ಶಬರಿಮಲೆ (ಅ.30): ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಾರದ ದಿನಗಳಲ್ಲಿ 1000 ಹಾಗೂ ಶನಿವಾರ, ಭಾನುವಾರಗಳಂದು 2000 ಮಂದಿಗೆ ಮಾತ್ರ ಶಬರಿಮಲೆ ಅಯ್ಯಪ್ಪ ದರ್ಶನ ಅವಕಾಶ ನೀಡಬೇಕು ಎಂದು ಕೇರಳ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. 

ಮಂದಲ- ಮಕರ ಜ್ಯೋತಿ ಯಾತ್ರೆಯ ಸಂದರ್ಭದಲ್ಲಿ ಅಯ್ಯಪ್ಪ ದರ್ಶನಕ್ಕೆ ಬರುವವರಿಗೆ ಕೋವಿಡ್‌-19 ಇಲ್ಲ ಎಂಬ ವರದಿಯನ್ನು ಕಡ್ಡಾಯಗೊಳಿಸಬೇಕು. 

ಶಬರಿಮಲೆ ಪ್ರವೇಶಕ್ಕೆ ಕಂಡೀಶನ್ : ಯಾರಿಗಿಲ್ಲ ಪ್ರವೇಶ

ಅನ್ಯರಾಜ್ಯದಿಂದ ಬರುವವರು ಇಂತಹ ಪ್ರಮಾಣಪತ್ರ ತಂದಿದ್ದರೂ ನೀಲಕ್ಕಲ್‌ನಲ್ಲಿ ಮತ್ತೊಮ್ಮೆ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. 60 ವರ್ಷ ಮೇಲ್ಪಟ್ಟವರು ತಮಗೆ ಯಾವುದೇ ಕಾಯಿಲೆ ಇಲ್ಲ ಎಂಬ ವರದಿಯನ್ನೂ ತರುವಂತಿರಬೇಕು ಎಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ.