ಈ ಬಾರಿ ಶಬರಿಮಲೆ ಯಾತ್ರೆ ಶಾಂತಿಯುತ: 156 ಕೋಟಿ ಆದಾಯ!
ಈ ಬಾರಿ ಶಬರಿಮಲೆ ಯಾತ್ರೆ ಶಾಂತಿಯುತ: 156 ಕೋಟಿ ಆದಾಯ| ವಾರ್ಷಿಕ ಯಾತ್ರೆಯ 41 ದಿನಗಳ ಮೊದಲ ಚರಣ ಶುಕ್ರವಾರ ಮಂಡಲ ಪೂಜೆಯೊಂದಿಗೆ ಅಂತ್ಯ
ಶಬರಿಮಲೆ[ಡಿ.27]: ಶಬರಿಮಲೆ ಅಯ್ಯಪ್ಪಸ್ವಾಮಿ ವಾರ್ಷಿಕ ಯಾತ್ರೆಯ 41 ದಿನಗಳ ಮೊದಲ ಚರಣ ಶುಕ್ರವಾರ ಮಂಡಲ ಪೂಜೆಯೊಂದಿಗೆ ಅಂತ್ಯಗೊಳ್ಳಲಿದೆ.
ನ.16ರಿಂದ ಶಬರಿಮಲೆ ಯಾತ್ರೆ ಆರಂಭವಾಗಿತ್ತು. ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ್ದರಿಂದ ಕಳೆದ ವರ್ಷ ಸಂಪ್ರದಾಯ ವಾದಿಗಳಿಂದ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಶಬರಿಮಲೆಯಲ್ಲಿ ಈ ವರ್ಷ ಯಾವುದೇ ಪ್ರತಿಭಟನೆಗಳು ನಡೆಯದೇ ಯಾತ್ರೆ ಶಾಂತಿಯುತವಾಗಿತ್ತು.
ಶಾಂತಿಯು ವಾತಾವರಣ ನೆಲೆಸಿದ್ದರಿಂದ ಈ ಬಾರಿ ಶಬರಿಮಲೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿದ್ದು, ದೇವಾಲಯಕ್ಕೆ 156 ಕೋಟಿ ರು. ಆದಾಯ ಸಂಗ್ರಹವಾಗಿದೆ.