ನವದೆಹಲಿ(ಮೇ.14): ಕೊರೋನಾ ವಿರುದ್ಧ ಹೋರಾಡಲು 50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ್ದ ‘ಪಿಎಂ ಕೇ​ರ್‍ಸ್’ ನಿಧಿಯಿಂದ ಇದೇ ಮೊದಲ ಬಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ವೆಂಟಿಲೇಟರ್‌ ಖರೀದಿಗೆ 2000 ಕೋಟಿ, ವಲಸೆ ಕಾರ್ಮಿಕರ ಹಿತರಕ್ಷಣೆಗೆ 1000 ಕೋಟಿ ಹಾಗೂ ಲಸಿಕೆ ಶೋಧನೆಗೆ ನೆರವಾಗಲು 100 ಕೋಟಿ ರು. ನೆರವನ್ನು ಪ್ರಕಟಿಸಲಾಗಿದೆ.

2000 ಕೋಟಿ ರು. ನೆರವು ಬಳಸಿ 50 ಸಾವಿರ ವೆಂಟಿಲೇಟರ್‌ ಖರೀದಿಸಿ, ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ವಲಸೆ ಕಾರ್ಮಿಕರ ವಸತಿ, ಆಹಾರ, ವೈದ್ಯಕೀಯ ಚಿಕಿತ್ಸೆ, ಸಾರಿಗೆ ವೆಚ್ಚಕ್ಕಾಗಿ 1000 ಕೋಟಿ ರು. ಬಳಸಲು ಉದ್ದೇಶಿಸಲಾಗಿದೆ.