ಇತ್ತೀಚೆಗೆ ಚಲಿಸುವ ಬೈಕ್ ಮೇಲೆ ಯುವಕ ಯುವತಿಯರ ರೊಮಾನ್ಸ್ ಹೆಚ್ಚಾಗಿದೆ. ಕೆಲವರು ಪ್ರಾಣವನ್ನು ಲೆಕ್ಕಿಸದೇ ವೇಗವಾಗಿ ಸಂಚರಿಸುವ ಬೈಕ್‌ನಲ್ಲಿ ಪರಸ್ಪರ ಕಿಸ್ಸಿಂಗ್ ಮಾಡುತ್ತಾ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ಗಾಜಿಯಾಬಾದ್‌: ಇತ್ತೀಚೆಗೆ ಚಲಿಸುವ ಬೈಕ್ ಮೇಲೆ ಯುವಕ ಯುವತಿಯರ ರೊಮಾನ್ಸ್ ಹೆಚ್ಚಾಗಿದೆ. ಕೆಲವರು ಪ್ರಾಣವನ್ನು ಲೆಕ್ಕಿಸದೇ ವೇಗವಾಗಿ ಸಂಚರಿಸುವ ಬೈಕ್‌ನಲ್ಲಿ ಪರಸ್ಪರ ಕಿಸ್ಸಿಂಗ್ ಮಾಡುತ್ತಾ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಇತ್ತೀಚೆಗೆ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಇದನ್ನು ಕೆಲ ಯುವ ಸಮೂಹ ಟ್ರೆಂಡೆಂದು ಭಾವಿಸಿದ್ದಾರೋ ಗೊತ್ತಿಲ್ಲ, ಆದರೆ ಇಂತಹ ಘಟನೆಗಳು ಈಗ ಹೆಚ್ಚು ಹೆಚ್ಚು ನಡೆಯುತ್ತಿದ್ದು, ಈಗ ಮತ್ತೊಂದು ಅಂತಹದ್ದೇ ವೀಡಿಯೋ ವೈರಲ್ ಆಗಿದೆ. 

ಗಾಜಿಯಾಬಾದ್‌ ಹೈವೇಯಲ್ಲಿ (Ghaziabad Highway) ಈ ವೀಡಿಯೋ ಸೆರೆ ಆಗಿದೆ. ವೇಗವಾಗಿ ಸಂಚರಿಸುತ್ತಿರುವ ಬೈಕ್‌ನಲ್ಲಿ ಜೋಡಿಗಳು ಪರಸ್ಪರ ಕಿಸ್ ಮಾಡುತ್ತಿದ್ದಾರೆ. ಯುವತಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಯುವಕ ಬೈಕ್ ಓಡಿಸುತ್ತಿದ್ದಾನೆ. ಇದೆ ವೇಳೆ ಇಬ್ಬರು ಪರಸ್ಪರ ಕಿಸ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. 

 ಈ ವೀಡಿಯೋ ನೋಡಿದ ಅನೇಕರು ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಂತಹವರು ತಮ್ಮ ಜೀವವನ್ನು ಬಲಿ ಕೊಡುವುದಲ್ಲದೇ ಇತರರ ಪ್ರಾಣಕ್ಕೂ ಎರವಾಗುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರುಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಚಾಲಕನನ್ನು ಗುರುತಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಟ್ವಿಟ್ ಮೂಲಕ ತಿಳಿಸಿದ್ದಾರೆ. 

ಅಕ್ಷಯ್‌ ಕುಮಾರ್ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, "ಅವರು ಹೇಳುತ್ತಾರೆ, ನಾನು ಸಾಯುತ್ತೇನೆ ನನ್ನ ಪ್ರಿಯ, ನಾನು ನಿನ್ನನ್ನು ನನ್ನೊಂದಿಗೆ ಕರೆದುಕೊಂಡು ಸಾಯುತ್ತೇನೆ ಎಂದು ಹೇಳುತ್ತಾರೆ' ಅಲ್ಲವೇ ಆದರೆ ನಾವು ಸಾಮಾನ್ಯ ಜನ ನಿಯಮ ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇವರ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಗಾಜಿಯಾಬಾದ್ ಪೊಲೀಸರು, ಆ ಸವಾರನನ್ನು ಪತ್ತೆ ಮಾಡಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ರಾಜಸ್ಥಾನದ ಅಜ್ಮೇರ್‌ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ರಸ್ತೆಯಲ್ಲಿ ಪ್ರೇಮಿಗಳ ಪ್ರೇಮ ಪ್ರದರ್ಶನ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿತ್ತು, ಇದಕ್ಕೂ ಮೊದಲು ತೆಲಂಗಾಣದ ಜಿಲ್ಲೆಯೊಂದರಲ್ಲಿಯೂ ಪ್ರೇಮಿಗಳ ಸಾಹಸ ವರದಿಯಾಗಿದೆ. 

Scroll to load tweet…