ಸುಖೋಯ್‌ ಯುದ್ಧ ವಿಮಾನದ ರಾಡಾರ್‌ಗೆ ಹಂಪಿ ವಿರೂಪಾಕ್ಷನ ಹೆಸರು

ಪಾಕಿಸ್ತಾನದ ಮೇಲೆ ನಡೆದ ಬಾಲಾಕೋಟ್‌ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಸು-30ಎಂಕೆಐ ಯುದ್ಧ ವಿಮಾನಕ್ಕೆ ಹೊಸ ಸ್ವದೇಶಿ ರಾಡಾರ್‌ಗಳನ್ನು ಅಳವಡಿಸಲು ಭಾರತೀಯ ಸೇನೆ ನಿರ್ಧರಿಸಿದೆ

Russian made Su 30MKI fighter jet radars are named after the world famous Hampi Virupaksha God Virupaksha akb

ನವದೆಹಲಿ: ಪಾಕಿಸ್ತಾನದ ಮೇಲೆ ನಡೆದ ಬಾಲಾಕೋಟ್‌ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಸು-30ಎಂಕೆಐ ಯುದ್ಧ ವಿಮಾನಕ್ಕೆ ಹೊಸ ಸ್ವದೇಶಿ ರಾಡಾರ್‌ಗಳನ್ನು ಅಳವಡಿಸಲು ಭಾರತೀಯ ಸೇನೆ ನಿರ್ಧರಿಸಿದೆ. ವಿಶೇಷವೆಂದರೆ ಈ ರಾಡಾರ್‌ಗಳಿಗೆ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವರ ಹೆಸರನ್ನು ಇಡಲಾಗಿದೆ. ಅಂದರೆ ರಾಡಾರ್‌ಗೆ ವಿರೂಪಾಕ್ಷ ಎಂದು ಹೆಸರಿಸಲಾಗಿದೆ.

ವಿರೂಪಾಕ್ಷ ರಾಡಾರ್‌(Virupaksha radar), ಎಇಎಸ್‌ಎ ತಂತ್ರಜ್ಞಾನ (AESA technology) ಅಂದರೆ ರಾಡಾರ್‌ಗಳ ಆ್ಯಂಟೆನಾಗಳ ದಿಕ್ಕು ಬದಲಿಸದೆಯೇ ಎಲ್ಲಾ ದಿಕ್ಕುಗಳಿಗೂ ರೇಡಿಯೋ ಕಿರಣಗಳನ್ನು ಹಾಯಿಸುವ ಮೂಲಕ ತನ್ನತ್ತ ತೂರಿ ಬರುವ ಅಸ್ತ್ರಗಳನ್ನು ಪತ್ತೆ ಹಚ್ಚವ ಸಾಮರ್ಥ್ಯ ಹೊಂದಿದೆ. ಇದು ಹಿಂದಿನ ರಾಡಾರ್‌ಗಿಂತ ಹೆಚ್ಚು ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಜಾಮಿಂಗ್‌ ಮಾಡುವಲ್ಲಿ ಹೆಚ್ಚು ಪ್ರತಿರೋಧವನ್ನು ತೋರುತ್ತದೆ ಎಂದು ಇದನ್ನು ಅಭಿವೃದ್ಧಿಪಡಿಸಿದ ಡಿಆರ್‌ಡಿಒ (DRDO) ತಿಳಿಸಿದೆ.

ಮೊದಲ ಹಂತದಲ್ಲಿ 84 ಯುದ್ಧವಿಮಾನಗಳಿಗೆ (warplanes) ವಿರೂಪಾಕ್ಷ ರಾಡಾರ್‌ ಅಳವಡಿಸಲು ಯೋಜಿಸಲಾಗಿದ್ದು, ಇದಕ್ಕೆ 65 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಬ್ರಹ್ಮೋಸ್‌ ಕ್ಷಿಪಣಿಯನ್ನು (BrahMos missile) ಈಗಾಗಲೇ ವಿಯೆಟ್ನಾಮ್‌ಗೆ ರಫ್ತು ಮಾಡಿರುವ ಭಾರತವು ಮುಂದೆ ಈ ರೀತಿಯ ಯುದ್ಧ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ರಫ್ತು ಮಾಡಲು ಯೋಜನೆ ರೂಪಿಸಿದೆ.

Latest Videos
Follow Us:
Download App:
  • android
  • ios