ಶಿರೋಮಣಿ ಅಕಾಲಿದಳ ಅಧ್ಯಕ್ಷನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ದಾಳಿ ನಡೆಸುವ ವಿಡಿಯೋ ವೈರಲ್ ಆಗಿದ್ದು, ಇದೀಗ ಪೊಲೀಸರು ಕಾಂಗ್ರೆಸ್ ಎಂಎಲ್ಎ ಹಾಗೂ ಆತನ ಪುತ್ರನ ಮೇಲೆ FIR ದಾಖಲಾಗಿದೆ. ಈ ಕುರಿತ ವಿವರ ಇಲ್ಲಿದೆ 

ಪಂಜಾಬ್(ಫೆ.02): ಶಿರೋಮಣಿ ಆಕಾಲಿದಳ ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾಂಗ್ರೆಸ್ ಎಂಎಲ್ಎ ರಮಿಂದರ್ ಸಿಂಗ್ ಅವ್ಲಾ ಹಾಗೂ ಆತನ ಪುತ್ರ ಹಾಗೂ ಇತರ 60 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ATM ಹಲ್ಲೆಕೋರನಿಗೆ ಕೊನೆಗೂ ಶಿಕ್ಷೆ ಪ್ರಕಟ.. ಘೋರ ಅಪರಾಧಕ್ಕೆ ಎಷ್ಟು ವರ್ಷ?..

ಜಲಾಲ್‌ಬಾದ್ ಮುನ್ಸಿಪಲ್ ಚುನಾವಣೆ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಶಿರೋಮಣಿ ಅಕಾಲಿದಳ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ನಡೆದಿತ್ತು ಪರಿಣಾಮ ಕಾಂಗ್ರೆಸ್ ನಾಯಕ ರಮಿಂದರ್ ಸಿಂಗ್ ಅವ್ಲಾ ಹಾಗೂ ಬೆಂಬಲಿಗರು ನೇರವಾಗಿ ಸುಖ್ಬೀರ್ ಬಾದಲ್ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿದ್ದ ಸುಖ್ಬೀರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಆರಂಭದಲ್ಲಿ ಕಲ್ಲುಗಳಿಂದ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಹಾಗೂ ಸೆಂಗಡಿಗರು, ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸುಖ್ಬೀರ್ ಸಿಂಗ್ ಬಾದಲ್ ರಕ್ಷಿಸಲು ಬಂದ ಶಿರೋಮಣಿ ಅಕಾಲಿದಳ ಕಾರ್ಯಕರ್ತರಿಗೆ ಗುಂಡು ತಗುಲಿದೆ. ಹೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅದೃಷ್ಠವಶಾತ್ ಸುಖ್ಬೀರ್ ಸಿಂಗ್ ಬಾದಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Scroll to load tweet…

ಸುಖ್ಬೀರ್ ಸಿಂಗ್ ಬಾದಲ್ ಮಾಧ್ಯಮ ವಕ್ತಾರ ಜಂಗ್‌ವೀರ್ ಸಿಂಗ್, ಕಾಂಗ್ರೆಸ್ ಮೇಲೆ ನೇರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಘಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಇದ್ದರೂ, ಕಾರ್ಯಪ್ರವೃತ್ತರಾಗಿಲ್ಲ ಎಂದು ಆರೋಪಿಸಿದ್ದಾರೆ.