Asianet Suvarna News Asianet Suvarna News

ಬಣ್ಣ ಬದಲಾಯಿಸ್ತಿದೆ ಅಯೋಧ್ಯೆ DM ನಿವಾಸದ ಬೋರ್ಡ್‌: ಕೇಸರಿ, ಹಸಿರಿನ ಬಳಿಕ ಕೆಂಪು!

* ಉತ್ತರ ಪ್ರದೇಶದಲ್ಲಿ ಚುನಾವಣಾ ರಂಗು

* ಚುನಾವಣೆ ನಡುವೆ ಅಯೋಧ್ಯೆ ಡಿಎಂ ಹೊಸ ವಿವಾದ

* ಕೇಸರಿ, ಹಸಿರು ಬಣ್ಣದ ಬಳಿಕ ಕೆಂಪು ಬಣ್ಣಕ್ಕೆ ತಿರುಗಿತು ಮನೆ ಬೋರ್ಡ್‌

Saffron sign board of Ayodhya DM house changed to green and red pod
Author
Bangalore, First Published Mar 3, 2022, 5:35 PM IST | Last Updated Mar 3, 2022, 5:36 PM IST

ಅಯೋಧ್ಯೆ(ಮಾ.03): ಯುಪಿಯ ಅಯೋಧ್ಯೆಯಲ್ಲಿರುವ ಡಿಎಂ (Ayodya DM) ನಿವಾಸದ ಬೋರ್ಡ್‌ನ ಬಣ್ಣವನ್ನು 24 ಗಂಟೆಗಳಲ್ಲಿ ಮತ್ತೆ ಬದಲಾಯಿಸಲಾಗಿದೆ. ಈ ಮೊದಲು ಈ ಹಲಗೆಯ ಬಣ್ಣ ಕೇಸರಿಯಾಗಿದ್ದು, ಬುಧವಾರ ಹಸಿರು ಬಣ್ಣಕ್ಕೆ ಬದಲಾಗಿತ್ತು. ನಂತರ ಈ ವಿಚಾರ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತು. ಈಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಋಷಿಮುನಿಗಳು, ಸಂತರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಚರ್ಚೆಗಳ ನಡುವೆ, ಡಿಎಂ ಪಿಡಬ್ಲ್ಯೂಡಿಗೆ ಛೀಮಾರಿ ಹಾಕಿದ್ದಾರೆ, ಬಳಿಕ ಅದರ ಬಣ್ಣ ಬದಲಾಯಿಸಲಾಗಿದೆ.

ವಾಗ್ದಂಡನೆಯ ನಂತರ ಬೋರ್ಡ್‌ ಬಣ್ಣವನ್ನು ಬದಲು

ವಿಷಯ ಬೆಳಕಿಗೆ ಬಂದ ನಂತರ ಡಿಎಂ ನಿತೀಶ್ ಕುಮಾರ್ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಅದರ ನಂತರ ಇಲಾಖೆ ಮತ್ತೆ ಈ ಬೋರ್ಡ್‌ನ ಬಣ್ಣವನ್ನು ಬದಲಾಯಿಸಲಾಗಿದೆ. PWD ಯ ಅತಿಥಿ ಗೃಹವು ಅಯೋಧ್ಯೆಯ DM ಅವರ ತಾತ್ಕಾಲಿಕ ನಿವಾಸವಾಗಿದೆ. ಬಣ್ಣ ಬದಲಾವಣೆ ಬಳಿಕ ಆಡಳಿತದ ಈ ನಿಲುವಿನ ಬಗ್ಗೆ ಅಯೋಧ್ಯೆಯ ಸಂತರು ಸಂತಸ ವ್ಯಕ್ತಪಡಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಯೋಗಿ 'ಬುಲ್ಡೋಜರ್' ವಿಡಿಯೋ ವೈರಲ್!

ಬಿಜೆಪಿ ವಿರುದ್ಧ ಷಡ್ಯಂತ್ರ ಎಂದ ಹನುಮಂತನಗರದ ಪೂಜಾರಿ

ಬೋರ್ಡ್‌ನ ಬಣ್ಣ ಹಸಿರು ಆಗಿರುವುದರಿಂದ ಇದು ಬಿಜೆಪಿ ವಿರುದ್ಧದ ಷಡ್ಯಂತ್ರ ಎಂದು ಹನುಮಂತನಗರದ ಪೂಜಾರಿ ಹೇಳಿದ್ದಾರೆ. ಇದರೊಂದಿಗೆ, ಅಯೋಧ್ಯೆಯ ಡಿಎಂ  ಮತ್ತು ಇತರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು.

ಬೋರ್ಡ್‌ನ ಬಣ್ಣವನ್ನು ಬದಲಾಯಿಸುವುದು ಅಧಿಕಾರದ ಶಕ್ತಿಯ ಬದಲಾವಣೆಯ ಸಂಕೇತ

ಡಿಎಂ ಮನೆಯ ಬಣ್ಣ ಬದಲಾವಣೆಯನ್ನು ಜನರು ಅಧಿಕಾರ ಬದಲಾವಣೆಯಾಗಿ ಪರಿಗಣಿಸಿದ್ದಾರೆ. ಯುಪಿಗೆ ಸಿಎಂ ಯೋಗಿ ಬಂದ ನಂತರ ಡಿಎಂ ನಿವಾಸದ ಬೋರ್ಡ್ ಕೇಸರಿಮಯವಾಗಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಹಸಿರು ಬೋರ್ಡ್ ಬಂದಾಗ, ಜನರು ರಾಜಕೀಯದಲ್ಲಿ ಅನೇಕ ಬಗೆಯ ಅರ್ಥ ಕಂಡುಕೊಳ್ಳಲಾರಂಭಿಸಿದ್ದಾರೆ. ಇದು ಅಧಿಕಾರಿಗಳ ಗೊಂದಲಕ್ಕೆ ಸಾಕ್ಷಿ ಎನ್ನುತ್ತಾರೆ ಜನರು. ಅನೇಕ ಅಧಿಕಾರಿಗಳು ಅಧಿಕಾರ ಬದಲಾಗುತ್ತಿದ್ದಂತೆ ತಾವೂ ಬದಲಾಗುತ್ತಾರೆ ಎಂದು ಜನರು ಹೇಳಿದ್ದಾರೆ.

ದಶಕದ ಬಳಿಕ ಅರ್ಧ ಜನಸಂಖ್ಯೆ ಮೇಲೆ ಪಕ್ಷಗಳ ಭರವಸೆ, ಅಯೋಧ್ಯೆಯಲ್ಲಿ ಒಟ್ಟು 8 ಮಹಿಳಾ ಅಭ್ಯರ್ಥಿಗಳು!

ಫೋಟೋ ವೈರಲ್ 

ಡಿಎಂ ನಿವಾಸದ ಬೋರ್ಡ್‌ನ ಬಣ್ಣ ಬದಲಾಯಿಸುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚುನಾವಣೆಗೆ ಮುನ್ನವೇ ಅನುಜ್ ಕುಮಾರ್ ಝಾ ಅವರನ್ನು ಅಯೋಧ್ಯೆಯಿಂದ ತೆಗೆದುಹಾಕಲಾಯಿತು ಎಂಬುವುದು ಉಲ್ಲೇಖನೀಯ. ಅವರು ಕೇಸರಿ ಪಾಳಯಕ್ಕೆ ತುಂಬಾ ಹತ್ತಿರದವರೆಂದು ಹೇಳಲಾಗುತ್ತಿತ್ತು. 

Latest Videos
Follow Us:
Download App:
  • android
  • ios