ಹುಟ್ಟಿಸಿದ ಮಕ್ಕಳಿಂದಲೇ ನೆಮ್ಮದಿ ಹಾಳು, ತಂದೆ ಆತ್ಮಹತ್ಯೆ; ಮೃತದೇಹದ ಎದುರೂ ಮಕ್ಕಳ ಜಗಳ!
ಕಾರವಾರದಲ್ಲಿ ಮಕ್ಕಳ ಕಾಟಕ್ಕೆ ಬೇಸತ್ತು ಹಿರಿಯ ಜೀವವೊಂದು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಮೃತದೇಹದ ಎದುರೂ ಮಕ್ಕಳು ಜಗಳವಾಡಿಕೊಂಡಿದ್ದು ಆಘಾತಕಾರಿ ಘಟನೆಯಾಗಿದೆ.
ಕಾರವಾರ (ಡಿ.6): ಹೆತ್ತವರು ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಹಾಡಿದ ಸೂಪರ್ ಹಿಟ್ ಹಾಡನ್ನು ಇಲ್ಲಿ ಹೇಳಲೇಬೇಕು. 'ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು, ಮಕ್ಕಳೆ ಇರದವರು. ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು..' ಅನ್ನೋ ಹಾಡದು. ಪ್ರತಿ ಸಾಲಿನಲ್ಲಿ ಮಕ್ಕಳಿಂದ ಹೆತ್ತವರಿಗೆ ಆಗೋ ನೋವುಗಳನ್ನು ತಿಳಿಸಲಾಗಿತ್ತು. ಬಹುಶಃ ಕಾರವಾರದ ಈ ಹಿರಿಜೀವ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಓದಿದರೆ, ಈ ಹಾಡು ನೆನಪಾಗದೇ ಇರದು. ಕಾರವಾರದಲ್ಲಿ ಮಕ್ಕಳ ಕಾಟಕ್ಕೆ ಬೇಸತ್ತು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ಹಿರಿಯ ಜೀವವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಂಕರಮಠ ರಸ್ತೆಯ ಮನೋಹರ್ ಅಪಾರ್ಟಮೆಂಟ್‌ನ ನಾಲ್ಕನೇ ಮಹಡಿಯಿಂದ ಹಾರಿ ಸಾವು ಕಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಶಂಕರಮಠ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು 76 ವರ್ಷದ ಕೃಷ್ಣಾನಂದ ಶಿವರಾಮ ಪಾವಸ್ಕರ ಎಂದು ಗುರುತಿಸಲಾಗಿದೆ.
ಮೃತದೇಹದ ಎದುರೂ ಮಕ್ಕಳ ಜಗಳ: ಇನ್ನು ತಂದೆಯ ಮೃತ ದೇಹದ ಮುಂದೆ ಮಕ್ಕಳಿಬ್ಬರು ಜಗಳವಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಎಂದು ಹಿರಿಯ ಮಗ ಸಂಜಯ ಪಾವಸ್ಕರ್ ಆರೋಪ ಮಾಡಿದ್ದಾರೆ. ನಮ್ಮ ಅಪ್ಪನಿಗೆ ಇಷ್ಟು ದೊಡ್ಡ ಕಟ್ಟಡದ ಮೇಲೆ ಹೋಗೊಕೆ ಆಗಲ್ಲ. ನಮ್ಮ ಅಪ್ಪ ಒಬ್ಬರೇ ಅಷ್ಟು ಎತ್ತರಕ್ಕೆ ಹೋಗಲು ಸಾಧ್ಯವಿಲ್ಲ. ಇದು ಸರಿಯಾದ ತನಿಖೆ ಆಗಬೇಕು, ಇಲ್ಲದೇ ಇದ್ದಲ್ಲಿ ನಾವು ಹೆಣ ತೆಗೆದುಕೊಂಡು ಹೋಗೋಕೆ ಬಿಡಲ್ಲ ಅಂತಾ ದೊಡ್ಡ ಮಗ ಸಂಜಯ ಪಾವಸ್ಕರ ಪಟ್ಟು ಹಿಡಿದಿದ್ದಾರೆ.
Dhruv Jatti-Amogha Shettar: ಕೋಟಿ ಕೋಟಿ ಇದ್ದರೂ ಮಾಜಿ ಸಿಎಂ ಕುಟುಂಬದ ನಡುವೆ 'ವಚನ ಮಾಂಗಲ್ಯ'ಬಂಧ!
ಮೂವರು ಮಕ್ಕಳನ್ನು ಹೊಂದಿರುವ ಕೃಷ್ಣಾನಂದಗೆ ಮಕ್ಕಳಿಂದ ನೆಮ್ಮದಿ ಹಾಳಾಗಿತ್ತು. ಕಳೆದ ಕೆಲವು ದಿನಗಳಿಂದ ಮೂವರು ಮಕ್ಕಳು ಜಗಳ ಮಾಡಿಕೊಂಡಿದ್ದರು. ಕಾರವಾರ ನಗರದಲ್ಲೇ ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು. ಮೂವರು ಮಕ್ಕಳಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಕೆಲವು ದಿನದ ಹಿಂದೆ ತಾಯಿಯನ್ನು ಮಾತಾಡಿಸಲು ಬಂದಾಗ ಹಿರಿಯ ಮಗನಿಗೆ ಮಾತಾಡೋಕೆ ಕೊಡದ ಕಿರಿಯ ಮಗ. ಕಳೆದ ಕೆಲವು ತಿಂಗಳಿನಿಂದ ಕಿರಿಯ ಮಗನ ಮನೆಯಲ್ಲೇ ಕೃಷ್ಣಾನಂದ ವಾಸವಾಗಿದ್ದರು ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನ ಲಿಫ್ಟ್ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ.
Mangaluru: ಕೆಟ್ಟಿದ್ದ ಫ್ರಿಜ್ ಸರಿ ಮಾಡಲು ಬಂದು ಶೀಲ ಹಾಳು ಮಾಡಿದ ಶಫೀನ್