ಪಟನಾ (ಸೆ.11): ಬಿಹಾರ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿಗೆ ಆಘಾತ ಎದುರಾಗಿದೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಕೇಂದ್ರ ಸಚಿವ ರಘುವಂಶ ಸಿಂಗ್‌ ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.. ‘ಕಳೆದ 32 ವರ್ಷಗಳಿಂದ ನಿಮ್ಮ ಜೊತೆ ಇದ್ದೇನೆ. ಪಕ್ಷದ ನಾಯಕರು, ಕಾರ‍್ಯಕರ್ತರು, ಸಾಮಾನ್ಯ ಜನರಿಂದ ಸಾಕಷ್ಟುಪ್ರೀತಿ ಸಂಪಾದಿಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಎಂದು ರಾಜೀನಾಮೆ ಪತ್ರದಲ್ಲಿ ಬರೆದು ಪಕ್ಷದ ಮುಖ್ಯಸ್ಥ ಲಾಲುಗೆ ಕಳುಹಿಸಿದ್ದಾರೆ. ಬಿಹಾರದ ವಿರೋಧ ಪಕ್ಷ ನಾಯಕ ತೇಜಸ್ವಿ ಯಾದವ್‌ ಅವರ ಕಾರ‍್ಯವೈಖರಿ ಬಗೆಗಿನ ಅಸಮಾಧಾನದಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಶಕಗಳ ಕಾಲ ಲಾಲು ಹಾಗೂ ಆರ್‌ಜೆಡಿಯೊಂದಿಗೆ ಗುರುತಿಸಿಕೊಂಡಿದ್ದ ಹಿರಿಯ ನಾಯಕನ ರಾಜೀನಾಮೆಯಿಂದ ಪಕ್ಷಕ್ಕೆ ಸಂಕಷ್ಟಕ್ಕೆ ಸಿಲುಕಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಹಾರ ಜೊತೆ ರಾಜ್ಯದ ಎರಡು ಕ್ಷೇತ್ರಗಳಿಗೂ ಚುನಾವಣೆ

ನಿತಿಶ್ ಸಂಪುಟದ ಮತ್ರಿಗೆ RJDಗ
ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗಲೇ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗೆ ಸಹ ಹಿನ್ನಡೆಯಾಗಿದೆ. ನಿತೀಶ್‌ ಸಂಪುಟದಲ್ಲಿ ಮಂತ್ರಿಯಾಗಿದ್ದ ಪ್ರಭಾವಿ ದಲಿತ ಮುಖಂಡ ಶ್ಯಾಂ ರಜಕ್‌ ಅವರು ಮತ್ತೆ ಲಾಲು ಪ್ರಸಾದ್‌ ಯಾದವ್‌ ಅವರ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ಸೋಮವಾರ ಮರಳಿದ್ದಾರೆ. ರಜಕ್‌ ಪಕ್ಷಾಂತರದ ಸುಳಿವು ಅರಿತಿದ್ದ ನಿತೀಶ್‌ ಕುಮಾರ್‌ ಭಾನುವಾರವಷ್ಟೇ ಅವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಿದ್ದರು.ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯುನಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದರು. ಸೋಮವಾರ ಆರ್‌ಜೆಡಿ ಸೇರಿದ ರಜಕ್‌, ‘ನಮ್ಮ ನಾಯಕ ಲಾಲು ಅವರಿಂದ ಕಲಿತ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ತತ್ವಗಳಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ತಿಳಿಸಿದರು. ರಜಕ್‌ ಈ ಹಿಂದೆ ಆರ್‌ಜೆಡಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. 2009ರಲ್ಲಿ ಜೆಡಿಯು ಸೇರಿದ್ದರು.

ಕೋವಿಡ್ ಕಾರಣಕ್ಕೆ ಬಿಹಾರ ಚುನಾವಣೆ ಮುಂದಕ್ಕಿಲ್ಲ

ಲಾಲು ಪುತ್ರ ತೇಜ್‌ ವಿರುದ್ಧ ಸೊಸೆ ಐಶ್ವರ್ಯಾ ರಾಯ್‌ ಸ್ಫರ್ಧೆ ಸಾಧ್ಯತೆ
ಬಿಹಾರ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ಭಾರೀ ರಾಜಕೀಯ ದಾಳಗಳು ಉರುಳ ತೊಡಗಿವೆ. ಲಾಲು ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿರುದ್ಧ ಅವರಿಂದ ದೂರವಾಗಿರುವ ಪತ್ನಿ ಐಶ್ವರ್ಯಾ ರಾಯ್‌ ಸ್ಫರ್ಧೆ ಮಾಡುವ ಸಾಧ್ಯತೆ ಇದೆ. ಮುಂಬರುವ ಚುನಾವಣೆಯಲ್ಲಿ ಐಶ್ವರ್ಯಾ ತನ್ನ ಮಾಜಿ ಪತಿ ತೇಜ್‌ ಪ್ರತಾಪ್‌ ಯಾದವ್‌ ವಿರುದ್ಧ ಸ್ಫರ್ಧೆ ಮಾಡುವ ಸಾಧ್ಯತೆ ಇದೆ ಎಂದು ಆಕೆಯ ತಂದೆ ಚಂದ್ರಿಕಾ ರಾಯ್‌ ಹೇಳಿದ್ದಾರೆ. 2018ರಲ್ಲಿ ವಿವಾಹವಾಗಿದ್ದ ತೇಜ್‌ ಹಾಗೂ ಐಶ್ವರ್ಯಾ ಅವರ ವಿವಾಹ ಒಂದೇ ವರ್ಷದಲ್ಲಿ ಮುರಿದು ಬಿದ್ದಿತ್ತು. ಸದ್ಯ ಮಹುವಾ ಕ್ಷೇತ್ರದ ಶಾಸಕರಾಗಿರುವ ತೇಜ್‌, ತನ್ನ ಮಾಜಿ ಪತ್ನಿ ಸ್ಪರ್ಧೆ ಮಾಡುವ ಸಾಧ್ಯತೆ ಇರುವುದರಿಂದ ಕ್ಷೇತ್ರ ಬದಲಾಯಿಸಲಿದ್ದಾರೆ ಎನ್ನಲಾಗಿದೆ.