20 ದಿನಗಳಲ್ಲೇ ಶಬರಿಮಲೆಯಲ್ಲಿ 60 ಕೋಟಿ ಮೌಲ್ಯದ ಅಪ್ಪಂ, ಅರವಣ ಮಾರಾಟ!

ಅಯ್ಯಪ್ಪ ಭಕ್ತರಿಗೆ ಪೋಸ್ಟ್ ಮೂಲಕವೂ ಅಪ್ಪಂ ಮತ್ತು ಅರವಣ ಖರೀದಿಸಲು ದೇವಸ್ವಂ ಬೋರ್ಡ್ ವ್ಯವಸ್ಥೆ ಮಾಡಿದೆ.

Sabarimala Witnesses Record Sales of Appam Aravana Over 60 Crores in 20 Days san

ಶಬರಿಮಲೆ (ಡಿ.6): ಮಂಡಲಕಾಲ ಆರಂಭವಾಗಿ 20 ದಿನಗಳಲ್ಲಿ ಶಬರಿಮಲೆಯಲ್ಲಿ ಅರವಣ, ಅಪ್ಪಂ ಮಾರಾಟದಲ್ಲಿ ದಾಖಲೆ ಏರಿಕೆಯಾಗಿದೆ. ನವೆಂಬರ್ 16 ರಿಂದ ಡಿಸೆಂಬರ್ 5 ರವರೆಗೆ 60,54,95,040 ರೂಪಾಯಿ ಮೌಲ್ಯದ ಅಪ್ಪಂ, ಅರವಣ ಮಾರಾಟವಾಗಿದೆ ಎಂದು ದೇವಸ್ವಂ ಬೋರ್ಡ್ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 42,20,15,585 ರೂಪಾಯಿ ಮಾರಾಟವಾಗಿತ್ತು.  ಈ ವರ್ಷ ಡಿಸೆಂಬರ್ 5 ರವರೆಗೆ ಅರವಣ ಮಾರಾಟದಿಂದ 54,37,00,500 ರೂಪಾಯಿ ಮತ್ತು ಅಪ್ಪಂ ಮಾರಾಟದಿಂದ 6,17,94,540 ರೂಪಾಯಿ ಬಂದಿದೆ. 18,34,79,455 ರೂಪಾಯಿ ಈ ಬಾರಿ ಹೆಚ್ಚಳವಾಗಿದೆ. ಮೊದಲ ಹನ್ನೆರಡು ದಿನಗಳಲ್ಲಿ ಅಪ್ಪಂ ಮಾರಾಟ 35,32,85,55 ರೂಪಾಯಿ ಮತ್ತು ಅರವಣ ಮಾರಾಟ 28,93,86,310 ರೂಪಾಯಿ ಆಗಿತ್ತು.

ಸನ್ನಿಧಾನದ ಆಳಿ ಸಮೀಪದ 10 ಕೌಂಟರ್‌ಗಳು ಮತ್ತು ಮಣಿಕಂಠನ ಸನ್ನಿಧಿಯಲ್ಲಿರುವ ಎಂಟು ಕೌಂಟರ್‌ಗಳ ಮೂಲಕ ಅಪ್ಪಂ, ಅರವಣ ಮಾರಾಟ ನಡೆಯುತ್ತಿದೆ. ಅಯ್ಯಪ್ಪ ಭಕ್ತರಿಗೆ ಪೋಸ್ಟ್ ಮೂಲಕವೂ ಅಪ್ಪಂ ಮತ್ತು ಅರವಣ ಖರೀದಿಸಲು ದೇವಸ್ವಂ ಬೋರ್ಡ್ ವ್ಯವಸ್ಥೆ ಮಾಡಿದೆ.

