Asianet Suvarna News Asianet Suvarna News

RSS Chief Mohan Bhagwat: ಆರೆಸ್ಸೆಸ್‌ ಜಿಮ್‌, ಸೇನಾ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಗುಂಪು!

*RSS ಅಖಿಲ ಭಾರತ ಸಂಗೀತ ಶಾಲೆಯಲ್ಲ
*ಭಾರತದಲ್ಲಿ ಸಂಗೀತವು ಮನಃಶಾಂತಿ ಸಾಧನ
*ಸಂಗೀತ ಶಿಬಿರದಲ್ಲಿ ಮೋಹನ್‌ ಭಾಗವತ್‌ ಹೇಳಿಕೆ

RSS is not a military organisation its a group with family atmosphere Mohan Bhagwat mnj
Author
Bengaluru, First Published Nov 29, 2021, 12:25 PM IST

ಗ್ವಾಲಿಯಾರ್‌(ನ.29): ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು (RSS) ಸೇನಾ ಸಂಘಟನೆ ಅಥವಾ ಅಖಿಲ ಭಾರತ ಸಂಗೀತ ಶಾಲೆಯಲ್ಲ ( Not a Music School). ಬದಲಾಗಿ ಆರೆಸ್ಸೆಸ್‌ ಎಂಬುದು ಕುಟುಂಬದ ವಾತಾವರಣ ಇರುವ ಒಂದು ಗುಂಪು ಅಷ್ಟೇ ಎಂದು ಸಂಘಟನೆ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಘದ ಮಧ್ಯಭಾರತ್‌ ಪ್ರಾಂತ್‌ನಲ್ಲಿ ನಡೆದ 4 ದಿನಗಳ ಸಂಗೀತ ಶಿಬಿರದ (Musical Band Camp) ಕೊನೇ ದಿನವಾದ ಭಾನುವಾರ ಮಾತನಾಡಿದ ಭಾಗವತ್‌ ಅವರು, ಸಂಘವು ಅಖಿಲ ಭಾರತ ಜಿಮ್‌ ಅಥವಾ ಮಾರ್ಷಲ್‌ ಆಟ್ಸ್‌ರ್‍ ಕ್ಲಬ್‌ ಅಲ್ಲ. ಕೆಲವು ಬಾರಿ ಸಂಘವನ್ನು ಪ್ಯಾರಾಮಿಲಿಟರಿ ಎಂದು ಗುರುತಿಸಲಾಗುತ್ತದೆ. ಆದರೆ ಸಂಘವು ಸೇನಾ ಸಂಸ್ಥೆಯೂ ಅಲ್ಲ ಎಂದು ಸ್ಪಷ್ಟಪಡಿಸಿದರು. 

ಇನ್ನು ಸಂಗೀತವನ್ನು ಪಾಶ್ಚಾತ್ಯ ದೇಶಗಳು (Westen Countries) ಮನೋರಂಜನೆಯಾಗಿ ಗುರುತಿಸುತ್ತವೆ. ಆದರೆ ಭಾರತದಲ್ಲಿ ಸಂಗೀತವು ಮನಃಶಾಂತಿಗೆ ಇರುವ ಒಂದು ಸಾಧನ ಎಂದರು. ಭಾರತವು 1947ರಲ್ಲಿ ಸ್ವಾತಂತ್ರ್ಯಗೊಂಡಿತು. ಆದರೆ 1857ರಲ್ಲೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಅಲ್ಲದೆ ದೇಶದ ಲೂಟಿ ಮತ್ತು ಅವ್ಯವಸ್ಥೆಯಿಂದ ದೇಶವನ್ನು ದುರಸ್ತಿಗೊಳಿಸಲು ಕನಿಷ್ಠ 10-12 ವರ್ಷಗಳೇ ಬೇಕು. ಈ ಹಿನ್ನೆಲೆಯಲ್ಲಿ ದೇಶದ ನಿರ್ಮಾಣಕ್ಕಾಗಿ ನಾವು ಹೆಚ್ಚು ಶ್ರಮ ಪಡಬೇಕಿದೆ ಎಂದು ಹೇಳಿದರು.

31 ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಸಂಗೀತಗಾರರು!

