ಪ್ರದೀಪ್‌ ಮೆಹ್ರಾ ಶ್ರಮಕ್ಕೆ ಕೊನೆಗೂ ಸಿಕ್ತು ಪ್ರತಿಫಲ ಸಾಧ್ಯವಾದ ನೆರವು ನೀಡುವುದಾಗಿ ಹೇಳಿದ ಸತೀಶ್ ದುವಾ ಪ್ರದೀಪ್ ಮೆಹ್ರಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ದೆಹಲಿ(ಮಾ.22): ಸೇನೆ ಸೇರುವ ಆಸೆಯಿಂದ ಪ್ರತಿದಿನ ಕೆಲಸ ಮುಗಿಸಿ ಓಡುತ್ತಲೇ ಮನೆ ಸೇರುತ್ತಿದ್ದ 19ರ ಹರೆಯದ ತರುಣ ಪ್ರದೀಪ್‌ ಮೆಹ್ರಾ ಅವರ ವಿಡಿಯೋವನ್ನು ನೀವು ಈಗಾಗಲೇ ನೋಡಿರಬಹುದು. ಹಲವರಿಗೆ ಸ್ಪೂರ್ತಿ ತುಂಬಿರುವ ಇವರ ಜೀವನ ಲೆಫ್ಟಿನೆಂಟ್ ಜನರಲ್ ಸತೀಶ್‌ ದುವಾ (Sathish Dua) ಅವರ ಗಮನವನ್ನು ಸೆಳೆದಿದ್ದು, ಪ್ರದೀಪ್ ಮೆಹ್ರಾಗೆ ಸೇನೆ ಸೇರಲು ಸಹಾಯ ಮಾಡುವುದಾಗಿ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ತರುಣ ಪ್ರದೀಪ್ ಮೆಹ್ರಾ ಅವರ ಜೋಶ್ ಶ್ಲಾಘನೀಯವಾಗಿದೆ. ಅವರ ಅರ್ಹತೆಯ ಆಧಾರದ ಮೇಲೆ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅವರಿಗೆ ಸಹಾಯ ಮಾಡಲು, ನಾನು ಕುಮಾನ್ ರೆಜಿಮೆಂಟ್‌ನ ಕರ್ನಲ್, ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಕಲಿತಾ ಅವರೊಂದಿಗೆ ಸಂವಾದ ನಡೆಸಿದ್ದೇನೆ. ಅವರು ತನ್ನ ರೆಜಿಮೆಂಟ್‌ಗೆ ನೇಮಕಾತಿಗಾಗಿ ಹುಡುಗನಿಗೆ ತರಬೇತಿ ನೀಡಲು ಅಗತ್ಯವಾದುದನ್ನು ಒದಗಿಸಲಿದ್ದಾರೆ ಎಂದು ಟ್ವಿಟ್‌ ಮಾಡಿದ್ದಾರೆ.

Viral Video ಕೆಲಸ ಮುಗಿಸಿ ಪ್ರತಿ ದಿನ 10 ಕಿ.ಮೀ ಓಡುತ್ತಲೇ ಮನೆ ಸೇರೋ ಯುವಕ, ಕಾರಣ ತಿಳಿದು ದೇಶವೇ ಹೇಳುತ್ತಿದೆ ಸಲ್ಯೂಟ್!

ಸಾಮಾಜಿಕ ಜಾಲತಾಣಗಳು ಕೆಲವರಿಗೆ ಶಾಪವಾಗಿ ಪರಿಣಮಿಸಿದರೆ ಮತ್ತೆ ಕೆಲವರಿಗೆ ವರವಾಗಿ ಪರಿಣಮಿಸಿದ್ದು ಇದೆ. ಈ ಹುಡುಗನ ವಿಚಾರದಲ್ಲಂತು ಅದು ನಿಜ ಆಗಿದೆ. ಮೆಕ್‌ ಡೊನಾಲ್ಡ್‌ನಲ್ಲಿ (Mecdonald) ಕೆಲಸ ಮಾಡುವ ಪ್ರದೀಪ್ ಮೆಹ್ರಾ (Pradeep Mehra), ಪ್ರತಿದಿನ ತಮ್ಮ ಕೆಲಸ ಮುಗಿಸಿದ ಬಳಿಕ ರಾತ್ರಿ ಓಡುತ್ತಲೇ ತಮ್ಮ ಮನೆಗೆ ಹೋಗಿ ತಲುಪುತ್ತಿದ್ದರು. ಹೀಗೆ ಓಡುತ್ತಾ ಮನೆಗೆ ಹೋಗುತ್ತಿರಬೇಕಾದರೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ವಿನೋದ್‌ ಕಪ್ರಿ (Vinod Kapri) ಅವರಿಗೆ ಪ್ರದೀಪ್ ಮೆಹ್ರಾ ದಾರಿ ಮಧ್ಯೆ ಸಿಕ್ಕಿದ್ದಾನೆ. 

