ಉಕ್ರೇನ್ ನಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹ ಭಾರತಕ್ಕೆ ಸೋಮವಾರ ಬೆಂಗಳೂರಿಗೆ ಆಗಮಿಸಲಿದೆ ಮೃತದೇಹ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿರುವ ಪಾರ್ಥೀವ ಶರೀರ  

ನವದೆಹಲಿ(ಮಾ.18): ರಷ್ಯಾ ದಾಳಿಯಿಂದ ಉಕ್ರೇನ್‌ಲ್ಲಿ ಮೃತಪಟ್ಟ ರಾಣಿಬೆನ್ನೂರು ತಾಲೂಕಿನ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಕರಪ್ಪ ಮೃತದೇಹ ಸೋಮವಾರ(ಮಾ.21) ಭಾರತಕ್ಕೆ ಆಗಮಿಸಲಿದೆ. ಮುಂಜಾನೆ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥೀವ ಶರೀರ ಆಗಮಿಸಲಿದೆ. ಈ ಕುರಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಯುದ್ಹಧ ಕಾರಣ ಹಲವು ಅಡೆ ತಡೆ ಎದುರಾಗಿತ್ತು. ಆದರೆ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಮಾರ್ಚ್ 1 ರಂದು ಉಕ್ರೇನ್‌ನ ಖಾರ್ಕೀವ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ನವೀನ್ ಶೇಕರಪ್ಪ ಮೃತಪಟ್ಟಿದ್ದರು. ಯುದ್ಧದಿಂದಾಗಿ ಮೃತದೇಹ ತರಲು ಸಾಧ್ಯವಾಗಿರಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮಪಟ್ಟಿತ್ತು. ದುರ್ಘಟನೆ ನಡೆದ ಖಾರ್ಕೀವ್‌ನಲ್ಲಿ ಈಗಿನ ಪರಿಸ್ಥಿತಿಯ ಕಾರಣ ಅಲ್ಲಿಗೆ ಯಾವುದೇ ವಿಮಾನಗಳು ತೆರಳುತ್ತಿಲ್ಲ. ಜೊತೆಗೆ ಸಮೀಪದಲ್ಲೂ ಎಲ್ಲೂ ಏರ್‌ಸ್ಟ್ರಿಪ್‌ ಕೂಡಾ ಇಲ್ಲ. ಹೀಗಾಗಿ ನವೀನ್‌ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ವಿಳಂಬವಾಗಿತ್ತು. ಭಾರತದ ಸತತ ಪ್ರಯತ್ನದಿಂದ ಇದೀಗ ನವೀನ್ ಮೃತದೇಹ ಭಾರತಕ್ಕೆ ಆಗಮಿಸುತ್ತಿದೆ.

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ

ನವೀನ್ ಮೃತದೇಹ ಭಾರತಕ್ಕೆ ತರಲು ಸೂಚಿಸಿದ್ದ ಮೋದಿ
ಉಕ್ರೇನ್ ಪರಿಸ್ಥಿತಿ ಹಾಗೂ ಭಾರತೀಯ ರಕ್ಷಣೆ ಕುರಿತು ನಡೆಸಿದ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನವೀನ್‌ ಶೇಖರಪ್ಪ ಅವರ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ಸಂಪುಟ ಸಭೆಯಲ್ಲಿ ಮೋದಿ ಅವರು ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟನಿರ್ದೇಶನ ನೀಡಿದ್ದರು.

