ನವದೆಹಲಿ(ಮೇ.16): ಕೊರೋನಾ ವೈರಸ್‌ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಹೊಸ ಯೊಜನೆ, ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದೀಗ ಕೊರೋನಾ ತುರ್ತು ಪರಿಹಾರ ನಿಧಿಗೆ ಅತೀ ಹೆಚ್ಚು ದೇಣಿಗೆ ನೀಡಿದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಕೆಲ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆ ವಿಸ್ತರಣೆ ಈ ಸಂದರ್ಭಕ್ಕೆ ಅಗತ್ಯವಾಗಿದೆ ಎಂದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಗೊಂದಲಗಳಿಗೆ ತೆರೆ...!.

ಪಡಿತರ ಅಕ್ಕಿ ಉಚಿತ ರೇಶನ್ ಕಾರ್ಯಕ್ರಮವನ್ನು 3 ರಿಂದ 6 ತಿಂಗಳಿಗೆ ವಿಸ್ತರಿಸಬೇಕು. ಇದನ್ನು ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವಾಗ ಕೆಲಸ ಮಾಡಬೇಕು ಎಂದು ಅಜೀಂ ಪ್ರೇಮ್‌ಜಿ ಹೇಳಿದ್ದಾರೆ. ಅದರಲ್ಲೂ ಪ್ರಮುಖವಾಗಿ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪ್ರತಿ ತಿಂಗಳು 7,000 ರೂಪಾಯಿ ತುರ್ತು ಪರಿಹಾರ ನೀಡಬೇಕು. ಕನಿಷ್ಠ 3 ತಿಂಗಳು ಈ ರೀತಿ ಹಣ ನೀಡಬೇಕು ಎಂದು ಪ್ರೇಮ್‌ಜಿ ಹೇಳಿದ್ದಾರೆ.

ಭಾರತಕ್ಕೆ ವೆಂಟಿಲೇಟರ್‌ ಕೊಡ್ತೀವಿ, ಜತೆಗೂಡಿ ಲಸಿಕೆ ತಯಾರಿಸ್ತೀವಿ: ಟ್ರಂಪ್

ವಲೆ ಕಾರ್ಮಿಕರ ಹಿತ ಕಾಯಬೇಕು. ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಲು ಇಚ್ಚಿಸಿದರೆ ಅವರನ್ನು ಉಚಿತವಾಗಿ ಬಸ್ ಅಥವಾ ಟ್ರೈನ್ ಮೂಲಕ ಕಳಹಿಸಿಕೊಡಬೇಕು.  ಹಲವು ರಾಜ್ಯಗಳು ಕಾರ್ಮಿಕರ ನಿಯಮ ಉಲ್ಲಂಘನೆ ಮಾಡುತ್ತಿದೆ. ಇದು ಸರಿಯಲ್ಲ. ಕಾರ್ಮಿಕರನ್ನು ಅಷ್ಟೌ ಗೌರವಯುತವಾಗಿ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಬೇಕು ಎಂದು ಪ್ರೇಮ್‌ಡಿ ಮನವಿ ಮಾಡಿದ್ದಾರೆ.

ಅಜೀಂ ಪ್ರೇಮ್‌ಜಿಯ  ವಿಪ್ರೋ ಕೊರೋನಾ ಪರಿಹಾರಕ್ಕೆ 1,000 ಕೋಟಿ ರೂಪಾಯಿ ದೇಣಿಕೆ ನೀಡಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್, ವಿಪ್ರೋ ಹಾಗೂ ವಿಪ್ರೋ ಎಂಟರ್‌ಪ್ರೈಸಸ್ ಜೊತೆಯಾಗಿ 1125 ಕೋಟಿ ರೂಪಾಯಿ ದೇಣಿಗೆ ನೀಡಿದೆ. ವೈಯುಕ್ತಿ ದೇಣಿಗೆಗಳ ಪೈಕಿ ಅತೀ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದೆ. ಟಾಟಾ ಗ್ರೂಪ್ ಆಫ್ ಕಂಪನಿ ಒಟ್ಟು 1,500 ಕೋಟಿ ರೂಪಾಯಿ ದೇಣಿಗೆ ನೀಡಿದೆ.