ಜೈಪುರ(ಜು. 14)  ಸಚಿನ್ ಪೈಲಟ್ ಒಂದು ವೇಳೆ ಬಿಜೆಪಿ ಸೇರ್ಪಡೆಯಾಗುವುದಾದರೆ ಸ್ವಾಗತಿಸುತ್ತೇವೆ ಎಂದು ಬಿಜೆಪಿ ನಾಯಕ ಪಿಪಿ ಚೌಧರಿ ಹೇಳಿದ್ದಾರೆ.   ರಾಜಸ್ಥಾನದ ರಾಜಕಾರಣದ ನಿರಂತರ ಬದಲಾವಣೆಗಳ ನಂತರ ನಾಯಕರ ಹೇಳಿಕೆಗಳು ಹರಿದು ಬರುತ್ತಿವೆ.

ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಸ್ಥಾನದಿಂದ ರಾಜ್ಯ ಕಾಂಗ್ರೆಸ್ ಜವಾಬ್ದಾರಿಯಿಂದ ಹೊರಗೆ ಇಡಲಾಗಿದೆ.  ಸಚಿನ್ ಪೈಲಟ್ ಏನೂ ಮಾತನಾಡುತ್ತಿಲ್ಲ, ಈ ಎಲ್ಲ ಘಟನಾವಳಿಗಳ ಹಿಂದೆ ಬಿಜೆಪಿ ಇದೆ ಎಂದು ರಾಜಸ್ಥಾನ ಸಿಎಂ  ಅಶೋಕ್ ಗೆಲ್ಲೋಟ್ ಆರೋಪ ಮಾಡಿಕೊಂಡೇ ಬಂದಿದ್ದಾರೆ.

ಸತ್ಯಕ್ಕೆ ಎಂದೂ ಸೋಲಿಲ್ಲ, ಸಚಿನ್ ಟ್ವೀಟ್ ಹಿಂದೆ ನೂರಾರು ಪ್ರಶ್ನೆ

ಮಧ್ಯ ಪ್ರದೇಶದಲ್ಲಿ ಹೇಗೆ ನಮ್ಮ ಸರ್ಕಾರ ಉರುಳುವಂತೆ ಮಾಡಿದರೋ ಅದೇ ರೀತಿ ಇಲ್ಲಿಯೂ ಮಾಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿಯೂ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ರಾಜಸ್ಥಾನದ ರಾಜಕೀಯ ಬದಲಾವಣೆಗಳು ಇಡೀ ದೇಶದದಲ್ಲಿ ಪರ ವಿರೋಧದ ಚರ್ಚೆ ಹುಟ್ಟುಹಾಕಿವೆ. ಕಾಂಗ್ರೆಸ್ ಯುವನಾಯಕರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿರುವುದು ಪುರಾತನ ಪಕ್ಷಕ್ಕೆ ನುಂಗಲಾರದ ಹೊಡೆತ ನೀಡುತ್ತಲೇ ಇದೆ.