Asianet Suvarna News Asianet Suvarna News

ಮೈತ್ರಿ ಒಳಗೆ ಕಾಂಗ್ರೆಸ್‌ಗೆ ಸೆಡ್ಡು, ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್!

ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡಿಲ್ಲ. ಇದಕ್ಕೂ ಮೊದಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಸಮಾಜವಾದಿ ಪಾರ್ಟಿ ಇದೀಗ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಸೀಟು ಹಂಚಿಕೆ ಪೂರ್ಣಗೊಂಡರೆ ಮಾತ್ರ ರಾಹುಲ್ ಗಾಂಧಿ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಪಾಲ್ಗೊಳ್ಳುವುದಾಗಿ ಕಂಡೀಷನ್ ಹಾಕಿದ್ದಾರೆ.
 

Samajwadi party announces 2nd list of candidates For Lok sabha Election 2024 ckm
Author
First Published Feb 19, 2024, 6:51 PM IST

ಲಖನೌ(ಫೆ.19) ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇಂಡಿಯಾ ಮೈತ್ರಿ ಕೂಟದಲ್ಲಿ ಬಾಕಿ ಉಳಿದಿರುವ ಪಕ್ಷಗಳಲ್ಲಿ ಸೀಟು ಹಂಚಿಕೆ ಮಾತುಕತೆ ನಿರಂತರಾಗಿ ನಡೆಯುತ್ತಿದೆ. ಆದರೆ ಯಾವುದೇ ರಾಜ್ಯದಲ್ಲಿ ಸೀಟು ಹಂತಿಕೆ ಅಂತಿಮಗೊಂಡಿಲ್ಲ. ಇದರ ನಡುವೆ ಮೈತ್ರಿ ಒಳಗಿನ ಪಕ್ಷಗಳೇ ಅಸಮಾಧಾನ ಹೊರಹಾಕುತ್ತಿದೆ. ಇದೀಗ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಸೀಟು ಹಂಚಿಕೆ ಫೈನಲ್ ಆಗುವ ಮೊದಲೇ ಲೋಕಸಭಾ ಚುನಾವಣಾ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಘಾಜಿಪುರ ಕ್ಷೇತ್ರದಿಂದ ಅಫ್ಜಲ್ ಅನ್ಸಾರಿಯನ್ನು ಎಸ್‌ಪಿ ಕಣಕ್ಕಿಳಿಸಿದೆ. ಇದಕ್ಕೂ ಮೊದಲು 16 ಅಭ್ಯರ್ಥಿಗಳ ಪಟ್ಟಿಯನ್ನು ಎಸ್‌ಪಿ ಬಿಡುಗಡೆ ಮಾಡಿತ್ತು. ಈ ವೇಳೆ ಸಮಾಜವಾಜಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿಗೆ ಮಣಿಪುರಿ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.

ಇದೀಗ 11 ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಾರ್ಟಿ ಬಿಡುಗಡೆ ಮಾಡಿದೆ.  ಮುಝಾಫರ್ ನಗರದಿಂದ ಹರೇಂದ್ರ ಮಲಿಕ್, ಅನೋಲಾ ಕ್ಷೇತ್ರದಿಂದ ನೀರ್ ಮೌರ್ಯ, ಶಹಜನಾಪುರ ಕ್ಷೇತ್ರದಿಂದ ರಾಜೇಶ್ ಕಶ್ಯಪ್, ಹರ್ದೋಯಿ ಕ್ಷೇತ್ರಿಂದ ಉಶಾ ವರ್ಮಾ, ಮಿಶಿರ್ಕಿ ಕ್ಷೇತ್ರದಿಂದ ರಾಂಪಾಲ್ ರಾಜವಂಶಿ, ಮೊಹನಲಾಲ್‌ಗಂಜ್ ಕ್ಷೇತ್ರದಿಂದ ಆರ್‌ಕೆ ಚೌಧರಿ, ಪ್ರತಾಪಗಢ ಕ್ಷೇತ್ರದಿಂದ ಡಾ. ಎಸ್‌ಪಿ ಸಿಂಗ್ ಪಟೇಲ್, ಬರಿಚಾ ಕ್ಷೇತ್ರದಿಂದ ರಮೇಶ್ ಗೌತಮ್,  ಗೊಂಡಾ ಕ್ಷೇತ್ರದಿಂದ ಶ್ರೇಯಾ ವರ್ಮಾ, ಗಾಝಿಪುರ ಕ್ಷೇತ್ರದಿಂದ ಅಫ್ಜಲ್ ಅನ್ಸಾರಿ, ಚಂದೌಲಿ ಕ್ಷೇತ್ರದಿಂದ ವೀರೇಂದ್ರ ಸಿಂಗ್‌ಗೆ ಟಿಕೆಟ್ ನೀಡಿದೆ. 

