ವಾಷಿಂಗ್ಟನ್‌(ಮೇ.16): ಮಾರಕ ಕೊರೋನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ಭಾರತದ ಜತೆಗೂಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಲ್ಲದೆ ಕೊರೋನಾ ಸಂಕಷ್ಟದ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜತೆ ನಿಲ್ಲುತ್ತೇವೆ. ವೆಂಟಿಲೇಟರ್‌ಗಳನ್ನು ಕೊಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ.

ಭಾರತಕ್ಕೆ ಬರುವ ಅಮೆರಿಕದ ಕಂಪನಿಗಳಿಗೆ ಟ್ರಂಪ್‌ ಬೆದರಿಕೆ!

ಕೊರೋನಾಗೆ ವರ್ಷಾಂತ್ಯದೊಳಗೆ ಲಸಿಕೆ ಸಿಗುವ ವಿಶ್ವಾಸವಿದೆ. ನರೇಂದ್ರ ಮೋದಿ ಅವರು ನನ್ನ ಅತ್ಯುತ್ತಮ ಸ್ನೇಹಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಮಹಾನ್‌ ವಿಜ್ಞಾನಿಗಳು ಹಾಗೂ ಸಂಶೋಧಕರು ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಕೊರೋನಾ ವೈರಸ್‌ ಲಸಿಕೆ ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬರುವ ವಿಶ್ವಾಸವಿದೆ. ಲಸಿಕೆ ಸಿಗಲಿ ಅಥವಾ ಬಿಡಲಿ ಆರ್ಥಿಕತೆ ಚಟುವಟಿಕೆಯನ್ನಂತೂ ಆರಂಭಿಸುತ್ತೇವೆ ಎಂದು ಹೇಳಿದರು.