Asianet Suvarna News Asianet Suvarna News

ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್; ದಿನಾಂಕ ನಿಗದಿ!

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಮಾತುಕತೆ, ಒಪ್ಪಂದ ಕಾರ್ಯಗಳಿಗೆ ಮರುಜೀವ ನೀಡಲಾಗುತ್ತಿದೆ. ಇದೀಗ ವಿದೇಶಾಂಗ ಇಲಾಖೆ ನೂತನ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಯನ್ನು ಖಚಿತಪಡಿಸಿದೆ.

Russian President Vladimir Putin is expected to visit India in October says MEA
Author
Bengaluru, First Published Aug 7, 2020, 3:56 PM IST

ನವದೆಹಲಿ(ಆ.07): ಭಾರತ ವಿದೇಶಾಂಗ ಇಲಾಖೆ ಮಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಾತುಕತೆ, ಬೇಟಿ ಕುರಿತು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೇ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದೆ. 

ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!.

ಉನ್ನತ ಮಟ್ಟದ ಮಾತುಕತೆ ಹಾಗೂ ದ್ವಿಪಕ್ಷೀಯ ಒಪ್ಪಂದಗಳಿಗಾಗಿ ಪುಟಿನ್ ಭಾರತಕ್ಕೆ ಬೇಟಿ ನೀಡಲಿದ್ದಾರೆ. ಈ ವೇಳೆ ಪ್ರಮುಖ ವಿಚಾರಗಳು ಚರ್ಚೆಯಾಗಲಿದೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಹೇಳಿದ್ದಾರೆ. SCO ಹಾಗೂ BRICS ವಿದೇಶಾಂಗ ಸಚಿವರ ಭೇಟಿ, NSA ಭೇಟಿ, ರಕ್ಷಣಾ ಸಚಿವರ ಭೇಟಿ ಸೇರಿದಂತೆ ಮುಂಬರುವ ಮಹತ್ವದ ಮಾತುಕತೆ ಕುರಿತ ವೇಳಾಪಟ್ಟಿಯನ್ನು ಭಾರತ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲ ಹಾಗೂ ರಷ್ಯಾ ವಿದೇಶಾಂಗ ಸಚಿವಾಲದಯ ಜೊತೆ ಮಾತುಕತೆ ನಡೆಸಿದೆ. ಬಳಿಕ ಅಕ್ಟೋಬರ್ ತಿಂಗಳಲ್ಲಿ ಪುಟಿನ್ ಭಾರತಕ್ಕೆ ಬೇಟಿ ನೀಡುವ ಕುರಿತು ದಿನಾಂಕ ನಿಗದಿ ಪಡಿಸಿದೆ. ಕೊರೋನಾ  ವೈರಸ್ ಕಾರಣ ಪುಟಿನ್ ಆಗಮನವನ್ನು ಮುಂದೂಡಲಾಗಿತ್ತು. ಇದೀಗ ಎಲ್ಲಾ ಮುಂಜಾಗ್ರತ ಕ್ರಮಗಳೊಂದಿಗೆ ಮತ್ತೆ ವಿದೇಶಾಂಗ ಇಲಾಖೆ ಕಾರ್ಯಚಟುವಟಿಕೆಗಳು ಆರಂಭಗೊಂಡಿದೆ ಎಂದು ಶ್ರಿವಾತ್ಸವ್ ಹೇಳಿದ್ದಾರೆ.

Follow Us:
Download App:
  • android
  • ios