ಮೊದಲ ಬಾರಿ ಕೇಸರಿ ಬಣ್ಣದ ವಂದೇ ಭಾರತ್ ರೈಲು ಓಡಾಟ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಂದೇಭಾರತ್ ಯೋಜನೆಯಲ್ಲಿ ಹೊಸದಾಗಿ ತಯಾರಾಗಿರುವ ಕೇಸರಿ ಬಣ್ಣದ ರೈಲನ್ನು ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಶನಿವಾರ ಓಡಿಸಲಾಗಿದೆ.
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಂದೇಭಾರತ್ ಯೋಜನೆಯಲ್ಲಿ ಹೊಸದಾಗಿ ತಯಾರಾಗಿರುವ ಕೇಸರಿ ಬಣ್ಣದ ರೈಲನ್ನು ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಶನಿವಾರ ಓಡಿಸಲಾಗಿದೆ. ಇದಕ್ಕೂ ಮೊದಲು ಕೇಸರಿ ಬಣ್ಣದಲ್ಲಿ ರೈಲು ಉತ್ಪಾದನೆ ಮಾಡುತ್ತಿರುವ ವಿಡಿಯೋವನ್ನು ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದರು.
ರಾಷ್ಟ್ರಧ್ವಜವನ್ನು ಆಧಾರವಾಗಿಟ್ಟುಕೊಂಡು ಈ ರೈಲಿಗೆ ಹೊಸ ಬಣ್ಣವನ್ನು ಹಚ್ಚಲಾಗಿದೆ. ಇದೇ ಮೊದಲ ಬಾರಿಗೆ ಈ ರೈಲು ಚೆನ್ನೈ ಕೋಚ್ ಫ್ಯಾಕ್ಟರಿಯ ಹೊರ ಭಾಗದಲ್ಲಿ ಪ್ರಾಯೋಗಿಕ ಚಾಲನೆಗೆ ಒಳಪಟ್ಟಿದೆ. ಶೀಘ್ರದಲ್ಲೇ ಈ ರೈಲನ್ನು ನಿಗದಿತ ಮಾರ್ಗದಲ್ಲಿ ಓಡಿಸಲಾಗುವುದು ಎಂದು ರೈಲ್ವೆ ಹೇಳಿದೆ. ಪ್ರಸ್ತುತ 25 ವಂದೇ ಭಾರತ್ ರೈಲುಗಳು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇವುಗಳೆಲ್ಲವೂ ನೀಲಿ ಮತ್ತು ಬಿಳಿ ಬಣ್ಣವನ್ನು ಹೊಂದಿವೆ.