ಕೊರೋನಾ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಕೋರಿ ಅರ್ಜಿ| ಕೋವಿಡ್‌ ಕಾರಣಕ್ಕೆ ಚುನಾವಣೆ ಮುಂದಕ್ಕೆ  ಹಾಕಲಾಗದು: ಸುಪ್ರೀಂ

ನವದೆಹಲಿ(ಆ.29): ಕೊರೋನಾ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯನ್ನು ಶುಕ್ರವಾರ ಸುಪ್ರೀಂಕೋರ್ಟ್‌ ತಳ್ಳಿಹಾಕಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾ

ಅಶೋಕ್‌ ಭೂಷಣ್‌ ನೇತೃತ್ವದ ಪೀಠ, ‘ಚುನಾವಣೆಗೆ ಇನ್ನೂ ದಿನಾಂಕವೇ ನಿಗದಿಯಾಗಿಲ್ಲ. ಅಲ್ಲದೆ ಚುನಾವಣೆಯನ್ನು ಮುಂದೂಡುವಂತೆ ಅಥವಾ ತಡೆಹಿಡಿಯುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೂಚಿಸಲು ಸಾಧ್ಯವಿಲ್ಲ. ಆಯೋಗವೇ ಇದೆಲ್ಲವನ್ನೂ ನಿರ್ಧರಿಸಲಿದೆ. ಅದೂ ಅಲ್ಲದೆ ಚುನಾವಣೆ ಮುಂದೂಡಿಕೆಗೆ ಕೊರೋನಾ ಎಂಬುದು ಸೂಕ್ತ ಕಾರಣವಾಗದು’ ಎಂದು ಹೇಳಿದೆ.

ಕೋವಿಡ್‌-19 ವ್ಯಾಪಿಸಿರುವ ಹಿನ್ನಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅವಿನಾಶ್‌ ಠಾಕೂರ್‌ ಎಂಬವರು ಪಿಐಎಲ್‌ ಸಲ್ಲಿಸಿದ್ದರು