ಜೆಎನ್‌ಯು ಎಲೆಕ್ಷನ್‌ನಲ್ಲಿ ಕೇಸರಿ ಕಹಳೆ, ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಮುನ್ನಡೆ!

ದೇಶದ ರಾಜಕೀಯದಲ್ಲೂ ಸಖತ್‌ ಸದ್ದು ಮಾಡುವ ಜವಹರಲಾಲ್‌ ನೆಹರು ಯುನಿವರ್ಸಿಟಿ ಸ್ಟೂಡೆಂಟ್‌ ಯೂನಿಯನ್‌ ಎಲೆಕ್ಷನ್‌ನಲ್ಲಿ ಈ ಬಾರಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕೇಸರಿ ಕಹಳೆ ಮೊಳಗಿಸಿದೆ.
 

Saffron waved in JNU ABVP ahead on all four seat competition for VP and President post san

ನವದೆಹಲಿ (ಮಾ.24): ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಜವಹರಲಾಲ್‌ ನೆಹರು ಯುನಿವರ್ಸಿಟಿಯ ವಿದ್ಯಾರ್ಥಿ ಸಂಘದ ಚುನಾವಣೆಯ ಫಲಿತಾಂಶ ಇಂದು ಸಂಜೆ ಘೋಷಣೆಯಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಶೇ. 72ರಷ್ಟು ಮತದಾನ ನಡೆದಿದೆ. ಇದು ಕಳೆದ 12 ವರ್ಷಗಳಲ್ಲೇ ಅಧಿಕವಾಗಿದೆ. ಈ ಬಾರಿ ಜೆಎನ್‌ಯು ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಸಂಜೆ ಉತ್ತರ ಸಿಗಲಿದೆ. ಆದರೆ, ಈವರೆಗಿನ ಮತ ಎಣಿಕೆಯಲ್ಲಿ ಜೆಎನ್‌ಯುನಲ್ಲಿ ಚುನಾವಣೆ ನಡೆದ ಎಲ್ಲಾ ನಾಲ್ಕೂ ಸ್ಥಾನಗಳಲ್ಲಿ ಎಡಪಕ್ಷಗಳ ಅಭ್ಯರ್ಥಿಯ ವಿರುದ್ಧ ಎಬಿವಿಪಿ ಭಾರಿ ಮುನ್ನಡೆ ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರವೇ ಎಡರಂಗದ ಅಭ್ಯರ್ಥಿ ಕೊಂಚ ಪೈಪೋಟಿ ನೀಡಿದ್ದಾರೆ. ಇಲ್ಲಿಯವರೆಗಿನ 1421 ಮತ ಪತ್ರಗಳ ಎಣಿಕೆಯ ಪ್ರಕಾರ ಎಬಿವಿಪಿಯ ಅಭ್ಯರ್ಥಿಗಳು ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದಾರೆ. ಒಟ್ಟಾರೆ ಚುನಾವಣೆಯಲ್ಲಿ 5600ಕ್ಕೂ ಅಧಿಕ ಮತ ಎಣಿಕೆ ನಡೆಯಬೇಕಿದೆ.

ಅಧ್ಯಕ್ಷ ಸ್ಥಾನಕ್ಕೆ (2600 ಮತ ಎಣಿಕೆ) ಸ್ಪರ್ಧೆ ಮಾಡಿದ್ದ ಎಬಿವಿಪಿಯ ಉಮೇಶ್‌ ಚಂದ್ರ ಅಜ್ಮೀರಾ 850 ಮತಗಳನ್ನು ಪಡೆದುಕೊಂಡಿದ್ದರೆ, ಎಡಪಕ್ಷದ ಅಭ್ಯರ್ಥಿ ಧನಂಜಯ್‌ 844 ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಎನ್‌ಎಸ್‌ಯುಈನ ಜುನೈದ್‌ ರಾಜಾ 59 ಮತಗಳನ್ನು ಪಡೆದಿದ್ದರೆ, ಬಾಪ್ಸಾದ ವಿಶ್ವಜಿತ್‌ ಮಿಂಜಿ 60 ಮತಗಳನ್ನು ಪಡೆದಿದ್ದಾರೆ.

