ನವದೆಹಲಿ[ಮಾ.04]: ಸ್ಪೂರ್ತಿದಾಯಕ ಸಾಧನೆ ಮಾಡಿದ ಮಹಿಳೆಯರ ಸಾಧನೆಯನ್ನು ಹ್ಯಾಶ್‌ ಟ್ಯಾಗ್‌ ಬಳಸಿ ಅವರ ಸಾಧನೆ ಬಗ್ಗೆ ಹಂಚಿಕೊಳ್ಳಿ. ಅವರಿಗೆ ಮಾ.8ರ ಮಹಿಳಾ ದಿನದಂದು ತಮ್ಮ ಟ್ವೀಟರ್‌ ಖಾತೆ ಬಳಸುವ ಅವಕಾಶ ನೀಡುವುದಾಗಿ ಹೇಳಿರುವ ಪ್ರಧಾನಿ ಮೋದಿ ಟ್ವೀಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೋಷಿಯಲ್ ಮೀಡಿಯಾ ಬಿಡುತ್ತಿರುವುದ್ಯಾಕೆ? ಕಾರಣ ಬಹಿರಂಗಪಡಿಸಿದ ಮೋದಿ

ಈವರೆಗೆ 1.15 ಲಕ್ಷಕ್ಕೂ ಅಧಿಕ ಮಂದಿ ಹ್ಯಾಶ್‌ ಟ್ಯಾಗ್‌ ಮೂಲಕ ಪ್ರತಿಕ್ರಿಯಿಸಿ ಹಲವು ಸಾಧಕಿಯರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹಾಗೂ ತಮ್ಮ ಇಸ್ಫೋಸಿಸ್‌ ಫೌಂಡೇಶನ್‌ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಸುಧಾ ಮೂರ್ತಿ ಅವರ ಹೆಸರನ್ನು ನೆಟ್ಟಿಗರು ಶಿಫಾರಸ್ಸು ಮಾಡಿದ್ದಾರೆ.

"

ಹಾಗಾಗಿ ಮಹಿಳಾ ದಿನದಂದು ಪ್ರಧಾನಿ ಮೋದಿಯವರ ಟ್ವಿಟರ್‌ ಖಾತೆ ಬಳಸುವ ಅವಕಾಶ ಸಿಗಲಿದೆಯಾ ಎಂಬ ಕುತೂಹಲ ಗರಿಗೆದರಿದೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