Uttar Pradesh Election : 230 ರಿಂದ 240 ಸ್ಥಾನ ಖಚಿತ, ಉತ್ತರ ಪ್ರದೇಶದಲ್ಲಿ ಮತ್ತೆ ಕಮಲಕ್ಕೆ ಅಧಿಕಾರ!
ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಬಿಜೆಪಿ
ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿ ಆಗೋದು ಖಚಿತ
ಟೈಮ್ಸ್ ನೌ-ನವಭಾರತ್ ಸಮೀಕ್ಷೆ
ನವದೆಹಲಿ (ಜ. 1): ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ(Uttar Pradesh Assembly election) ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಬಿಜೆಪಿ (BJP)ಸುಲಭವಾಗಿ ಜಯಗಳಿಸಲಿದೆ ಎಂದು ಟೈಮ್ಸ್ ನೌ ಹಾಗೂ ನವ್ ಭಾರತ್ ಸಮೀಕ್ಷೆ ತಿಳಿಸಿದೆ. ಆ ಮೂಲಕ 1985ರ ಬಳಿಕ ಸತತ ಎರಡು ಅವಧಿಗೆ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೊದಲ ನಾಯಕ ಎನ್ನುವ ಖ್ಯಾತಿಗೆ ಯೋಗಿ ಆದಿತ್ಯನಾಥ್ ಭಾಜನರಾಗಲಿದ್ದಾರೆ. ಸಮೀಕ್ಷೆಯ (opinion poll) ಪ್ರಕಾರ 403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 230 ರಿಂದ 249 ಸ್ಥಾನಗಳು ದಕ್ಕಲಿವೆ ಎಂದು ಅಂದಾಜು ಮಾಡಿದೆ.
ಬಿಜೆಪಿಗೆ ಉತ್ತರಪ್ರದೇಶದಲ್ಲಿ ಪ್ರಧಾನ ಎದುರಾಳಿಯಾಗಿರುವ ಸಮಾಜವಾದಿ ಪಕ್ಷವು (Samajwadi Party ) 137 ರಿಂದ 152 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮಾಯಾವತಿ (Mayawati) ನೇತೃತ್ವದ ಬಹುಜನ ಸಮಾಜ ಪಾರ್ಟಿ(Bahujan Samaj Party) ಹಾಗೂ ಕಾಂಗ್ರೆಸ್ (Congress ) ಬಹುತೇಕವಾಗಿ ಅಧಿಕಾರದ ರೇಸ್ ನಿಂದ ಹೊರಗುಳಿದಿದೆ. ಬಿಎಸ್ ಪಿ (BSP) ಮುಂದಿನ ಚುನಾವಣೆಯಲ್ಲಿ 9 ರಿಂದ 14 ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗಿದ್ದು, ಇದು ಕಳೆದ ಮೂರು ದಶಕಗಳಲ್ಲಿಯೇ ಬಿಎಸ್ ಪಿಯ ಅತ್ಯಂತ ಕೆಟ್ಟ ನಿರ್ವಹಣೆ ಎನಿಸಿಕೊಳ್ಳಲಿದೆ. ಹಾಗೂ ಕಾಂಗ್ರೆಸ್ ಪಕ್ಷ 2017ರಂತೆ ಈ ಬಾರಿಯೂ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ.
ಬಿಜೆಪಿ ಮೈತ್ರಿಕೂಟಗಳು ಈ ಬಾರಿ ಶೇ 38.6ರಷ್ಟು ಮತ ಹಂಚಿಕೆಯನ್ನು ಪಡೆದುಕೊಳ್ಳಲಿದೆ. ಇದು 2017ಕ್ಕೆ ಹೋಲಿಸಿದರೆ ಶೇಕಡಾ 3ರಷ್ಟು ಕಡಿಮೆಯಾಗಿದೆ. ಆದರೆ, ಸಮಾಜವಾದಿ ಮೈತ್ರಿಕೂಟ ಪಡೆದುಕೊಳ್ಳುವ ಸರಾಸರಿ ಮತಗಳಲ್ಲಿ ಏರಿಕೆಯಾಗಲಿದ್ದು ಶೆ.34.4ರಷ್ಟು ಮತಗಳನ್ನು ಪಡೆಯಲಿದೆ. ಇದು ಕಳೆದಬಾರಿಯ ಚುನಾವಣೆಗಿತ ಅತ್ಯುತ್ತಮ ನಿರ್ವಹಣೆ ಎನಿಸಲಿದೆ. ಬಿಎಸ್ ಪಿ ಪಕ್ಷದ ಕೆಟ್ಟ ನಿರ್ವಹಣೆಯ ಕಾರಣದಿಂದಾಗಿಯೇ ಬಿಜೆಪಿ ಹಾಗೂ ಎಸ್ ಪಿ ಹೆಚ್ಚಿನ ಶೇಕಡಾವಾರು ಮತಗಳನ್ನು ಪಡೆಯಲಿದೆ. 2017ರಲ್ಲಿ ಶೇ.22.2 ರಷ್ಟು ಮತಗಳನ್ನು ಪಡೆದಿದ್ದ ಬಿಎಸ್ ಪಿ ಈ ಬಾರಿ ಶೇ. 14.1 ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಅಂದಾಜು ಮಾಡಿದೆ.
ಇನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಹಾಲಿ ಅವಧಿಯ ಅಧಿಕಾರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಅತ್ಯಂತ ಪ್ರಬಲ ಅಂಶ ಎಂದು ಪರಿಗಣಿಸಿದ್ದಾರೆ. ರಾಜ್ಯದ ಕಾನೂನು-ಸುವ್ಯವಸ್ಥೆಯ ಕಾರಣದಿಂದಾಗಿ ಯೋಗಿ ಮತ್ತೊಮ್ಮೆ ಅಧಿಕಾರ ಪಡೆದುಕೊಳ್ಳಬಹುದು ಎನ್ನುವ ಅಂದಾಜು ಇದರಿಂದ ಮಾಡಲಾಗಿದೆ. ಇನ್ನೊಂದೆಡೆ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಮಥುರಾ ದೇವಾಲಯದ ವಿಚಾರಗಳು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ನೆರವಾಗಲಿದೆ.
Politics Over Kashi Project: ಅಖಿಲೇಶ್ ಹೇಳಿಕೆಗೆ ಯೋಗಿ ಆದಿತ್ಯನಾಥ್ ತಿರುಗೇಟು
ಹಿನ್ನಡೆಯ ಅಂಶಗಳನ್ನು ನೋಡುವುದಾದರೆ, ಲಖೀಂಪುರ ಖೇರಿ ಘಟನೆ ಹಾಗೂ ಕೋವಿಡ್ 2ನೇ ಅಲೆಯ ವೇಳೆ ಯೋಗಿ ಸರ್ಕಾರ ತೋರಿದ ಕಾರ್ಯಕ್ಷಮತೆ ರಾಜ್ಯದಲ್ಲಿ ಬಿಜೆಪಿ ಇಮೇಜ್ ಗೆ ಧಕ್ಕೆ ತರಲಿದೆ. ಡಿಸೆಂಬರ್ 16 ರಿಂದ 30ರವರೆಗಿನ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, 21480 ಮಂದಿ ಸಮೀಕ್ಷೆಯಲ್ಲಿ ಒಳಗೊಂಡಿದ್ದಾರೆ.
Mathura Vrindavan Work: ಅಯೋಧ್ಯೆಯಂತೆ ಮಥುರಾ, ವೃಂದಾವನದಲ್ಲೂ ದೇಗುಲ ನಿರ್ಮಾಣ: ಯೋಗಿ
ಇದೇ ವೇಳೆ ಭಾನುವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಅಯೋಧ್ಯೆ ಮತ್ತು ವಾರಾಣಸಿಯಂತೆ ಪಶ್ಚಿಮ ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನದಲ್ಲೂ ಭವ್ಯ ದೇಗುಲ ನಿರ್ಮಾಣ ಮಾಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಈ ತಿಂಗಳ ಆರಂಭದಲ್ಲಿ ಮಥುರಾದಲ್ಲಿ ಅಯೋಧ್ಯೆ ಮತ್ತು ಕಾಶಿ ವಿಶ್ವನಾಥದ ಮಾದರಿಯಲ್ಲಿ ಶ್ರೀಕೃಷ್ಣನ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕೆಂದು ಬಯಸಿದ್ದರು. ಮಥುರಾ-ವೃಂದಾವನವನ್ನು ಶ್ರೀಕೃಷ್ಣನ ಜನ್ಮಭೂಮಿ (ಜನ್ಮಭೂಮಿ) ಎಂದು ಪರಿಗಣಿಸಲಾಗಿದೆ.