ಇನ್ನು ಜಂಟಿ ಕಾರ್ಯದರ್ಶಿ ಸ್ಥಾನದ 1421 ಮತಗಳ ಪೈಕಿ ಎಬಿವಿಪಿಯ ಗೋವಿಂದ್‌ ದಂಗಿ 734 ಮತಗಳನ್ನು ಪಡೆದುಕೊಂಡಿದ್ದು ಗೆಲುವು ಕಾಣುವುದು ಬಹುತೇಕ ಖಚಿತವಾಗಿದೆ. ಎಡಪಕ್ಷ ಮೊಹಮದ್‌ ಸಾಜಿದ್‌ 448 ಮತ ಪಡೆದಿದ್ದರೆ, ಬಾಪ್ಸಾದ ರೂಪಕ್‌ ಕುಮಾರ್‌ ಸಿಂಗ್‌ 90 ಮತ ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿ ಫೈಟ್‌ನಲ್ಲಿ ಎಬಿವಲಿಯ ಅರ್ಜುನ್‌ ಆನಂದ್‌ 695 ಮತಗಳೊಂದಿಗೆ ಮುನ್ನಡೆ ಕಂಡಿದ್ದಾರೆ. ನಂತರದ ಸ್ಥಾನದಲ್ಲಿ ಬಾಪ್ಸಾ ಬೆಂಬಲಿತ ಎಡಪಕ್ಷದ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಇದ್ದು 487 ಮತಗಳನ್ನು ಪಡೆದುಕೊಂಡಿದ್ದಾರೆ. ಎನ್‌ಎಸ್‌ಯುಇನ ಅಭ್ಯರ್ಥಿ ಫರೀನ್‌ ಜೈದಿ 131 ಮತ ಪಡೆದಿದ್ದರೆ, 70 ನೋಟಾ ಮತಗಳು ಬಿದ್ದಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ತೀವ್ರ ಪೈಪೋಟಿ ಎದುರಾಗಿದೆ. ಪ್ರಸ್ತುತ ಎಬಿವಿಪಿಯ ದೀಪಿಕಾ ಶರ್ಮ 462 ಮತಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಅವರ ಸನಿಹದಲ್ಲಿ ಸ್ವತಂತತ್ರ ಅಭ್ಯರ್ಥಿ ಅಂಕುರ್‌ ರೈ ಇದ್ದಾರೆ. ಇವರಿಗೆ 429 ಮತಗಳು ಬಿದ್ದಿವೆ. ಇನ್ನು ಎಡಪಕ್ಷದ ಅವಜಿತ್‌ ಘೋಷ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದರು 386 ಮತ ಪಡೆದುಕೊಂಡಿದ್ದಾರೆ. ಬಾಪ್ಸಾದ ಮೊಹಮದ್‌ ಅನಾಸ್‌ 141 ಮತ ಪಡೆದಿದ್ದಾರೆ.

ಕಳೆದ ಶುಕ್ರವಾರ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲೂ ಜೈ ಭೀಮ್‌, ಭಾರತ್‌ ಮಾತಾ ಕೀ ಜೈ ಹಾಗೂ ಲಾಲ್ ಸಲಾಮ್‌ ಘೋಷಣೆಗಳನ್ನು ಕೂಗಲಾಗಿತ್ತು. ಜೆಎನ್‌ಯುನ ಸೆಂಟ್ರಲ್‌ ಪ್ಯಾನೆಲ್‌ಗೆ ಒಟ್ಟು 19 ಮಂದಿ ಸ್ಪರ್ಧೆ ಮಾಡಿದ್ದರು. ಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ 9 ಮಂದಿ ಸ್ಪರ್ಧಿಸಿದ್ದರು. ಸೆಂಟ್ರಲ್‌ ಸ್ಟೂಡೆಂಟ್‌ ಪ್ಯಾನೆಲ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಯುನೈಟೆಡ್ ಲೆಫ್ಟ್ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (DSF), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (AISF) ಅನ್ನು ಒಳಗೊಂಡಿದೆ. ಎಡಪಕ್ಷಗಳು ಅಧ್ಯಕ್ಷ ಸ್ಥಾನಕ್ಕೆ ಧನಂಜಯ್, ಉಪಾಧ್ಯಕ್ಷ ಸ್ಥಾನಕ್ಕೆ ಅವಿಜಿತ್ ಘೋಷ್ ಮತ್ತು ಜಂಟಿ ಕಾರ್ಯದರ್ಶಿ ಮೊಹಮ್ಮದ್ ಸಾಜಿದ್ ಅವರನ್ನು ಕಣಕ್ಕಿಳಿಸಿದೆ.
 

Latest Videos
Follow Us:
Download App:
  • android
  • ios