ಭಕ್ತರ ದಾಹ ಮತ್ತು ಆಯಾಸ ನಿವಾರಣೆಗೆ ದೇವಸ್ವಂ ಬೋರ್ಡ್ ಪೂರೈಸುತ್ತಿರುವ ಚುಕ್ಕು ನೀರು ಈಗ ಪೈಪ್ ಮೂಲಕ ಹದಿನೆಂಟು ಮೆಟ್ಟಿಲುಗಳಿಂದ ಶಬರಿ ಪೀಠದವರೆಗೆ ಲಭ್ಯವಾಗಲಿದೆ. ಇದಕ್ಕಾಗಿ ಶಬರಿ ಪೀಠದವರೆಗೆ ದೇವಸ್ವಂ ಬೋರ್ಡ್ ಪೈಪ್‌ಲೈನ್ ಅಳವಡಿಸಿದೆ. ಶರಂಕುತಿಯಲ್ಲಿರುವ ಬಾಯ್ಲರ್ ಪ್ಲಾಂಟ್‌ನಿಂದ ನೇರವಾಗಿ ಭಕ್ತರ ಪಥದಲ್ಲಿ ಪೈಪ್ ಮೂಲಕ ಚುಕ್ಕು ನೀರು ಪೂರೈಸಲಾಗುತ್ತಿದೆ.

Mangaluru: ಕೆಟ್ಟಿದ್ದ ಫ್ರಿಜ್‌ ಸರಿ ಮಾಡಲು ಬಂದು ಶೀಲ ಹಾಳು ಮಾಡಿದ ಶಫೀನ್‌

ಅಡುಗೆ ಅನಿಲ ಬಳಸಿಯೇ ಈ ಪ್ರದೇಶಗಳಲ್ಲಿ ಮೊದಲು ಚುಕ್ಕು ನೀರು ಪೂರೈಸಲಾಗುತ್ತಿತ್ತು. ಚುಕ್ಕು ನೀರನ್ನು ಪೈಪ್‌ನಲ್ಲಿ ಪೂರೈಸುವುದರಿಂದ ಅಡುಗೆ ಅನಿಲ ವೆಚ್ಚ ಮತ್ತು ಸಿಬ್ಬಂದಿ ವೆಚ್ಚ ಉಳಿತಾಯವಾಗಲಿದೆ. ಉರಕ್ಕುಳಿ ನೀಲಿಮಲ ವರೆಗೆ 73 ಕೇಂದ್ರಗಳಲ್ಲಿ ಚುಕ್ಕು ನೀರು ಪೂರೈಸಲಾಗುತ್ತಿದೆ. ಚುಕ್ಕು, ಪತಿಮುಖ, ರಾಮಚ್ಚ ಎಲ್ಲವನ್ನೂ ಸೇರಿಸಿ ನೀರು ತಯಾರಿಸಲಾಗುತ್ತಿದೆ.

ಹುಟ್ಟಿಸಿದ ಮಕ್ಕಳಿಂದಲೇ ನೆಮ್ಮದಿ ಹಾಳು, ತಂದೆ ಆತ್ಮಹತ್ಯೆ; ಮೃತದೇಹದ ಎದುರೂ ಮಕ್ಕಳ ಜಗಳ!

ಶಬರಿಮಲೆಯ ಅಬ್ಸರ್ವರ್‌ಗಳಾಗಿರುವ ಜಿ. ಗೋಪಕುಮಾರ್, ರಮೇಶ್ ಕೃಷ್ಣನ್, ವಿಶೇಷ ಅಧಿಕಾರಿ ಜಿ.ಪಿ. ಪ್ರವೀಣ್, ಎ.ಎಸ್.ಓ. ಗೋಪಕುಮಾರ್ ಜಿ. ನಾಯರ್ ನೇತೃತ್ವದಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಚುಕ್ಕು ನೀರು ವಿಭಾಗದಲ್ಲಿನ ತಾತ್ಕಾಲಿಕ ಸಿಬ್ಬಂದಿಯ ಸೇವೆಯನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ ಎಂದು ದೇವಸ್ವಂ ಬೋರ್ಡ್ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios