Asianet Suvarna News Asianet Suvarna News

ನೂಪುರ್‌ ಶರ್ಮ ತಲೆ ಕತ್ತರಿಸುವ ಹೇಳಿಕೆ ನೀಡಿದ್ದ ಸಲ್ಮಾನ್‌ ಚಿಸ್ತಿ ಬಂಧನ!

ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮ ಅವರ ಶಿರಚ್ಛೇಧ ಮಾಡುವ ವ್ಯಕ್ತಿಗೆ ತನ್ನ ಮನೆಯನ್ನು ದಾನ ಮಾಡುವುದಾಗಿ ಘೋಷಣೆ ಮಾಡಿದ್ದ ಅಜ್ಮೀರ್‌ ಶರೀಫ್‌ ದರ್ಗಾದ ಖಾದಿಮ್‌ ಸಲ್ಮಾನ್‌ ಚಿಸ್ತಿಯನ್ನು ಬುಧವಾರ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. 
 

Salman Chishti Khadim of Ajmer Sharif Dargah arrested by Rajasthan Police for beheading remarks against Nupur Sharma san
Author
Bengaluru, First Published Jul 6, 2022, 7:35 PM IST

ಅಜ್ಮೀರ್‌ (ಜುಲೈ 6): ಮೊಹಮದ್‌ ಪೈಗಂಬರ್‌ (prophet mohammad) ಬಗ್ಗೆ ನೂಪುರ್‌ ಶರ್ಮ (Nupur Sharma) ಹೇಳಿದ್ದ ಮಾತಿಗೆ ಪ್ರತಿಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಆಕೆಯ ತಲೆ ಕತ್ತರಿಸುವುದಾಗಿ ಹೇಳಿಕೆಯನ್ನು ನೀಡಿದ್ದ ಅಜ್ಮೀರ್‌ ಶರೀಫ್‌ ದರ್ಗಾದ ಖಾದಿಮ್‌ ಸಲ್ಮಾನ್‌ ಚಿಸ್ತಿಯನ್ನು (Salman Chishti Khadim of Ajmer Sharif Dargah)  ರಾಜಸ್ಥಾನ ಪೊಲೀಸರು (Rajasthan Police) ಬುಧವಾರ ಬಂಧಿಸಿದ್ದಾರೆ.

ನೂಪುರ್‌ ಶರ್ಮ ಅವರ ತಲೆ ತಂದ ವ್ಯಕ್ತಿಗೆ ತನ್ನ ಮನೆಯನ್ನು ದಾನವಾಗಿ ನೀಡುತ್ತೇನೆ ಎಂದು ಹೇಳಿದ್ದ ವಿಡಿಯೋವನ್ನು ಈತ ಸೋಷಿಯಲ್‌ ಮೀಡಿಯಾಗೆ ಬಿಟ್ಟಿದ್ದ. ಇದು ಸಾಕಷ್ಟು ವೈರಲ್ ಆಗಿದ್ದ ಕಾರಣಕ್ಕೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ಆತ ವಿಡಿಯೋ ಮಾಡಿರುವುದು ಮತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀಡಿಯೊದಲ್ಲಿ, ಅಜ್ಮೀರ್ ದರ್ಗಾದ ಖಾದಿಮ್ ಸಲ್ಮಾನ್ ಚಿಸ್ತಿ, "ನಾನು ನನ್ನ ದೇವರು, ತಾಯಿ ಮತ್ತು ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ. ನೂಪುರ್ ಶರ್ಮಾ ಶಿರಚ್ಛೇಧ ಮಾಡುವ ಯಾರಿಗಾದರೂ ನಾನು ಮನೆ ಮತ್ತು ಆಸ್ತಿಯನ್ನು ನೀಡುತ್ತೇನೆ" ಎಂದು ಹೇಳಿದ್ದಾನೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕಾಸ್ ಸಾಂಗ್ವಾನ್ (Vikas Sangwan)ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಸಿದ್ದು, "ಅಜ್ಮೀರ್ ದರ್ಗಾದ ಖಾದಿಮ್‌ ಆದ ಸಲ್ಮಾನ್ ಚಿಶ್ತಿ ಆಕ್ಷೇಪಾರ್ಹ ವೀಡಿಯೊವನ್ನು ಹಂಚಿಕೊಂಡಿದ್ದು ಈ ಕುರಿತಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ಹಿಂದೆಯೂ ಹಲವು ಬಾರಿ ಅವರು ಇಂಥ ಕೃತ್ಯಗಳನ್ನು ಮಾಡಿರುವ ದಾಖಲೆ  ಇದೆ.. ಮನೆಯಲ್ಲಿಯೇ ಅವರನ್ನು ಬಂಧಿಸಲಾಗಿದ್ದು, ವಿಡಿಯೋ ಮಾಡುವ ವೇಳೆ ಅವರು ಮದ್ಯದ ನಶೆಯಲ್ಲಿದ್ದರು' ಎಂದು ತಿಳಿಸಿದ್ದಾರೆ.

ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿ ಇತ್ತೀಚಿನ ವೀಡಿಯೊವನ್ನು ಖಂಡಿಸಿದೆ ಮತ್ತು ದರ್ಗಾವು ಕೋಮು ಸೌಹಾರ್ದತೆಯ ಸ್ಥಳವಾಗಿದೆ ಮತ್ತು ವೀಡಿಯೊದಲ್ಲಿ ಖಾದಿಮ್‌ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ದರ್ಗಾದ ಸಂದೇಶವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

ನೂಪುರ್‌ ಶರ್ಮ ತಲೆ ತಂದವರಿಗೆ ನನ್ನ ಮನೆಯನ್ನ ದಾನ ಮಾಡ್ತೇನೆ

ಜೂನ್ 17 ರಂದು ಅಜ್ಮೀರ್ ದರ್ಗಾದ ಮುಖ್ಯ ದ್ವಾರದಲ್ಲಿ ಮತ್ತೊಂದು ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ, ನಾಲ್ವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ವಿಡಿಯೋ ಬಹಳ ಹಿಂದೆಯೇ ಪೋಸ್ಟ್‌ ಆಗಿತ್ತು. ಆದರೆ, ಉದಯಪುರದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಟೈಲರ್‌ ಕನ್ಹಯ್ಯಲಾಲ್‌ರನ್ನು ಭೀಕರವಾಗಿ ಶಿರಚ್ಛೇಧ ಮಾಡಿದ ಪ್ರಕರಣದ ಬಳಿಕ, ಈ ಬಂಧನಗಳನ್ನು ಮಾಡಲಾಗಿದೆ.

ಉದಯ್‌ಪುರ ಬಳಿಕ ಮಹಾದಲ್ಲೂ ಭಯಾನಕ ಕೃತ್ಯ: ನೂಪುರ್‌ ಬೆಂಬಲಿಸಿದ್ದಕ್ಕೆ ವ್ಯಕ್ತಿಯ ಇರಿದು ಕೊಲೆ

ಇನ್ನೊಂದೆಡೆ, ಅಜ್ಮೀರ್‌ನ ವಕೀಲರೊಬ್ಬರು ತಮಗೆ ಸಾಮಾಜಿಕ ಜಾಲತಾಣದಲ್ಲಿ ಉದಯಪುರದಲ್ಲಿ ಆದ ರೀತಿಯ ಶಿರಚ್ಛೇದ ಪ್ರಕರಣಗಳನ್ನು ಮಾಡುವುದಾಗಿ ಬೆದರಿಕೆ ಬಂದಿದೆ ಎಂದು ಹೇಳಿದ್ದಾರೆ. ವಕೀಲ ಭಾನು ಪ್ರತಾಪ್ ಸಿಂಗ್ ಚೌಹಾಣ್ ಅವರು ನೂಪುರ್ ಶರ್ಮಾ ಅವರ ಹೇಳಿಕೆಗೆ ಸಂಬಂಧಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ, ಅಲ್ಲಿ ಟಿಪ್ಪು ಸುಲ್ತಾನ್ ಕುರಿತು ಚರ್ಚೆ ನಡೆದಿದೆ. ವಿಡಿಯೋ ನೋಡಿದ ನಂತರ ಅವರು ಕಾಮೆಂಟ್ ಹಾಕಿದ್ದಾರೆ. ಮರುದಿನ ಅವರು ಯೂಟ್ಯೂಬ್ ತೆರೆದಾಗ, ಸೋಹೈಲ್ ಸೈಯದ್ ಎಂಬ ವ್ಯಕ್ತಿ ತನ್ನ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿರುವ ನೋಟಿಫಿಕೇಷನ್‌ ನೋಡಿದ್ದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios