ಚಿಲ್ಲರೆ ಅಂಗಡಿಗಳಲ್ಲಿ ಈಗ 150 ರು.ಗೆ ಕೇಜಿಯಂತೆ ಟೊಮೆಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ 90 ರು..ಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.

ನವದೆಹಲಿ(ಜು.14): ಕರ್ನಾಟಕದ ಕೋಲಾರ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಿಂದ ದಿಲ್ಲಿ ಹಾಗೂ ವಿವಿಧ ಉತ್ತರ ಭಾರತದ ನಗರಗಳಿಗೆ ಟೊಮೆಟೋ ಖರೀದಿಸಿ ತರಲಾಗುತ್ತಿದ್ದು, ಇಂದು(ಶುಕ್ರವಾರ) ಇವನ್ನು ರಿಯಾಯ್ತಿ ದರದಲ್ಲಿ- ಅಂದರೆ ಕೇಜಿಗೆ 90 ರು. ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಸಹಕಾರ ಒಕ್ಕೂಟವಾದ ಎನ್‌ಸಿಸಿಎಫ್‌, ಟೊಮೆಟೋಗಳನ್ನು ತನ್ನದೇ ಆದ ಮೊಬೈಲ್‌ ವ್ಯಾನ್‌ಗಳಲ್ಲಿ ಮಾರಲಿದೆ. ಚಿಲ್ಲರೆ ಅಂಗಡಿಗಳಲ್ಲಿ ಈಗ 150 ರು.ಗೆ ಕೇಜಿಯಂತೆ ಟೊಮೆಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ 90 ರು..ಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.

ಕೋಲಾರ: ಟೊಮೆಟೋ ಕಳ್ಳತನ ತಪ್ಪಿಸಲು ಹೊಲದಲ್ಲೇ ಟೆಂಟ್‌ ಹಾಕಿದ ರೈತರು..!

ಟೊಮೆಟೋ ದರ ದೇಶದ ವಿವಿಧ ಭಾಗಗಳಲ್ಲಿ 150 ರು. ದಾಟಿ ತಲೆಬಿಸಿ ಸೃಷ್ಟಿಸಿದ್ದು ಇಲ್ಲಿ ಗಮನಾರ್ಹ.