Asianet Suvarna News Asianet Suvarna News

Covid Fourth Wave: ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್‌ ಅಲೆ: ಮತ್ತೆ ಆತಂಕ

ದೇಶದಲ್ಲಿ ಕೋವಿಡ್‌ 3ನೇ ಅಲೆ ಇನ್ನೇನು ಅಂತ್ಯಕ್ಕೆ ಸಮೀಪಿಸಿದೆ ಅನ್ನುವಷ್ಟರಲ್ಲೇ, 2022ರ ಜೂನ್‌ ಅಂತ್ಯದ ವೇಳೆಗೆ ದೇಶದ ಮೇಲೆ ಸೋಂಕಿನ 4ನೇ ದಾಳಿಯ ಸಾಧ್ಯತೆ ಇದೆ ಎಂದು ಐಐಟಿ ಕಾನ್ಪುರದ ತಜ್ಞರ ತಂಡ ಎಚ್ಚರಿಸಿದೆ.

Researchers Predict Fourth Wave of Covid 19 in India around June 22 might Last for 4 Months gvd
Author
Bangalore, First Published Feb 28, 2022, 3:10 AM IST

ಹೈದರಾಬಾದ್‌ (ಫೆ.28): ದೇಶದಲ್ಲಿ (India) ಕೋವಿಡ್‌ 3ನೇ ಅಲೆ (Covid Third Wave) ಇನ್ನೇನು ಅಂತ್ಯಕ್ಕೆ ಸಮೀಪಿಸಿದೆ ಅನ್ನುವಷ್ಟರಲ್ಲೇ, 2022ರ ಜೂನ್‌ ಅಂತ್ಯದ ವೇಳೆಗೆ ದೇಶದ ಮೇಲೆ ಸೋಂಕಿನ 4ನೇ ದಾಳಿಯ ಸಾಧ್ಯತೆ ಇದೆ ಎಂದು ಐಐಟಿ (IIT) ಕಾನ್ಪುರದ ತಜ್ಞರ ತಂಡ ಎಚ್ಚರಿಸಿದೆ.

 ಒಂದು ವೇಳೆ 4ನೇ ಅಲೆ ಕಾಣಿಸಿಕೊಂಡಿದ್ದೇ ಆದಲ್ಲಿ ಅದರ ಪರಿಣಾಮಗಳು, ಆಗ ಹುಟ್ಟಿಕೊಳ್ಳಬಹುದಾದ ಹೊಸ ರೂಪಾಂತರಿಯ ತೀವ್ರತೆ, ಕೋವಿಡ್‌ ಲಸಿಕೆ  (Covid Vaccine)ವಿತರಣೆಯ ಸ್ಥಿತಿಗತಿ, ಬೂಸ್ಟರ್‌ ಡೋಸ್‌ (Booster Dose) ನೀಡಿಕೆ ಅವಲಂಬಿಸಿರುತ್ತದೆ ಎಂದು ಹೇಳಿದೆ.  ಐಐಟಿ ಕಾನ್ಪುರದ ಎಸ್‌.ಪಿ.ರಾಜೇಶ್‌ಭಾಯಿ, ಶುಭ್ರಾಶಂಕರ್‌ ಧರ್‌ ಮತ್ತು ಶಲಭ್‌ ಅವರನ್ನೊಳಗೊಂಡ ತಂಡವು ಬೂಟ್‌ಸ್ಟ್ರಾಪ್‌ ಎಂಬ ಸಾಂಖ್ಯಿಕ ಮಾದರಿಯನ್ನು ಆಧರಿಸಿ ವರದಿಯೊಂದನ್ನು ತಯಾರಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ.

ಮುನ್ಸೂಚನೆ ಏನು?: ತಜ್ಞರ ತಂಡದ ವರದಿ ಅನ್ವಯ, ಭಾರತದಲ್ಲಿ ಕೋವಿಡ್‌ ಮೊದಲ ಪ್ರಕರಣ ಕಾಣಿಸಿಕೊಂಡ (2020 ಜ.30) 936 ದಿನಗಳ ನಂತರ 4ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಂದರೆ 4ನೇ ಅಲೆಯು ಜೂನ್‌ 22ರ ವೇಳೆಗೆ ಆರಂಭಗೊಂಡು, ಆಗಸ್ಟ್‌ 23-31ರ ಅವಧಿಯಲ್ಲಿ ತನ್ನ ಗರಿಷ್ಠ ಮಟ್ಟಮುಟ್ಟಲಿದೆ. ಅಕ್ಟೋಬರ್‌ 24ರ ವೇಳೆಗೆ ಅದು ಅಂತ್ಯವಾಗಲಿದೆ. 

Covid Third Wave: ಜ.23ರಂದು ದೇಶದಲ್ಲಿ ಕೋವಿಡ್‌ ತಾರಕಕ್ಕೆ: ಹಿರಿಯ ವಿಜ್ಞಾನಿ ಡಾ. ಮಣೀಂದ್ರ

ಅಂದರೆ ಸುಮಾರು 4 ತಿಂಗಳ ಕಾಲ ದೇಶದಲ್ಲಿ ತನ್ನ ಪ್ರಭಾವವನ್ನು ಹೊಂದಿರಲಿದೆ ಎಂದು ಹೇಳಿದೆ. ಈ ತಜ್ಞರ ತಂಡ ಕೋವಿಡ್‌ನ ಒಟ್ಟು 3 ಅಲೆಯ ಬಗ್ಗೆ ತನ್ನ ವಿಶ್ಲೇಷಣೆಯನ್ನು ಇದುವರೆಗೆ ಮಾಡಿದ್ದು, ಈ ಪೈಕಿ 3ನೇ ಅಲೆ ಕುರಿತ ಲೆಕ್ಕಾಚಾರ ಬಹುತೇಕ ಪಕ್ಕಾ ಆಗಿತ್ತು. ಹೀಗಾಗಿ ಈ ವರದಿ ಸಾಕಷ್ಟುಕುತೂಹಲ ಮತ್ತು ಆತಂಕ ಮೂಡಿಸಿದೆ.

ತೀವ್ರತೆ ಎಷ್ಟು?: ಆದರೆ 4ನೇ ಅಲೆಯ ಗಂಭೀರತೆಯು ಆಗ ಉದ್ಭವಿಸಬಹುದಾದ ಕೋವಿಡ್‌ನ ಹೊಸ ರೂಪಾಂತರಿಯ ತೀವ್ರತೆ, ದೇಶದಲ್ಲಿ ಎಷ್ಟು ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಮತ್ತು ವೃದ್ಧರು, ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೇರಿದಂತೆ ಒಟ್ಟಾರೆ ಜನಸಮೂಹಕ್ಕೆ ನೀಡಿರುವ ಬೂಸ್ಟರ್‌ ಡೋಸ್‌ನ ಪ್ರಮಾಣವನ್ನು ಆಧರಿಸಿರುತ್ತದೆ ಎಂದು ವರದಿ ಹೇಳಿದೆ.

4ನೇ ಅಲೆ ಹೇಗಿರಲಿದೆ?
- ಭಾರತದಲ್ಲಿ 4ನೇ ಅಲೆಯ ತೀವ್ರತೆ ಹೊಸ ರೂಪಾಂತರಿ ಹಾಗೂ ಲಸಿಕಾಕರಣದ ಪ್ರಗತಿಯನ್ನು ಅವಲಂಬಿಸಿರುತ್ತದೆ.
- 4ನೇ ಅಲೆ ಜೂ.22ಕ್ಕೆ ಆರಂಭಗೊಂಡು, ಆ.23-31ರ ನಡುವೆ ಗರಿಷ್ಠಕ್ಕೆ ಮುಟ್ಟಿ, ಅ.24ರ ವೇಳಗೆ ಅಂತ್ಯವಾಗಲಿದೆ.
- 4ನೇ ಅಲೆ 4 ತಿಂಗಳ ಕಾಲ ಭಾರತವನ್ನು ಕಾಡುವ ಸಾಧ್ಯತೆಯಿದೆ ಎಂದು ಐಐಟಿ ತಜ್ಞರ ವರದಿ ಎಚ್ಚರಿಕೆ ನೀಡಿದೆ.

