ಪಿಎಫ್‌ಐ ಮೇಲೆ ದಾಳಿ ಭಾಗ-2: ರಾಜ್ಯದಲ್ಲಿ 50ಕ್ಕೂ ಅಧಿಕ ಮಂದಿ ಬಂಧನ, 8 ರಾಜ್ಯಗಳಲ್ಲಿ ರೈಡ್‌!

ಪಿಎಫ್‌ಐ ವಿರುದ್ಧ ಮಂಗಳವಾರ 2ನೇ ಹಂತದ ದಾಳಿ ನಡೆದಿದೆ. ರಾಷ್ಟ್ರೀಯ ತನಿಖಾ ದಳ ನೀಡಿದ ಮಾಹಿತಿಯ ಆಧಾರದ ಮೇಲೆ ವಿವಿಧ ರಾಜ್ಯಗಳ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ನಡೆದ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿಯನ್ನು ಬಂಧನ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 40ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
 

Round 2 of raid on PFI patrolling of paramilitary forces in Shaheen Bagh big action in 8 states including karnataka  san

ನವದೆಹಲಿ/ಬೆಂಗಳೂರು (ಸೆ. 27): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ 8 ರಾಜ್ಯಗಳ ಪೊಲೀಸರು ಮಂಗಳವಾರ (ಇಂದು) ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇದು ಎರಡನೇ ಸುತ್ತಿನ ರೇಡ್ ಎಂದು ಹೇಳಲಾಗುತ್ತಿದೆ. ದೆಹಲಿ, ಯುಪಿ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅರೆಸೇನಾ ಪಡೆಗಳು ಶಾಹೀನ್ ಬಾಗ್‌ನಲ್ಲಿ ಗಸ್ತು ತಿರುಗುತ್ತಿದ್ದರೆ, ಅಸ್ಸಾಂನಿಂದ 45 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರು ಸುಮಾರು 30 ಜನರನ್ನು ಬಂಧಿಸಿದ್ದಾರೆ. ಅದೇ ಸಮಯದಲ್ಲಿ, ಯುಪಿಯಲ್ಲೂ ಹಲವರನ್ನು ಬಂಧಿಸಲಾಗಿದೆ. ಇನ್ನು ಕರ್ನಾಟಕದಲ್ಲೂ 40ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, 50ಕ್ಕೂ ಅಧಿಕ ಮಂದಿಯನ್ನು ಬಂಧನ ಮಾಡಲಾಗಿದೆ. ಇತ್ತೀಚೆಗೆ ಕೇರಳದ ಪಿಎಫ್‌ಐ ಸದಸ್ಯ ಶಫೀಕ್ ಪೈತ್‌ನನ್ನು ಎನ್‌ಐಎ ಬಂಧಿಸಿತ್ತು. ಇದರಿಂದಾಗಿ ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಪಾಟ್ನಾ ಸಮಾವೇಶವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುರಿಯಾಗಿಸಿಕೊಂಡಿತ್ತು ಎನ್ನುವುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಮೊದಲ ಸುತ್ತಿನ ಎನ್‌ಐಎ ವಿಚಾರಣೆಯ ನಂತರ ದೊರೆತ ಸುಳಿವುಗಳ ಆಧಾರದ ಮೇಲೆ, 8 ರಾಜ್ಯಗಳ ಪೊಲೀಸರು ಮತ್ತು ಇತರ ಏಜೆನ್ಸಿಗಳೊಂದಿಗೆ ದಾಳಿ ನಡೆಸಲಾಗುತ್ತಿದೆ. ಮಾಹಿತಿಯ ಪ್ರಕಾರ, 8 ರಾಜ್ಯಗಳಲ್ಲಿ ಪಿಎಫ್‌ಐ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ತನಿಖಾ ಸಂಸ್ಥೆಗಳ ಕ್ರಮ: ಕರ್ನಾಟಕದ ಪೊಲೀಸರು ಮಂಗಳವಾರ ಬೆಳಗ್ಗೆ ಹಲವು ಜಿಲ್ಲೆಯ ಪಿಎಫ್‌ಐ ಅಧ್ಯಕ್ಷ ಮತ್ತು ಎಸ್‌ಡಿಪಿಐ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, ಪಿಎಫ್‌ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಮತ್ತು ಎಸ್‌ಡಿಪಿಐ ಕಾರ್ಯದರ್ಶಿ ಶೇಖ್ ಮಕ್ಸೂದ್‌ ಅವರನ್ನು ವಶಕ್ಕೆ ಪಡೆಯಲಾಗಿದ.ೆ ಇದೇ ವೇಳೆ ಕೋಲಾರ ಜಿಲ್ಲೆಯಲ್ಲಿ ಪಿಎಫ್‌ಐ ಸಂಘಟನೆಯ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಮಂಗಳೂರು ಪೊಲೀಸರು ಪಿಎಫ್‌ಐ ಮತ್ತು ಎಸ್‌ಡಿಪಿಐ (SDPI) ಸದಸ್ಯರನ್ನೂ ಬಂಧಿಸಿದ್ದಾರೆ. ಕಾಮ್ರೂಪ್ ಜಿಲ್ಲೆಯ ನಗರ್‌ಬೆರಾ ಪ್ರದೇಶದಲ್ಲಿ 7 ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಸಂಖ್ಯೆ 60ಕ್ಕೆ ಏರಬಹುದು. ಎನ್‌ಐಎ ದಾಳಿಯ ವೇಳೆ ತೊಂದರೆ ಸೃಷ್ಟಿಸಿದವರ ಪಟ್ಟಿ ನಮ್ಮ ಬಳಿ ಇದೆ. ಎಲ್ಲಾ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ದಸರಾ ಸಂಭ್ರಮವಿದ್ದು, ಎಲ್ಲೆಡೆ ಪೊಲೀಸರ ನಿಯೋಜನೆಯಾಗಿದೆ ಎಂದಿದ್ದಾರೆ. ಇನ್ನು ಅಸ್ಸಾಂನಲ್ಲಿ ಗೋಲ್ಪಾರಾ ಕಮ್ರೂಪ್ ಬರ್ಪೇಟಾ, ಧುಬ್ರಿ, ಬಾಗ್ಸಾ, ದರಾಂಗ್ ಉದಲ್ಗುರಿ ಕರೀಮ್ಗಂಜ್ (Assam) ಪ್ರದೇಶದಲ್ಲಿ ದಾಳಿ ಮಾಡಲಾಗಿದೆ.



ಪಿಎಫ್‌ಐ ನಿಷೇಧಕ್ಕೆ ಮುಂದಾಗಿದ್ದೇವೆ: ಕರ್ನಾಟಕದಲ್ಲಿ ಪಿಎಫ್‌ಐ ಮೇಲಿನ ದಾಳಿ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ. ರಾಜ್ಯದಲ್ಲಿ 40ಕ್ಕೂ ಅಧಿಕ ಪ್ರದೇಶದಲ್ಲಿ ಪೊಲೀಸರ ದಾಳಿಯಾಗಿದೆ. ಅನೇಕರನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಫ್‌ಐ ಸಂಸ್ಥೆಯನ್ನು ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಈ ಹಿಂದೆಯೇ ಮಾಡಬೇಕಿತ್ತು.ಪಿಎಫ್ ಐ ವಿರುದ್ಧ  ಸಮಗ್ರ ತನಿಖೆ ಮಾಡಿದ ಮೇಲೆ ಅವರ ದೇಶದ್ರೋಹಿ  ಮತ್ತು  ಕೇಂದ್ರ ಸರ್ಕಾರ  ಉರುಳಿಸಲು ಮಾಡಿರುವ ಷಡ್ಯಂತ್ರ ಬಯಲಾಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಯಲ್ಲಿ 12 ಜನ ವಶಕ್ಕೆ: ಮೂಲಗಳ ಪ್ರಕಾರ, ತಡರಾತ್ರಿ ದೆಹಲಿಯಲ್ಲಿ (Delhi) ಪಿಎಫ್‌ಐನ (PFI) ಹಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಶಾಹೀನ್ ಬಾಗ್, ಜಾಮಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ. ಏಜೆನ್ಸಿಗಳ ಜೊತೆಗೆ, ದೆಹಲಿ ಪೊಲೀಸ್ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ವಿಶೇಷ ಸೆಲ್ ತಂಡಗಳು ದಾಳಿಯಲ್ಲಿ ಭಾಗಿಯಾಗಿದ್ದವು. ಸುಮಾರು 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿ ಈಶಾನ್ಯದಿಂದ 4 ಮಂದಿಯನ್ನು ಬಂಧಿಸಲಾಗಿದೆ.

NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಮಧ್ಯಪ್ರದೇಶದಲ್ಲಿ 21 ಮಂದಿ ಬಂಧನ: ಮಧ್ಯಪ್ರದೇಶದಲ್ಲೂ ಪಿಎಫ್‌ಐ ವಿರುದ್ಧ (Popular Front of India) ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ರಾಜಧಾನಿ ಭೋಪಾಲ್‌ನಲ್ಲಿ 21 ಜನರನ್ನು ಬಂಧಿಸಲಾಗಿದೆ. ಎನ್‌ಐಎಯಿಂದ ಮಾಹಿತಿ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ತಡರಾತ್ರಿ ದಾಳಿ ನಡೆದಿದೆ. ಇತ್ತೀಚೆಗಷ್ಟೇ ಎನ್‌ಐಎ ಬಂಧಿಸಿದವರನ್ನು ವಿಚಾರಣೆ ನಡೆಸಿದ ನಂತರವೇ ಈ ಜನರನ್ನು ವಶಕ್ಕೆ ಪಡೆಯಲಾಗಿದೆ.

ಎನ್‌ಐಎ ತನಿಖೆಯ ಬಿಗ್‌ ನ್ಯೂಸ್‌, ಪಿಎಫ್‌ಐ ಟಾರ್ಗೆಟ್‌ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!

ಮಹಾರಾಷ್ಟ್ರದಲ್ಲೂ ಕ್ರಮ: ಇದೇ ವೇಳೆ ಮಹಾರಾಷ್ಟ್ರದ ಪುಣೆ, ಮುಂಬೈ ಸೇರಿದಂತೆ ಹಲವೆಡೆ ದಾಳಿ(NIA)ನಡೆಸಲಾಗಿದೆ. ಭಯೋತ್ಪಾದನೆಗೆ ಹಣ ಸಂಗ್ರಹ ಮಾಡಿದ್ದಕ್ಕಾಗಿ ಪಿಎಫ್‌ಐನ 6 ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಫ್‌ಐ ಪ್ರಕರಣದಲ್ಲಿ ಥಾಣೆ ಕ್ರೈಂ ಬ್ರಾಂಚ್ ನಾಲ್ವರನ್ನು ಬಂಧಿಸಿದೆ. ಇವರಲ್ಲಿ ಇಬ್ಬರನ್ನು ಮುಂಬ್ರಾದಿಂದ, ಒಬ್ಬ ಕಲ್ಯಾಣ್ ಮತ್ತು ಒಬ್ಬ ಭಿವಂಡಿಯಿಂದ ಬಂಧಿಸಲಾಗಿದೆ. ಎಲ್ಲಾ ನಾಲ್ವರು ಆರೋಪಿಗಳು ಪಿಎಫ್‌ಐನ ಸಕ್ರಿಯ ಸದಸ್ಯರಾಗಿದ್ದಾರೆ.

Latest Videos
Follow Us:
Download App:
  • android
  • ios