ಈ ವೇಳೆ ಅವರು ಮಧ್ಯರಾತ್ರಿ ರಸ್ತೆಯಲ್ಲಿ ಹುಡುಗ ಓಡುವುದನ್ನು ನೋಡಿ ಏನೋ ಸಂಕಷ್ಟಕ್ಕೊಳಗಾಗಿರಬೇಕು ಎಂದು ಭಾವಿಸಿ ಕಾರನ್ನು ನಿಧನ ಮಾಡಿ ಆತನನ್ನು ಮಾತನಾಡಿಸಿದ್ದಾರೆ. ಅಲ್ಲದೇ ಏಕೆ ಓಡಿಕೊಂಡು ಹೋಗುತ್ತಿರುವೆ ನಾನು ನಿನಗೆ ಡ್ರಾಪ್‌ ನೀಡುವೆ ಎಂದು ಕೇಳುತ್ತಾರೆ. ಆದರೆ ಅದನ್ನು ನಯವಾಗಿ ಆತ ತಿರಸ್ಕರಿಸುತ್ತಾನೆ. ಈ ವೇಳೆ ಏನು ಕೆಲಸ ಮಾಡುತ್ತಿರುವುದು ಈ ಓಟ ಏಕೆ ಎಂದು ಕೇಳಿದ ಅವರಿಗೆ ತಾನು ಮ್ಯಾಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ತರುಣ ಉತ್ತರಿಸಿದ್ದಾನೆ. ಅಲ್ಲದೇ ಸೇನೆಗೆ ಸೇರಲು ನಿರಂತರ ಅಭ್ಯಾಸ ಬೇಕು. ನನಗೆ ಅಭ್ಯಾಸಕ್ಕೆಂದೇ ಸಮಯ ನಿಗದಿಗೊಳಿಸಲು ಸಮಯವಿಲ್ಲ. ಹೀಗಾಗಿ ಮನೆಗೆ ಹೋಗುವಾಗ ಓಡುತ್ತಾ ಸಾಗಿ ಅಭ್ಯಾಸ ನಡೆಸುತ್ತಿರುವುದಾಗಿ ಹೇಳಿದ್ದಾನೆ.

ಅಂದು ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಕೆಫೆಯೊಂದರ ಮಾಲಕಿ

ಈ ವೇಳೆ ಕಪ್ರಿ ಅವರು ಆತನ ಕುಟುಂಬದವರ ಬಗ್ಗೆಯೂ ಕೇಳಿದ್ದಾರೆ. ಈ ವೇಳೆ ಅಮ್ಮ ಅನಾರೋಗ್ಯ ಪೀಡಿತಳಾಗಿರುವುದಾಗಿ ತರುಣ ಪ್ರದೀಪ್ ಮೆಹ್ರಾ ಹೇಳುತ್ತಾನೆ. ಅಲ್ಲದೇ ಈ ವೇಳೆ ನನ್ನ ಮನಗೆ ತೆರಳಿ ಆಹಾರ ಸೇವಿಸೋಣ ಬಳಿಕ ಕಾರಿನಲ್ಲಿ ಮನೆಗೆ ಬಿಡುವುದಾಗಿ ಮೆಹ್ರಾಗೆ ಕಪ್ರಿ ಕೇಳಿಕೊಂಡಿದ್ದಾರೆ. ಇದಕ್ಕೊಪ್ಪದ ಆತ ತನ್ನ ಸಹೋದರ ಮನೆಯಲ್ಲಿದ್ದು, ಆತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾನೆ. ಹೀಗಾಗಿ ನಾನು ಮನೆಗೆ ತೆರಳಲೇಬೇಕಿದೆ ಎಂದಿದ್ದಾನೆ. ಅಲ್ಲದೇ ಕಪ್ರಿ ಈ ವಿಡಿಯೋ ವೈರಲ್ ಆಗಲಿದೆ ಎಂದಾಗ, ಆಗಲಿ ನಾನೇನು ತಪ್ಪು ಮಾಡುತ್ತಿಲ್ಲ ಎಂದು ಪ್ರದೀಪ್ ಮೆಹ್ರಾ ಉತ್ತರಿಸಿದ್ದ.

ಈ ವಿಡಿಯೋವನ್ನು ವಿನೋದ್‌ ಕಪ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಡಿಯೋ ವೈರಲ್‌ ಆಗಿದ್ದು, ಲಕ್ಷಾಂತರ ಯುವ ಸಮೂಹಕ್ಕೆ ಪ್ರದೀಪ್‌ ಮೆಹ್ರಾ ಸ್ಪೂರ್ತಿಯ ಸೆಲೆಯಾಗಿದ್ದಾನೆ. ಈಗ ಲೆಫ್ಟಿನೆಂಟ್ ಒಬ್ಬರು ಪ್ರದೀಪ್ ಮೆಹ್ರಾ ಸಹಾಯಕ್ಕೆ ಧಾವಿಸಿ ಬಂದಿದ್ದು, ಆತ ಪಟ್ಟ ಶ್ರಮಕ್ಕೆ ಫಲ ಸಿಗುವ ಸಮಯ ಕೊನೆಗೂ ಬಂದಿದೆ.