‘ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿದೆ’| RSS ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಕೆ| ‘ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಬೆಳೆಯುತ್ತಿದೆ’| ‘ಸರ್ಕಾರ ಮತ್ತು ಜನರ ನಡುವೆಯೇ ಕಿತ್ತಾಟ ಆರಂಭವಾಗಿರುವುದು ವಿಷಾದನೀಯ’| ಆಧುನಿಕ ಸವಲತ್ತುಗಳು ಸದ್ಭಳಕೆಯಾಗುತ್ತಿಲ್ಲ ಎಂದ ಭಾಗವತ್| ‘ಭಾರತ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಪಾಠ ಹೇಳಿಕೊಡಬೇಕಿದೆ’|

ಅಹಮದಾಬಾದ್(ಫೆ.16): ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಅತೃಪ್ತಿ ಬೆಳೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ RSS ಮುಖ್ಯಸ್ಥ ಮೋಹನ್ ಭಾಗವತ್, 3ನೇ ಮೂರನೇ ಮಹಾಯುದ್ಧದ ಆತಂಕದಲ್ಲಿ ಜಗತ್ತು ದಿನದೂಡುವಂತಾಗಿದೆ ಎಂದು ಹೇಳಿದ್ದಾರೆ. 

ಮೂರನೇ ಮಹಾಯುದ್ಧದ ಬೆದರಿಕೆ ಹೆಚ್ಚಾಗುತ್ತಿದೆ. ಅದು ನಾನಾ ರೂಪಗಳಲ್ಲಿ ಕಂಡುಬರುತ್ತಿದೆ. ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಭುಗಿಲೆದ್ದಿದೆ. ಪ್ರತಿಯೊಂದು ಕ್ಷೇತ್ರದಲ್ಲಿರುವವರು ಕೂಡ ಪ್ರತಿಭಟನೆಗಿಳಿಯುತ್ತಿದ್ದಾರೆ ಎಂದು ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದರು.

'ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ಇರುತ್ತದೆ'

ಇಂದು ಯಾರಿಗೂ ಸಂತೋಷವೆಂಬುದಿಲ್ಲ, ಎಲ್ಲೆಲ್ಲೂ ಅಸಮಾಧಾನ, ಹಿಂಸಾಚಾರವೇ ಕಣ್ಣಿಗೆ ಕಾಣುತ್ತಿದೆ ಎಂದು ಮೋಹನ್ ಭಾಗವತ್ ಖೇದ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಜನರ ನಡುವೆಯೇ ಕಿತ್ತಾಟ ಆರಂಭವಾಗಿರುವುದು ವಿಷಾದನೀಯ ಎಂದು ಅವರು ನುಡಿದರು. 

50-100 ವರ್ಷಗಳ ಹಿಂದೆ ಜನರಿಗೆ ಸಿಗದ ಸೌಲಭ್ಯ, ಸವಲತ್ತುಗಳು ಇಂದು ಸಿಗುತ್ತಿದೆ. ಆದರೆ ಇದರಿಂದ ಯಾರಲ್ಲೂ ತೃಪ್ತಿ ಕಾಣುತ್ತಿಲ್ಲ. ಆಧುನಿಕ ಸವಲತ್ತುಗಳು ಸದ್ಭಳಕೆಯಾಗುತ್ತಿಲ್ಲ ಎಂದು ಭಾಗವತ್ ಅಭಿಪ್ರಾಯಪಟ್ಟರು.

Scroll to load tweet…

ಪ್ರಸ್ತುತ ಜಗತ್ತಿನಲ್ಲಿ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಮಾನವರು ರೋಬೋಟ್‌ಗಳಾಗುವುದನ್ನು ತಡೆಯಲು ಿಡೀ ವಿಶ್ವಕ್ಕೆ ಭಾರತ ಮಾರ್ಗದರ್ಶನ ಮಾಡಬೇಕು ಎಂದು ಭಾಗವತ್ ಹೇಳಿದರು.

ಧರ್ಮ ಪ್ರತಿಪಾದನೆಯಲ್ಲಿ ಮುಂದಿರುವ ಭಾರತ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಪಾಠ ಹೇಳಿಕೊಡಬೇಕಿದೆ. ನಾವು ಜಗತ್ತಿಗೆ ಜಾಗತಿಕ ಕುಟುಂಬ ವ್ಯವಸ್ಥೆ ಬಗ್ಗೆ ಹೇಳಿಕೊಟ್ಟವರೇ ಹೊರತು ಜಾಗತಿಕ ಮಾರುಕಟ್ಟೆ ಬಗ್ಗೆ ಅಲ್ಲ ಎಂದು ಭಾಗತವ್ ಹೇಳಿದರು.