ಶಬರಿಮಲೆ(ಜೂ.11): ಕೊರೋನಾ ಅಟ್ಟಹಾಸ ಎಲ್ಲರ ನಿದ್ದೆಗೆಡಿಸಿದೆ. ಸದ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಸಂಬಂಧ ಕೇರಳ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ತಿಂಗಳು ಅಯ್ಯಪ್ಪನ ದೇಗುಲ ತೆರೆಯುವುದಿಲ್ಲ ಎಂದು ದೇವಸ್ವಂ ಸಚಿವ ಕದಾಕಂಪಲ್ಲಿ ಸುರೇಂದ್ರನ್ ಈ ಮಾಹಿತಿ ನೀಡಿದ್ದಾರೆ. ಅಲ್ಲದೇ ಜೂನ್ 19 ರಂದು ಆರಮಭವಾಗಬೇಕಿದ್ದ ಶಬರಿಮಲೆ ದೇಗುಲದ ಜಾತ್ರೆಯನ್ನೂ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ದೇಗುಲ ಆಡಳಿತ ಮಂಡಳಿ ಜೊತೆ ನಡೆದ ಮಾತುಕತೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ನಿರ್ಧಾರ

ಎರಡು ದಿನಗಳ ಹಿಂದಷ್ಟೇ ದೇಗುಲದ ಅರ್ಚಕ ಆಡಳಿತ ಮಂಡಳಿಗೆ ಪತ್ರವೊಂದನ್ನು ಬರೆದು, ಮಂದಿರ ತೆರೆಯದಂತೆ ಮನವಿ ಮಾಡಿದ್ದರು. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ಮನವಿ ಮಾಡಲಾಗಿತ್ತು. ಹೀಗಿದ್ದರೂ ದೇಗುಲ ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಅಲ್ಲದೇ ಜೂನ್ ಹದಿನಾಲ್ಕರಿಂದ ದರ್ಶನ ಆರಮಭವಾಗುತ್ತದೆ ಎಂದೂ ಹೇಳಲಾಗಿತ್ತು. ಆದರೀಗ ಆಡಳಿತ ಮಂಡಳಿ ಹಾಗೂ ಸರ್ಕಾರದ ಮಟ್ಟದ ಸಭೆ ನಡೆದಿದ್ದು, ಈ ತಿಂಗಳು ದೇಗುಲ ಸ್ವಾರ ತೆರೆಯದಂತೆ ನಿರ್ಧರಿಸಲಾಗಿದೆ.