ಗುಡ್‌ ನ್ಯೂಸ್‌ ಕೊಟ್ಟ ಕಾನ್ಪುರ ಐಐಟಿ ಪ್ರೊಫೆಸರ್: ನಿರಂತರವಾಗಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮತ್ತು ಅದರ ಹೊಸ ರೂಪಾಂತರವಾದ ಓಮಿಕ್ರಾನ್ ಬಗ್ಗೆ ಪರಿಹಾರ ಸುದ್ದಿ ಇದೆ. ಈ ಸಂಚಿಕೆಯಲ್ಲಿ, ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರೊಫೆಸರ್ ಮನೀಂದ್ರ ಅಗರವಾಲ್ ಅವರು ಕೊರೋನದ ಮೂರನೇ ಅಲೆಯು ಎರಡನೇ ಅಲೆಯಷ್ಟು ಮಾರಕವಾಗುವುದಿಲ್ಲ ಮತ್ತು ಏಪ್ರಿಲ್ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. 

IIT UAE: ವಿದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಐತಿಹಾಸಿಕ ಒಪ್ಪಂದ!

ಪ್ರೊ. ಮಾರ್ಗಸೂಚಿಗಳನ್ನು ಅನುಸರಿಸದೆ ಹೆಚ್ಚಿನ ಸಂಖ್ಯೆಯ ಜನರು ಚುನಾವಣಾ ಸಮಾವೇಶಗಳನ್ನು ತಲುಪುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸೋಂಕಿನ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಚ್ಚರಿಕೆಯ ಅವಶ್ಯಕತೆಯಿದೆ ಎಂದು ವಾರ್ನ್ ಮಾಡಿದ್ದಾರೆ. ಸಮಾವೇಶಗಳು ಇದ್ದರೆ, ಸೋಂಕು ಸಮಯಕ್ಕಿಂತ ಮುಂಚಿತವಾಗಿ ತೆಗೆದುಕೊಳ್ಳಬಹುದು. ಚುನಾವಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ ಎಂದಿದ್ದಾರೆ. ಈ ಬಗ್ಗೆ ಅಧಿಕಾರ ಹೊಂದಿರುವ ಸಂಸ್ಥೆಗಳು ನಿರ್ಧರಿಸುತ್ತವೆ. 

ಎಲ್ಲರೂ ಜಾಗೃತರಾಗಿರಬೇಕು ಅಷ್ಟೇ. ತಮ್ಮ ಗಣಿತದ ಮಾದರಿಯ ಆಧಾರದ ಮೇಲೆ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಹೇಳುವ ಮನೀಂದ್ರ ಅಗರ್ವಾಲ್ ಪ್ರಕಾರ, ಜನವರಿಯಲ್ಲಿ ಭಾರತದಲ್ಲಿ ಮೂರನೇ ಅಲೆ ಬರಲಿದೆ, ಮಾರ್ಚ್‌ನಲ್ಲಿ ದಿನಕ್ಕೆ 1.8 ಲಕ್ಷ ಪ್ರಕರಣಗಳು ಬರಬಹುದು. ಪ್ರತಿ 10ರಲ್ಲಿ ಒಬ್ಬರಿಗೆ ಮಾತ್ರ ಆಸ್ಪತ್ರೆಯ ಅವಶ್ಯಕತೆ ಇರುವುದು ಸಮಾಧಾನದ ಸಂಗತಿ. ಮಾರ್ಚ್ ಮಧ್ಯದಲ್ಲಿ ಎರಡು ಲಕ್ಷ ಬೆಡ್‌ಗಳು ಬೇಕಾಗುತ್ತವೆ ಎಂದಿದ್ದಾರೆ.

Follow Us:
Download App:
  • android
  • ios