Covid Third Wave: ಜ.23ರಂದು ದೇಶದಲ್ಲಿ ಕೋವಿಡ್‌ ತಾರಕಕ್ಕೆ: ಹಿರಿಯ ವಿಜ್ಞಾನಿ ಡಾ. ಮಣೀಂದ್ರ

ಭಾರೀ ಆತಂಕ ಹುಟ್ಟುಹಾಕಿರುವ ಕೋವಿಡ್‌ 3ನೇ ಅಲೆ ಈ ವಾರ (ಜ.23ರ ವೇಳೆಗೆ) ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ತನ್ನ ಗರಿಷ್ಠ ಮಟ್ಟವನ್ನು ಮುಟ್ಟಲಿದೆ. ಬಳಿಕ ಸೋಂಕಿನ ಪ್ರಮಾಣ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಐಐಟಿಯ ಹಿರಿಯ ವಿಜ್ಞಾನಿ ಡಾ. ಮಣೀಂದ್ರ ಅಗ್ರವಾಲ್‌ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

Indias Third Covid Wave Likely To Peak On January 23 Daily Cases To Stay Below 4 Lakh gvd

ನವದೆಹಲಿ (ಜ.20): ಭಾರೀ ಆತಂಕ ಹುಟ್ಟುಹಾಕಿರುವ ಕೋವಿಡ್‌ 3ನೇ ಅಲೆ (Covid Third Wave) ಈ ವಾರ (ಜ.23ರ ವೇಳೆಗೆ) ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ತನ್ನ ಗರಿಷ್ಠ ಮಟ್ಟವನ್ನು ಮುಟ್ಟಲಿದೆ. ಬಳಿಕ ಸೋಂಕಿನ ಪ್ರಮಾಣ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಐಐಟಿಯ ಹಿರಿಯ ವಿಜ್ಞಾನಿ ಡಾ. ಮಣೀಂದ್ರ ಅಗ್ರವಾಲ್‌ (Dr Manindra Agrawal) ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಕೋವಿಡ್‌ ಆರಂಭದಿಂದಲೂ ಸೂತ್ರ ಮಾದರಿ ಬಳಸಿ ಕೋವಿಡ್‌ ಪ್ರಮಾಣದ ಏರಿಳಿಕೆಯ ಗತಿಯನ್ನು ಡಾ. ಮಣೀಂದ್ರ ಮತ್ತು ಅವರ ತಂಡ ವಿಶ್ಲೇಷಿಸುತ್ತಾ ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಅಗ್ರವಾಲ್‌, ‘ದೆಹಲಿ, ಮುಂಬೈ, ಕೋಲ್ಕತಾ ನಗರಗಳು ಸೋಂಕಿನ ಸಂಖ್ಯೆಯಲ್ಲಿ ಕಳೆದ 7 ದಿನಗಳಲ್ಲಿ ತಮ್ಮ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಗುಜರಾತ್‌ ಮತ್ತು ಹರ್ಯಾಣ ರಾಜ್ಯಗಳು ಈ ವಾರವೇ ಸೋಂಕಿನ ಗರಿಷ್ಠ ಮಟ್ಟಮುಟ್ಟಲಿವೆ. ಆಂಧ್ರಪ್ರದೇಶ, ಅಸ್ಸಾಂ, ತಮಿಳುನಾಡು ಮುಂದಿನ ವಾರ ತಮ್ಮ ಗರಿಷ್ಠ ಮಟ್ಟತಲುಪಲಿವೆ ಎಂದಿದ್ದಾರೆ.

ಇನ್ನು ಒಟ್ಟಾರೆಯಾಗಿ ದೇಶವು ಜ.23ರಂದು ತನ್ನ ಗರಿಷ್ಠ ಕೋವಿಡ್‌ ಪ್ರಕರಣಗಳನ್ನು ದಾಖಲಿಸಲಿದೆ. ಅಂದೂ ಕೂಡಾ ಸೋಂಕಿತರ ಪ್ರಮಾಣ 4 ಲಕ್ಷಕ್ಕಿಂತ ಕಡಿಮೆ ಇರಲಿದೆ. ಇದು ಕೋವಿಡ್‌ 2ನೇ ಅಲೆಯಲ್ಲಿ ದಾಖಲಾಗಿದ್ದ ಗರಿಷ್ಠ ಪ್ರಮಾಣಕ್ಕಿಂತಲೂ ಕಡಿಮೆಯಾಗಿರಲಿದೆ ಎಂದು ಡಾ.ಮಣೀಂದ್ರ ಹೇಳಿದ್ದಾರೆ.

