾರಿ ಸಮಾಜವಾದಿ ಪಕ್ಷ  (Samajwadi Party ) ಪ್ರಬಲ ಪೈಪೋಟಿ ನೀಡಲು ಸಿದ್ಧವಾಗಿದೆ. ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav ), ಭಗವಾನ್ ಕೃಷ್ಣ ಪ್ರತಿ ರಾತ್ರಿ ತಮ್ಮ ಕನಸಿನಲ್ಲಿ ಬರ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾನೇ ಸರ್ಕಾರ ನಡೆಸಲಿದ್ದು, ಉತ್ತರ ಪ್ರದೇಶವನ್ನು ರಾಮರಾಜ್ಯವನ್ನಾಗಿ (Ram Rajya) ಪರಿವರ್ತನೆ ಮಾಡುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. 

ಭಾರತೀಯ ಜನತಾ ಪಕ್ಷದ ಬಹರೇಚ್ ನ ಶಾಸಕಿ ಮಾಧುರಿ ವರ್ಮಾ (Madhuri Verma) ಅವರು ಸಮಾಜವದಿ ಪಕ್ಷಕ್ಕೆ ಸೇರ್ಪಡೆಯಾದ ಸಮಾರಂಭದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಈ ಮಾತನ್ನು ಹೇಳಿದ್ದಾರೆ. ಜಾತಿಯಿಂದ ಕುರ್ಮಿ ಆಗಿರುವ ಮಾಧುರಿ ವರ್ಮಾ ಎರಡನೇ ಬಾರಿ ಶಾಸಕರಾಗಿದ್ದಾರೆ. ಅವರು 2010 ರಿಂದ 2012 ರವರೆಗೆ ಯುಪಿಯ ವಿಧಾನಪರಿಷತ್ ಸದಸ್ಯರಾಗಿದ್ದರು. ಬಹರೇಚ್ ಜಿಲ್ಲೆಯ ನಾನ್ಪಾರಾ ವಿಧಾನಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಶಾಸಕರ ಸೇರ್ಪಡೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದಲ್ಲಿ ಈ ಬಾರಿ ಸಮಾಜವಾದಿ ಪಕ್ಷ ಸರ್ಕಾರ ರಚಿಸೋದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮಾಜವಾದ (ಸಮಾಜವಾದ) ಮಾರ್ಗದ ಮೂಲಕ ರಾಮರಾಜ್ಯದ ಹಾದಿ ಇದೆ, ಸಮಾಜವಾದ ಸ್ಥಾಪನೆಯಾದ ದಿನ ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ತಿಳಿಸಿದ್ದಾರೆ. "ಪ್ರತಿ ದಿನ ರಾತ್ರಿ ಭಗವಾನ್ ಕೃಷ್ಣ ನನ್ನ ಕನಸಿನಲ್ಲಿ ಬರುತ್ತಾನೆ. ಮುಂಬರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೇ ಅಧಿಕಾರ ಸ್ಥಾಪನೆ ಮಾಡಲಿದೆ ಎಂದು ಹೇಳುತ್ತಿದ್ದಾರೆ' ಎಂದರು. ಅದರೊಂದಿಗೆ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕೆ ಮಾಡಿದ್ದಾರೆ.

Modi About Yogi Adityanath: ಈ ಹಿಂದೆ ಕ್ರಿಮಿನಲ್‌ ಆಟ, ಈಗ ಯೋಗಿ ‘ಜೈಲು ಆಟ’ ಎಂದ ಮೋದಿ
ಸಮಾಜವಾದಿ ಪಕ್ಷವು ಹಲವಾರು ಕ್ರಿಮಿನಲ್‌ಗಳು ಮತ್ತು ದರೋಡೆಕೋರರನ್ನು ಹೊಂದಿದೆ ಎಂಬ ಬಿಜೆಪಿ (BJP) ಆರೋಪಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, " ಹಲವಾರು ಘೋರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಯುಪಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವ ಪಕ್ಷದ ಆರೋಪ ಇದಾಗಿದೆ" ಎಂದು ಪ್ರತಿಕ್ರಿಯಿಸಿದರು. ತಮ್ಮ ಪಕ್ಷದಲ್ಲಿರುವ ಕ್ರಿಮಿನಲ್ ಗಳು ಹಾಗೂ ಮಾಫಿಯಾ ಗ್ಯಾಂಗ್ ಗಳು ಮಾಡಿರುವ ಕೃತ್ಯವನ್ನು ತೊಳೆಯಲು ಬಿಜೆಪಿ ಯಾವುದಾದರೂ ವಾಶಿಂಗ್ ಮಷೀನ್ ಖರೀದಿಸಿದೆಯೇ ಎನ್ನುವ ಅನುಮಾನವಿದೆ ಎಂದು ಲೇವಡಿ ಮಾಡಿದ್ದಾರೆ.

Uttar Pradesh Election : 230 ರಿಂದ 240 ಸ್ಥಾನ ಖಚಿತ, ಉತ್ತರ ಪ್ರದೇಶದಲ್ಲಿ ಮತ್ತೆ ಕಮಲಕ್ಕೆ ಅಧಿಕಾರ!
“ಬಿಜೆಪಿಯಲ್ಲಿ ಹಲವು ಹಿರಿಯ ನಾಯಕರು ತಮ್ಮ ರಕ್ತ ಮತ್ತು ಬೆವರಿನಿಂದ ಪಕ್ಷವನ್ನು ಬಲಪಡಿಸಿದರು, ಪಕ್ಷಕ್ಕಾಗಿ ಬೆವರು ಸುರಿಸಿದ್ದು ಅವರೇ ಎಂದು ಕೆಲವೊಮ್ಮೆ ಹೇಳುತ್ತಾರೆ. ಆದರೆ ಎಲ್ಲೂ ಇಲ್ಲದ ಆದಿತ್ಯನಾಥ್ (Yogi Adityanath) ಹೇಗೆ ಮುಖ್ಯಮಂತ್ರಿಯಾದರು ಎನ್ನುವುದೇ ಅರ್ಥವಾಗಿಲ್ಲ' ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎನ್ನುವ ಪ್ರಶ್ನೆಗೆ, ಪಕ್ಷ ಯಾವ ಸ್ಥಾನದಲ್ಲಿ ನಾನು ಸ್ಪರ್ಧೆ ಮಾಡಬೇಕು ಎಂದು ಬಯಸಲಿದೆಯೇ ಅದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಅರುಣಾಚಲ ಪ್ರದೇಶದ (Arunachal Pradesh)ಕೆಲವು ಗ್ರಾಮಗಳ ಹೆಸರನ್ನು ಚೀನಾ ಬದಲಾವಣೆ ಮಾಡಿದ್ದನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್, "ನಮ್ಮ ಮುಖ್ಯಮಂತ್ರಿಯಿಂದ ನೆರೆಯ ದೇಶ ಏನನ್ನಾದರೂ ಕಲಿತಿದೆ ಅಂದರೆ ಇದೇ ಅದು. ಇಲ್ಲಿ ನಮ್ಮ ಗ್ರಾಮಗಳ ಹೆಸರನ್ನು ಬದಲಾಯಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ಆರಂಭಿಸಿದ್ದ ಟ್ರೆಂಡ್ ಅನ್ನೇ ಚೀನಾ ಈಗ ಮಾಡುತ್ತಿದೆ' ಎಂದು ಲೇವಡಿ ಮಾಡಿದರು. 

Latest Videos
Follow Us:
Download App:
  • android
  • ios