Asianet Suvarna News Asianet Suvarna News

Save Soil ಅಭಿಯಾನಕ್ಕೆ ಬೆಂಬಲ, ವಿದ್ಯುತ್ ದೀಪಗಳಲ್ಲಿ ಕಂಗೊಳಿಸಿದ ಮುಂಬೈ BMC!

  • ಮಣ್ಣು ಉಳಿಸಲು ಸದ್ಗುರುವಿನಿಂದ ವಿಶ್ವ ಅಭಿಯಾನ
  • ಅಭಿಯಾನಕ್ಕೆ ವಿಶೇಷ ರೀತಿಯಲ್ಲಿ ಮುಂಬೈ BMC ಬೆಂಬಲ
  • ಮುಂದಿನ 100 ದಿನ  ಸೇವ್ ಸಾಯಿಲ್, ಗಮನಸೆಳೆದ ಜಾಹೀರಾತು
Sadhguru Save Soil campaign Iconic BMC Headquarters Light Up Colors to Support  Movement ckm
Author
Bengaluru, First Published May 28, 2022, 5:23 PM IST

ಮುಂಬೈ(ಮೇ.28) ದೇಶ ಹಾಗೂ ವಿದೇಶಗಳಲ್ಲಿ ಸದ್ಗುರು ಜಗ್ಗಿ ವಾಸುದೇವ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಅಭಿಯಾನಕ್ಕಾಗಿ ಸದ್ಗುರು 100 ದಿನಗಳ ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ವಿಶ್ವನಾಯಕರು ಸದ್ಗುರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.ಇದೀಗ ಮಣ್ಣು ಉಳಿಸಿ ಅಭಿಯಾನಕ್ಕೆ ಮುಂಬೈನ ಐತಿಹಾಸಿಕ ಬೃಹತ್ ಮುಂಬೈ ಪಾಲಿಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದೆ. 

ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮಣ್ಣಿನ ಮಹತ್ವ ಹಾಗೂ ಮುಂದಿನ ಪೀಳಿಗೆಗೆ ನಾವು ಮಾಡಬೇಕಾದ ಕರ್ತವ್ಯ ಕುರಿತು ಈ ಅಭಿಯಾನದ ಮೂಲಕ ಸಂದೇಶ ಸಾರಲಾಗುತ್ತಿದೆ. ವಿಶ್ವದ 2.1 ಶತಕಟೋ ಜನರು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಇದೀಗ ಮುಂಬೈ ಮಹಾ ನಗರ ಪಾಲಿಕೆ ಕಟ್ಟಡ ಮೇಲೆ ಮಣ್ಣು ಉಳಿಸಿ ಅಭಿಯಾನದ ಲಾಂಛನ, ಅಭಿಯಾನದ ಬಣ್ಣದಲ್ಲಿ ಲೈಟಿಂಗ್ ಮಾಡಿ ಬೆಂಬಲ ಸೂಚಿಸಿದೆ.

Save Soil Movement: ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!

 ನಯಾಗರಾ ಜಲಪಾತ, ಜಿನೀವಾದಲ್ಲಿ ಜೆಟ್ ಡಿ'ಯು ಕಾರಂಜಿ ಮತ್ತು ಮಾಂಟ್ರಿಯಲ್ ಒಲಂಪಿಕ್ ಸ್ಟೇಡಿಯಂ ನೀಲಿ ಮತ್ತು ಹಸಿರು ಬಣ್ಣದಲ್ಲಿ ಬೆಳಕು ಚೆಲ್ಲುವ ಮೂಲಕ ಮಣ್ಣು ಉಳಿಸಿ ಆಂದೋಲನಕ್ಕೆ  ಬೆಂಬಲ ಸೂಚಿಸಿತ್ತು. ಈ ಸಾಲಿಗೆ BMC ಕೂಡ ಸೇರಿಕೊಂಡಿದೆ. 

Sadhguru Save Soil campaign Iconic BMC Headquarters Light Up Colors to Support  Movement ckm

ವಿಶ್ವದ ಶೇಕಡಾ 52 ರಷ್ಟು ಕೃಷಿ ಭೂಮಿ ಅವನತಿಯಲ್ಲಿ ಸಾಗುತ್ತಿದೆ. ಮಣ್ಣಿನ ಸವಕಳಿ, ಫಲವತ್ತತೆ ನಾಶ, ರಾಸಾಯನಿಕಗಳ ಬಳಕೆ ಸೇರಿದಂತೆ ಹಲವು ಕಾರಣಗಳಿಂದ  ಮಣ್ಣು ನಾಶವಾಗುತ್ತಿದೆ. ಪ್ರಾಕೃತಿಕ ವಿಕೋಪಗಳು, ಹವಾಮಾನ ಬದಲಾವಣೆ ಸೇರಿದಂತೆ ಹಲವು ಅನಾಹುತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಮಣ್ಣನ್ನು ಉಳಿಸುವುದ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸದ್ಗುರು ಹಮ್ಮಿಕೊಂಡಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ವಿಶ್ವದ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ.