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

11 ಸೂಚ್ಯಂಕಗಳನ್ನು ಆಧರಿಸಿದ ಅಂಕಿ ಅಂಶಗಳ ಅನ್ವಯ ದೇಶ ಜ.23ರಂದು ತನ್ನ ಗರಿಷ್ಠ ಸೋಂಕಿನ ಪ್ರಮಾಣ ದಾಖಲಿಸಲಿದೆ. ಅದರನ್ವಯ ಜ.23ರಂದು ಗರಿಷ್ಠ 7.2 ಲಕ್ಷ ಕೇಸು ದಾಖಲಾಗಬಹುದು. ಆದರೆ ಈಗಾಗಲೇ ಸೋಂಕಿನ ಪಥ ಬದಲಾಗಿರುವ ಕಾರಣ ಜ.23ರಂದು ದೈನಂದಿನ ಸೋಂಕು 4 ಲಕ್ಷ ದಾಟುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಎರಡು ಗುಂಪುಗಳಿವೆ. ಮೊದಲ ಗುಂಪು ಒಮಿಕ್ರೋನ್‌ ವೈರಸ್‌ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿಲ್ಲ, ಆದರೆ ಎರಡನೇ ಗುಂಪು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದೆ. ಒಮಿಕ್ರೋನ್‌ ಮೊದಲಿಗೆ ಮೊದಲ ಗುಂಪಿನ ಮೇಲೆ ದಾಳಿ ನಡೆಸಿದ ಕಾರಣ, ಸೋಂಕು ಪ್ರಸರಣ ವೇಗ ಅತ್ಯಧಿಕವಾಗಿತ್ತು. ಹೀಗಾಗಿ ಹೆಚ್ಚಿನ ಪ್ರಕರಣಗಳು ದಾಖಲಾದವು. ಆದರೆ ಇದೀಗ ವೈರಸ್‌ ಎರಡನೇ ಗುಂಪಿನ ಮೇಲೆ ದಾಳಿ ನಡೆಸಿದೆ. ಅದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ, ಪ್ರಸರಣ ಪ್ರಮಾಣ ಕಡಿಮೆ ಇದೆ ಎಂದು ಡಾ.ಫಣೀಂದ್ರ ಹೇಳಿದ್ದಾರೆ.

ಈಗಾಗಲೇ ಗರಿಷ್ಠ ತಲುಪಿರುವ ನಗರಗಳು: ದೆಹಲಿ, ಮುಂಬೈ, ಕೋಲ್ಕತಾ

ಈ ವಾರ ಗರಿಷ್ಠ ತಲುಪಲಿರುವ ರಾಜ್ಯಗಳು: ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಗುಜರಾತ್‌, ಹರ್ಯಾಣ

ಮುಂದಿನ ವಾರ ಗರಿಷ್ಠ ತಲುಪಲಿರುವ ರಾಜ್ಯಗಳು: ಆಂಧ್ರಪ್ರದೇಶ, ಅಸ್ಸಾಂ, ತಮಿಳುನಾಡು

ಗುಡ್‌ ನ್ಯೂಸ್‌ ಕೊಟ್ಟ ಕಾನ್ಪುರ ಐಐಟಿ ಪ್ರೊಫೆಸರ್: ನಿರಂತರವಾಗಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮತ್ತು ಅದರ ಹೊಸ ರೂಪಾಂತರವಾದ ಓಮಿಕ್ರಾನ್ ಬಗ್ಗೆ ಪರಿಹಾರ ಸುದ್ದಿ ಇದೆ. ಈ ಸಂಚಿಕೆಯಲ್ಲಿ, ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರೊಫೆಸರ್ ಮನೀಂದ್ರ ಅಗರವಾಲ್ ಅವರು ಕೊರೋನದ ಮೂರನೇ ಅಲೆಯು ಎರಡನೇ ಅಲೆಯಷ್ಟು ಮಾರಕವಾಗುವುದಿಲ್ಲ ಮತ್ತು ಏಪ್ರಿಲ್ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. 

ಪ್ರೊ. ಮಾರ್ಗಸೂಚಿಗಳನ್ನು ಅನುಸರಿಸದೆ ಹೆಚ್ಚಿನ ಸಂಖ್ಯೆಯ ಜನರು ಚುನಾವಣಾ ಸಮಾವೇಶಗಳನ್ನು ತಲುಪುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸೋಂಕಿನ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಚ್ಚರಿಕೆಯ ಅವಶ್ಯಕತೆಯಿದೆ ಎಂದು ವಾರ್ನ್ ಮಾಡಿದ್ದಾರೆ. ಸಮಾವೇಶಗಳು ಇದ್ದರೆ, ಸೋಂಕು ಸಮಯಕ್ಕಿಂತ ಮುಂಚಿತವಾಗಿ ತೆಗೆದುಕೊಳ್ಳಬಹುದು. ಚುನಾವಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ ಎಂದಿದ್ದಾರೆ. ಈ ಬಗ್ಗೆ ಅಧಿಕಾರ ಹೊಂದಿರುವ ಸಂಸ್ಥೆಗಳು ನಿರ್ಧರಿಸುತ್ತವೆ. 

Corona 3rd Wave: ಕೋವಿಡ್‌ ಪ್ರಸರಣದ ಆರ್‌ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?

ಎಲ್ಲರೂ ಜಾಗೃತರಾಗಿರಬೇಕು ಅಷ್ಟೇ. ತಮ್ಮ ಗಣಿತದ ಮಾದರಿಯ ಆಧಾರದ ಮೇಲೆ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಹೇಳುವ ಮನೀಂದ್ರ ಅಗರ್ವಾಲ್ ಪ್ರಕಾರ, ಜನವರಿಯಲ್ಲಿ ಭಾರತದಲ್ಲಿ ಮೂರನೇ ಅಲೆ ಬರಲಿದೆ, ಮಾರ್ಚ್‌ನಲ್ಲಿ ದಿನಕ್ಕೆ 1.8 ಲಕ್ಷ ಪ್ರಕರಣಗಳು ಬರಬಹುದು. ಪ್ರತಿ 10ರಲ್ಲಿ ಒಬ್ಬರಿಗೆ ಮಾತ್ರ ಆಸ್ಪತ್ರೆಯ ಅವಶ್ಯಕತೆ ಇರುವುದು ಸಮಾಧಾನದ ಸಂಗತಿ. ಮಾರ್ಚ್ ಮಧ್ಯದಲ್ಲಿ ಎರಡು ಲಕ್ಷ ಬೆಡ್‌ಗಳು ಬೇಕಾಗುತ್ತವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios