ಉತ್ತರಾಖಂಡದ ರೂರ್ಕಿ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಎಲ್‌ಪಿಜಿ ಸಿಲಿಂಡರ್ ಪತ್ತೆಯಾಗಿದೆ. ಗೂಡ್ಸ್ ರೈಲಿನ ಲೊಕೊ ಪೈಲಟ್ ಸಿಲಿಂಡರ್ ಅನ್ನು ಗುರುತಿಸಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಮೂಲಕ ದೊಡ್ಡ ಅನಾಹುತ ತಪ್ಪಿದೆ.

ನವದೆಹಲಿ (ಅ.13): ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್‌ ಅಪಘಾತದ ಬೆನ್ನಲ್ಲಿಯೇ ಭಾನುವಾರ ಮುಂಜಾನೆ ಉತ್ತರಾಖಂಡದ ರೂರ್ಕಿ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಎಲ್‌ಪಿಜಿ ಸಿಲಿಂಡರ್ ಪತ್ತೆಯಾಗಿದೆ. ಆ ಮೂಲಕ ದೊಡ್ಡ ಅನಾಹುತವನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಲಾಗಿದೆ.ಗೂಡ್ಸ್ ರೈಲಿನ ಲೊಕೊ ಪೈಲಟ್ ಸಿಲಿಂಡರ್ ಅನ್ನು ಗುರುತಿಸಿ, ತಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಆ ಮೂಲಕ ಸಂಭಾವ್ಯ ಹಳಿ ತಪ್ಪಿಸುವಿಕೆಯನ್ನು ತಡೆದಿದ್ದಾರೆ. ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO), ಹಿಮಾಂಶು ಉಪಾಧ್ಯಾಯ ಅವರು, ಧಂಧೇರಾದಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲಂಡೌರಾ ಮತ್ತು ಧಂಧೇರಾ ನಿಲ್ದಾಣಗಳ ನಡುವೆ ಬೆಳಿಗ್ಗೆ 6:35 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪಾಯಿಂಟ್‌ಮ್ಯಾನ್ ಕಳುಹಿಸಲಾಯಿತು ಮತ್ತು ಸಿಲಿಂಡರ್ ಖಾಲಿಯಾಗಿರುವುದು ಈ ವೇಳೆ ಗೊತ್ತಾಗಿದೆ.ಅಂದಿನಿಂದ ಅದನ್ನು ಧಂಧೇರಾದಲ್ಲಿ ಸ್ಟೇಷನ್ ಮಾಸ್ಟರ್‌ನ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಸೂಚನೆ ನೀಡಲಾಗಿದ್ದು, ಎಫ್‌ಐಆರ್ ದಾಖಲಿಸಲಾಗುತ್ತಿದೆ. ಭಾರತದಾದ್ಯಂತ ರೈಲು ಹಳಿತಪ್ಪಿಸುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲಿ ಈ ಪ್ರಕರಣವೂ ಒಂದಾಗಿದೆ. ಆಗಸ್ಟ್‌ನಿಂದ ದೇಶಾದ್ಯಂತ 18 ಇಂತಹ ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೆ ಬಹಿರಂಗಪಡಿಸಿದೆ, ನಂತರದ ವಾರಗಳಲ್ಲಿ ಹೆಚ್ಚುವರಿ ಮೂರು ಪ್ರಕರಣಗಳು ವರದಿಯಾಗಿದೆ. ಇತ್ತೀಚಿನ ಪ್ರಕರಣದಲ್ಲಿ, ಕಾನ್ಪುರದ ಹಳಿಗಳ ಮೇಲೆ ಎಲ್ಪಿಜಿ ಸಿಲಿಂಡರ್ ಪತ್ತೆಯಾಗಿತ್ತು.

ರೈಲ್ವೆ ಟ್ರ್ಯಾಕ್‌ನಲ್ಲಿ ಡಿಟೊನೇಟರ್ ಇಟ್ಟ ಪ್ರಕರಣ: ರೈಲ್ವೆ ಉದ್ಯೋಗಿ ಶಬೀರ್ ಬಂಧನ

ಜೂನ್ 2023 ರಿಂದ, ಎಲ್‌ಪಿಜಿ ಸಿಲಿಂಡರ್‌ಗಳು, ಸೈಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ರೈಲ್ವೆ ಟ್ರ್ಯಾಕ್‌ ಮೇಲೆ ಇರಿಸಿದ 24 ಘಟನೆಗಳು ವರದಿಯಾಗಿವೆ. ಇವೆಲ್ಲವೂ ರೈಲನ್ನು ಹಳಿತಪ್ಪಿಸುವ ಘಟನೆಗಳು ಎಂದು ತಿಳಿಸಲಾಗಿದೆ. ಇವುಗಳಲ್ಲಿ, 15 ಘಟನೆಗಳು ಆಗಸ್ಟ್‌ನಲ್ಲಿ ಸಂಭವಿಸಿವೆ, ಸೆಪ್ಟೆಂಬರ್‌ನಲ್ಲಿ ಐದು ಘಟನೆಗಳು ರೈಲ್ವೆ ಸುರಕ್ಷತೆಯ ಬಗ್ಗೆ ಕಾಳಜಿ ಹೆಚ್ಚಾಗಬೇಕು ಎಂದು ಸೂಚಿಸಿದೆ.

ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್: ನಿರಂತರ ರೈಲ್ವೆ ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