ಮ್ಯೂಸಿಕಲ್ ಬ್ಯಾಂಡ್ ಶಿಬಿರವು ಶಿವಪುರಿ ಲಿಂಕ್ ರಸ್ತೆಯಲ್ಲಿರುವ ಗ್ವಾಲಿಯರ್‌ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ (Saraswathi Shishu Mandir) (ಶಾಲೆ) ಮುಕ್ತಾಯವಾಯಿತು ಎಂದು ಹಿರಿಯ ಆರ್‌ಎಸ್‌ಎಸ್ ಮಧ್ಯ ಭಾರತ್ ಕಾರ್ಯಕಾರಿ ತಿಳಿಸಿದ್ದಾರೆ. ಆರ್‌ಎಸ್‌ಎಸ್ ಮಧ್ಯಪ್ರದೇಶ ಭಾರತ್ ಪ್ರಾಂತ್‌ನ 31 ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಸಂಗೀತಗಾರರು (ಗ್ವಾಲಿಯರ್‌ ಹಾಗೂ ಭೋಪಾಲ ಸೇರಿಸಿ) ಶಿಬಿರದಲ್ಲಿ ಭಾಗವಹಿಸಿದ್ದರು.

RSS Mohan Bhagwath | ಜೈ ಶ್ರೀರಾಮ್‌ ಘೋಷಣೆ ಸಾಲದು, ರಾಮನಂತೆ ನಡೆದುಕೊಳ್ಳಬೇಕು

ಕಳೆದ ವಾರ, ಭಾಗವತ್ ಅವರು ಛತ್ತೀಸ್‌ಗಢದಲ್ಲಿ ಬ್ಯಾಂಡ್ ಸದಸ್ಯರಿಂದ ಸಂಗೀತ ವಾದ್ಯಗಳನ್ನು ಪ್ರದರ್ಶಿಸುವ ಕಾರ್ಯಕ್ರಮವಾದ 'ಘೋಷ್ ಪ್ರದರ್ಶನ (Ghosh Pradarshan)' ದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ RSS ಕಾರ್ಯಕಾರಿ ವಿನಯ್ ದೀಕ್ಷಿತ್ ಅವರು RSS ಅನ್ನು 1925 ರಲ್ಲಿ ರಚಿಸಲಾಯಿತು ಮತ್ತು ಅದರ ಸಂಗೀತ ಶಾಖೆ 1927 ರಲ್ಲಿ ಪ್ರಾರಂಭವಾಯಿತು ಎಂದು  ಹೇಳಿದ್ದರು.

ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. ನೋಯ್ಡಾ(Noida)ದಲ್ಲಿ ಕೃಷ್ಣಾನಂದ ಸಾಗರ್‌ (Krishnanand Sagar)ಅವರು ಬರೆದ  "ವಿಭಾಜನಕಾಲೀನ್‌ ಭಾರತ್‌ ಕೆ ಸಾಕ್ಷಿ" (ಭಾರತ ವಿಭಜನೆಯ ಸಾಕ್ಷಿಗಳು) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ಇತಿಹಾಸವನ್ನುಓದಬೇಕು ಹಾಗೂ ಸತ್ಯವನ್ನು ಒಪ್ಪಿಕೊಳ್ಳಬೇಕು. ಹಿಂದೂ ಸಮುದಾಯ ಜಗತ್ತಿಗೆ ಒಳ್ಳೆಯದನ್ನು ಮಾಡಲು ಸದಾ ಸಿದ್ಧವಾಗಿದೆ.ಭಾರತ ವಿಭಜನೆ ವೇಳೆ ಆದ ನೋವನ್ನು ಮರೆಯುವ ಹಾಗಿಲ್ಲ. ಭಾರತ ಮತ್ತೆ ಅಖಂಡವಾದಾಗಲಷ್ಟೇ ಈ ನೋವು ಹೋಗಲು ಸಾಧ್ಯ ಎಂದು ಹೇಳಿದರು.

OTTಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳು ದೇಶಕ್ಕೆ ಮಾರಕ : ಮೋಹನ್‌ ಭಾಗವತ್‌

ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದೇ ಭಾರತದ ಸಿದ್ಧಾಂತ. ತನ್ನದು ಸರಿ ಬೇರೆಯವರದು ತಪ್ಪು ಎನ್ನುವ ಸಿದ್ಧಾಂತ ಭಾರತದಲ್ಲ. ಆದರೆ ಇಸ್ಲಾಮಿಕ್‌ ಆಕ್ರಮಣಕಾರರ(Islamic invaders) ಸಿದ್ಧಾಂತವೂ, ತಮ್ಮದು ಸರಿ ಇತರರದ್ದು ತಪ್ಪು ಎನ್ನುವಂತಹ ಸಿದ್ಧಾಂತವಾಗಿತ್ತು. ಇದುವೇ ಹಿಂದೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಮೋಹನ್‌ ಭಾಗವತ್‌(Mohan Bhagwat) ಹೇಳಿದರು.
 

Follow Us:
Download App:
  • android
  • ios