ಘಟನೆ ವಿವರ:
ಖಾರ್ಕೀ​ವ್‌ ರಾಷ್ಟ್ರೀಯ ವೈದ್ಯ​ಕೀಯ ಕಾಲೇ​ಜಿ​ನಲ್ಲಿ ಎಂಬಿ​ಬಿ​ಎಸ್‌ ಓದು​ತ್ತಿ​ರುವ ನವೀನ್‌ ಯುದ್ಧದ ಹಿನ್ನೆ​ಲೆ​ಯಲ್ಲಿ ಕಳೆದ ಕೆಲ ದಿನ​ಗ​ಳಿಂದ ಬಂಕ​ರ್‌ವೊಂದ​ರಲ್ಲಿ ಆಶ್ರಯ ಪಡೆ​ದಿ​ದ್ದರು. ಈ ವೇಳೆ ಸಂಗ್ರ​ಹಿ​ಸಿ​ಟ್ಟು​ಕೊಂಡಿದ್ದ ಆಹಾ​ರ​ವೆಲ್ಲ ಖಾಲಿ​ಯಾಗಿ ಪರ​ದಾಟ ಅನು​ಭ​ವಿ​ಸು​ತ್ತಿದ್ದ ಹಿನ್ನೆಲೆ​ಯಲ್ಲಿ ಆಹಾರ ವಸ್ತು​ಗ​ಳನ್ನು ಖರೀ​ದಿ​ಸಲು ಬಂಕರ್‌ ಸಮೀ​ಪದ ದಿನಸಿ ಅಂಗ​ಡಿ​ಯೊಂದಕ್ಕೆ ತೆರ​ಳಿ​ದ್ದರು. ಇದೇ ಸಂದ​ರ್ಭ​ದಲ್ಲಿ ರಷ್ಯಾ ಪಡೆ​ಗಳು ನಡೆ​ಸಿದ ಶೆಲ್‌ ದಾಳಿಗೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾ​ರೆ.

ಉಕ್ರೇನಿನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ, ಸಿಎಂ ಬೊಮ್ಮಾಯಿ ಮಾಹಿತಿ

‘ನಿನ್ನೆ ರಾತ್ರಿ ಮಲಗಲು ತಡವಾಗಿತ್ತು. ಬಂಕ​ರ್‌​ನಲ್ಲಿ ನೀರು, ಆಹಾರ ಏನೂ ಇರಲಿಲ್ಲ. ಅದಕ್ಕಾಗಿ ಬೆಳಗ್ಗೆ 6 ಗಂಟೆ (ಸ್ಥ​ಳೀಯ ಕಾಲ​ಮಾ​ನ) ಸುಮಾರಿಗೇ ಎದ್ದಿದ್ದ ನವೀನ್‌ ಏನಾದರೂ ಸ್ನಾ್ಯಕ್ಸ್‌ ತರಲು ಸುಮಾರು 50 ಮೀಟರ್‌ ದೂರದಲ್ಲಿರುವ ಸೂಪರ್‌ ಮಾರ್ಕೆಟ್‌ಗೆ ಹೋಗಿದ್ದ. 2 ತಾಸು ಕಳೆದರೂ ಆತ ಬಾರದಿದ್ದರಿಂದ ಆತಂಕದಲ್ಲೇ ಮೊಬೈಲ್‌ಗೆ ಕರೆ ಮಾಡಿದೆವು. ಕರೆ ಸ್ವೀಕರಿಸಲಿಲ್ಲ. ತುಸು ಹೊತ್ತಿನ ಬಳಿಕ ಯಾರೋ ಕರೆ ಸ್ವೀಕರಿಸಿ ‘ನವೀನ್‌ ನೋ ಮೋರ್‌’ ಎಂದು ಹೇಳಿದರು. ಶೆಲ್‌ ದಾಳಿಗೆ ನವೀನ್‌ ಮೃತಪಟ್ಟಿರುವುದು ಆಗಲೇ ನಮಗೆ ಗೊತ್ತಾಯಿತು’ ಎಂದು ನವೀನ್‌ ಜತೆಗೆ ಬಂಕ​ರ್‌​ನ​ಲ್ಲಿದ್ದ ಹಾವೇರಿ ಮೂಲದ ಅಮಿತ್‌ ಹೇಳಿ​ಕೊಂಡಿ​ದ್ದಾ​ರೆ.

20 ಸಾವಿರಕ್ಕೂ ಅಧಿಕ ಮಂದಿ ಭಾರತಕ್ಕೆ ವಾಪಸ್
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಇನ್ನೂ 15-20 ಜನರಿದ್ದು ಅವರನ್ನು ‘ಅಪರೇಷನ್‌ ಗಂಗಾ’ ಅಡಿ ಕರೆತರುವ ಪ್ರಯತ್ನಗಳು ನಡೆಯುತ್ತವೆ. ಅಪರೇಷನ್‌ ಗಂಗಾ ಇನ್ನೂ ಕೂಡ ನಿಂತಿಲ್ಲ ಭಾರತಕ್ಕೆ ಬರಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ನಾವು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತಕ್ಕೆ ಬರಲು ಸಿದ್ಧವಿರುವ 15-20 ಮಂದಿ ಉಕ್ರೇನ್‌ನ ಖೇರ್ಸನ್‌ನಲ್ಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಸುಮಾರು 20,000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