Asianet Suvarna News Asianet Suvarna News

BJP ದೊಡ್ಡದಾಗಿದೆ, RSSನ ಅವಶ್ಯಕತೆ ಇಲ್ಲ ಎಂದ ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿದ 'ಸಂಘ'

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ಆರ್‌ಎಸ್‌ಎಸ್‌ ಪ್ರತಿಕ್ರಿಯೆ ನೀಡಿದ್ದು, ಇದು ಕುಟುಂಬದೊಳಗಿನ ವಿಷಯ ಎಂದು ಹೇಳಿದೆ. ಪಾಲಕಾಡ್‌ನಲ್ಲಿ ನಡೆದ ಸಂಘದ ಮೂರು ದಿನದ 'ಅಖಿಲ ಭಾರತೀಯ ಸಾಮಾನ್ಯ ಬೈಠಕ್ ಬಳಿಕ ನಡ್ಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾಯ್ತು.

RSS reacts JP Nadda Controversy statement bjp did not need the RSS anymore as it was now saksham mrq
Author
First Published Sep 3, 2024, 4:46 PM IST | Last Updated Sep 3, 2024, 4:46 PM IST

ನವದೆಹಲಿ: ಭಾರತೀಯ ಜನತಾ ಪಕ್ಷ ದೊಡ್ಡದಾಗಿದ್ದು, ಆರ್‌ಎಸ್‌ಎಸ್‌ನ ಅವಶ್ಯಕತೆ ಇಲ್ಲ ಎಂಬ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿಕೆಗೆ ಸಂಘದಿಂದ ಮೊದಲ ಪ್ರತಿಕ್ರಿಯೆ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಪ್ರವರ್ತಕ ಸುನಿಲ್ ಆಂಬೇಕರ್, ಇದು ಕುಟುಂಬದೊಳಗಿನ ವಿಷಯ ಎಂದು ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಮೋಹನ್ ಭಾಗವತ್ ಮತ್ತು ಆರು ಸಂಯುಕ್ತ ಮಹಾಸಚಿವರ ನೇತೃತ್ವದಲ್ಲಿ ಕೇರಳದ ಪಾಲಕಾಡ್‌ನಲ್ಲಿ ಮೂರು ದಿನದ 'ಅಖಿಲ ಭಾರತೀಯ ಸಾಮಾನ್ಯ ಬೈಠಕ್' ಯಶಸ್ವಿಯಾಗಿ ಮುಕ್ತಾಯವಾಗಿದೆ. ಆರ್‌ಎಸ್‌ಎಸ್ ಪ್ರಕಾರ, ಸಂಘದಿಂದ ಪ್ರೇರಿತ 32 ಸಂಘಟನೆಗಳ ಪ್ರಮುಖರು ಬೈಠಕ್‌ನಲ್ಲಿ ಭಾಗಿಯಾಗಿದ್ದರು. 

ಈ ಬೈಠಕ್‌ನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಸಂಘಟನೆಯ ಮಹಾ ಸಚಿವ ಬಿಎಲ್ ಸಂತೋಷ್, ವಿಶ್ವ ಹಿಂದೂ ಪರಿಷತ್ ಪ್ರಮುಖ ಆಲೋಕ್ ಕುಮಾರ್ ಮತ್ತು ಭಾರತೀಯ ಮಜದೂರು ಸಂಘದ ಅಧ್ಯಕ್ಷ ಹರಿಣಮ್ ಪಾಂಡ್ಯಾ ಭಾಗಿಯಾಗಿದ್ದರು. ಬೈಠಕ್ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಪ್ರವರ್ತಕ ಸುನಿಲ್ ಆಂಬೇಕರ್, ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಜೆಪಿ ನಡ್ಡಾ ಹೇಳಿಕೆಗೂ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.

ನಮ್ಮ ಮಿಷನ್ ಏನಿದೆ ಎಂಬುದರ ಬಗ್ಗೆ ಎಲ್ಲರಿಗೂ ಕಲ್ಪನೆ ಇದೆ. ಇದು ನಮ್ಮ ಕುಟುಂಬದ ವಿಷಯವಾಗಿದ್ದು (ನಡ್ಡಾ ಹೇಳಿಕೆ), ಕೂಡಲೇ  ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪಾಲಕಾಡ್‌ನಲ್ಲಿ ನಡೆದ ಸಭೆ ಸಂಪೂರ್ಣ ಯಶಸ್ವಿಯಾಗಿದೆ. ಎಲ್ಲರೂ ಭಾಗವಹಿಸಿದ್ದರಿಂದ ಸಭೆ ಚೆನ್ನಾಗಿ ನಡೆಯಿತು. ಹಿಂದುಳಿದಿರುವ ಸಮುದಾಯ ಅಥವಾ ಜಾತಿಗಳನ್ನೇ ಗುರಿಯಾಗಿಸಿ ರೂಪಿಸಲಾಗುವ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಸರ್ಕಾರಕ್ಕೆ ಸಂಖ್ಯೆ ಬೇಕು ಎಂದಾದರೆ, ಅದಕ್ಕೊಂದು ಸ್ಥಾಪಿತ ಅಭ್ಯಾಸವಿದೆ. ಹಿಂದೆ ಕೂಡ ಸರ್ಕಾರಗಳು ಅಂತಹ ದತ್ತಾಂಶ ಪಡೆದಿದ್ದವು. ಈಗ ಮತ್ತೆ ಪಡೆಯಬಹುದು. ಆದರೆ ಆ ದತ್ತಾಂಶ ಆ ಸಮುದಾಯ ಅಥವಾ ಜಾತಿಗಳಿಗೆ ಮಾತ್ರ ಬಳಕೆಯಾಗಬೇಕು ಎಂದರು.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ವೇಟಿಂಗ್ ಲಿಸ್ಟ್! ಖಾಲಿಯಿಲ್ಲದ ಕುರ್ಚಿಯ ಮೇಲೆ 'ಪಂಚ'ಪಾಂಡವರ ಕಣ್ಣು!

ಜಾತಿ ಗಣತಿ ಬೆಂಬಲಿಸುವ ಸುಳಿವು
ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂಬ ಕೂಗೆಬ್ಬಿಸುವ ಮೂಲಕ ಪ್ರತಿಪಕ್ಷಗಳು ಅದನ್ನು ಪ್ರಬಲ ಅಸ್ತ್ರ ಮಾಡಿಕೊಂಡಿರುವಾಗಲೇ ಹಾಗೂ ಈ ವಿಚಾರವಾಗಿ ಸ್ಪಷ್ಟ ನಿಲುವು ತಳೆಯಲು ಬಿಜೆಪಿ ಹಿಂದೆ-ಮುಂದೆ ನೋಡುತ್ತಿರುವಾಗಲೇ ಬಿಜೆಪಿಯ ಸೈದ್ಧಾಂತಿಕ ಸಂಸ್ಥೆ ಆರ್‌ಎಸ್‌ಎಸ್‌, ಜಾತಿ ಗಣತಿ ಬೆಂಬಲಿಸುವ ಸುಳಿವು ನೀಡಿದೆ. ಜಾತಿ ಗಣತಿಯ ಅಂಕಿ-ಸಂಖ್ಯೆಗಳನ್ನು ರಾಜಕೀಯ ಅಥವಾ ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದೂ ಹೇಳಿದೆ. ಮತ್ತೊಂದೆಡೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಳ ಮೀಸಲಾತಿ ವಿಚಾರವಾಗಿ ಆ ಸಮುದಾಯಗಳ ಒಮ್ಮತಾಭಿಪ್ರಾಯ ಪಡೆಯದೆ ಯಾವುದೇ ಹೆಜ್ಜೆ ಇಡಬಾರದು ಎಂದು ಸಲಹೆ ಮಾಡಿದೆ.

ಜೆಪಿ ನಡ್ಡಾ ಹೇಳಿಕೆ ಏನು?
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿಗೆ ಸಂಘದ ಅಗತ್ಯವಿಲ್ಲ ಎಂದು ಹೇಳಿದ್ದರು. ನಾವು ಮೊದಲು ಹೆಚ್ಚು ಸಮರ್ಥರಾಗಿಲಿಲ್ಲ. ಇಂದು ಪಕ್ಷ ತಾನಾಗಿಯೇ ನಡೆದುಕೊಂಡು ಹೋಗುವ ಸಾಮಾರ್ಥ್ಯ ಹೊಂದಿದೆ ಎಂದು ಹೇಳಿದ್ದರು.

1980 ರಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರಾಧ್ಯಕ್ಷರ ಪಯಣ: ವಾಜಪೇಯಿಯಿಂದ ಜೆಪಿ ನಡ್ಡಾವರೆಗೆ

Latest Videos
Follow Us:
Download App:
  • android
  • ios