ಮುಂದಿನ 100 ದಿನ ಸೇವ್ ಸಾಯಿಲ್
ಸೇವ್ ಸಾಯಿಲ್ ಕುರಿತು ಜಾಹೀರಾತೊಂದು ಭಾರಿ ಸದ್ದು ಮಾಡುತ್ತಿದೆ. ಮುಂದಿನ ನೂರು ದಿನ, ಗುಡ್ ಮಾರ್ನಿಂಗ್, ಗುಡ್ ನೈಟ್ ಇಲ್ಲ. ಎಲ್ಲರೂ ಸೇವ್ ಸಾಯಿಲ್ ಎಂದು ಹೇಳಿ ಅನ್ನೋ ಜಾಹೀರಾತು ಸಾಮಾಜಿಕ ಜಾಲತಾಣಧಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Save Soil ಆಂದೋಲನ, ಲಂಡನ್‌ನಿಂದ ಭಾರತಕ್ಕೆ 100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು!

ಮಣ್ಣು ರಕ್ಷಣೆಗೆ ಕಾರ‍್ಯ ನಿರ್ವಹಿಸಿ: ವಿಶ್ವ ನಾಯಕರಿಗೆ ಸದ್ಗುರು ಮನವಿ
‘ಮಣ್ಣಿನ ಸಾವಯವ ಅಂಶವನ್ನು ಹೆಚ್ಚಿಸುವ ಕೆಲಸಕ್ಕೆ ಯಾರೂ ವಿರೋಧಿಸುವುದಿಲ್ಲ’ ಎಂದು ಹೇಳಿರುವ ಈಶಾ ಫೌಂಡೇಶನ್ ಸ್ಥಾಪಕ ಸದ್ಗುರು ಅವರು, ‘ಮಣ್ಣು ರಕ್ಷಣೆಯತ್ತ ಕೆಲಸ ಮಾಡಬೇಕು’ ಎಂದು ವಿಶ್ವ ನಾಯಕದಲ್ಲಿ ಮನವಿ ಮಾಡಿದರು.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಫಲವತ್ತಾದ ಮಣ್ಣು ಶ್ರೀಮಂತ ಬದುಕಿನ ಮೂಲಾಧಾರ. ಆರೋಗ್ಯಕರ ಮಣ್ಣು ಮತ್ತು ಆರೋಗ್ಯಕರ ಬದುಕು ಬಿಡಿಸಿಕೊಳ್ಳಲಾಗದ ಬಂಧವನ್ನು ಹೊಂದಿವೆ’ ಎಂದು ಹೇಳಿದರು.

‘ಆಹಾರ ಭದ್ರತೆಯ ದೃಷ್ಟಿಯಿಂದ ತಮ್ಮ ಭೂಮಿಗಳಲ್ಲಿ ವ್ಯವಸಾಯ ಮಾಡುವ ರೈತರಿಗೆ ಮಣ್ಣಿನಿಂದ ಪ್ರತಿಫಲ ದೊರಕುವಂತೆ ಮಾಡುವುದು ತುರ್ತಿನ ಕೆಲಸವಾಗಿದೆ. ಇದರಿಂದಾಗಿ ರೈತರು ನಗರಗಳತ್ತ ಗುಳೆ ಹೋಗುವುದನ್ನು ತಡೆಗಟ್ಟಬಹುದು. ಭೂಮಿಯನ್ನು ಹೆಚ್ಚು ಕಾಲದವರೆಗೆ ರಕ್ಷಿಸಬಹುದು. 50 ಎಕರೆ ಪ್ರದೇಶದಲ್ಲಿ 1 ಎಕರೆ ಅರಣ್ಯವನ್ನು ಬೆಳೆಸುವುದರಿಂದ ಪರಿಸರ ಸ್ನೇಹಿ ವ್ಯವಸ್ಥೆಯನ್ನು ರೂಪಿಸಬಹುದು’ ಎಂದು ಹೇಳಿದರು.

ಪ್ರಸ್ತುತ ಸದ್ಗುರು ಅವರು ಮಣ್ಣು ಉಳಿಸಿ ಅಭಿಯಾನಕ್ಕಾಗಿ 100 ದಿನಗಳ ಕಾಲ 30 ಸಾವಿರ ಕಿ.ಮೀ ದೂರದ ಬೈಕ್‌ ಪ್ರಯಾಣವನ್ನು ಕೈಗೊಂಡಿದ್ದಾರೆ. 

Follow Us:
Download App:
  • android
  • ios