ಎಲ್ಲರಿಗಿಂತ ಮೊದಲು ಚುನಾವಣಾ ಅಭ್ಯರ್ಥಿ ಪಟ್ಟಿ ಘೋಷಿಸಿದ ಎಸ್‌ಪಿ, ಅಖಿಲೇಶ್ ಪತ್ನಿ ಡಿಂಪಲ್‌ಗೆ ಸ್ಥಾನ!

ಇದಕ್ಕೂ ಮೊದಲು ಎಸ್‌ಪಿ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎಸ್‌ಪಿ, ಇಂಡಿಯಾ ಕೂಟದ ಪ್ರಮುಖ ಅಂಗಪಕ್ಷವಾಗಿದ್ದು, ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನು ಮಿತ್ರಪಕ್ಷ ಕಾಂಗ್ರೆಸ್‌ಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಅದರ ಬೆನ್ನಲ್ಲೇ ಪಟ್ಟಿ ಬಿಡುಗಡೆ ಮಾಡಿದೆ. ಹಾಲಿ ಸಂಸದರಾದ ಎಸ್ಪಿ ನೇತಾರ ಅಖಿಲೇಶ್‌ ಯಾದವ್ ಪತ್ನಿ ಡಿಂಪಲ್‌ ಯಾದವ್‌, ರವಿದಾಸ್‌ ಮೆಹ್ರೋತ್ರಾ ಅವರಿಗೂ ಸ್ಥಾನ ನೀಡಲಾಗಿದೆ. ಡಿಂಪಲ್‌ ಮೈನ್‌ಪುರಿಯಿಂದ, ಶಫೀಕರ್‌ ರೆಹಮಾನ್‌ ಬಾರ್ಕ್‌ ಅವರು ಸಂಣಲ್‌ನಿಂದ, ರವಿದಾಸ್‌ ಮೆಹ್ರೋತ್ರಾ ಅವರು ಲಖನೌ ಸೆಂಟ್ರಲ್‌ನಿಂದ ಸ್ಪರ್ಧಿಸಲಿದ್ದಾರೆ.

ಅಲ್ಲದೇ ಹಾಲಿ ಶಾಸಕರಾದ ಕಟೇಹರಿ ಅವರಿಗೆ ಅಂಬೇಡ್ಕರ್‌ ನಗರ ಜಿಲ್ಲಾ ಕ್ಷೇತ್ರದಿಂದ, ಲಾಲ್ಜಿ ವರ್ಮಾ ಅವರಿಗೆ ಅಂಬೇಡ್ಕರ್‌ ನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಪಕ್ಷದ ಹಿರಿಯ ನಾಯಕ ರಾಮ್‌ಗೋಪಾಲ್‌ ಯಾದವ್‌ ಅವರ ಪುತ್ರ ಅಕ್ಷಯ್‌ ಯಾದವ್‌ ಅವರಿಗೆ ಈ ಬಾರಿ ಫಿರೋಜಾಬಾದ್‌ನಿಂದ ಟಿಕೆಟ್‌ ನೀಡಲಾಗಿದೆ.

 

ಹಿಂದೂ ಧರ್ಮವಲ್ಲ ಅದು ದಂಧೆ, ವಂಚನೆ; ಸಮಾಜವಾದಿ ನಾಯಕನ ಮತ್ತೊಂದು ವಿವಾದ!
 

Follow Us:
Download App:
  • android
  • ios