ಯಬ್ಬಾ ಸಿಕ್ಕಾಪಟ್ಟೆ ಕಂಡೀಷನ್ಸ್..! ಕಾಂಗ್ರೆಸ್ ಸದಸ್ಯತ್ವ ಬೇಕಾ ? ಸ್ವಲ್ಪ ಕಂಡೀಷನ್ಸ್ ನೋಡ್ಕೊಳ್ಳಿ

ನವದೆಹಲಿ(ಅ.24): ಕಾಂಗ್ರೆಸ್‌ ಸದಸ್ಯತ್ವ ಸ್ವೀಕರಿಸಲು ಇಚ್ಚಿಸುವವರು ಇನ್ಮುಂದೆ ಮದ್ಯ, ಮಾದಕ ದ್ರವ್ಯ ಸೇವನೆ ಮಾಡಲ್ಲ ಎಂದು ಘೋಷಣೆ ಮಾಡಿಕೊಳ್ಳಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ಪಕ್ಷದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂಬ ವಾಗ್ದಾನವನ್ನೂ ಮಾಡಬೇಕಿದೆ.

ದೇಶದ ಅತ್ಯಂತ ಹಳೇ ಪಕ್ಷ ಎಂಬ ಖ್ಯಾತಿಯ ಕಾಂಗ್ರೆಸ್‌ ನ.1ರಿಂದ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದ್ದು, ಅದರ ಫಾರಂನಲ್ಲಿ ಹೊಸದಾಗಿ ಪಕ್ಷದ ಸದಸ್ಯತ್ವ ಬಯಸುವವರು ದೇಶದ ಕಾನೂನು ಮೀರಿ ಯಾವುದೇ ಸ್ವತ್ತು ಹೊಂದಿಲ್ಲ ಮತ್ತು ಪಕ್ಷ ಸೂಚಿಸಿದ ಯಾವುದೇ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಒಪ್ಪಿಕೊಳ್ಳಬೇಕು ಎಂಬ ಅಂಶಗಳಿವೆ.

ಲಸಿಕಾ ತಯಾರಕರ ಜೊತೆ ಮೋದಿ ಮಾತುಕತೆ; ಪ್ರಧಾನಿ ಕೊಂಡಾಡಿದ ಆದರ್ ಪೂನಾವಲ್ಲ!

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿ ಅವರು, ‘ ಮುಂದಿನ ವರ್ಷ ಆ.21ರಿಂದ ಸೆ.20ರವರೆಗೆ ನಡೆಯಲಿರುವ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ನ.1ರಿಂದ ಮಾ.31ರವರೆಗೆ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನವನ್ನು ಆರಂಭಿಸುತ್ತಿದೆ. ಹೀಗಾಗಿ ಕಾಂಗ್ರೆಸ್‌ ಸದಸ್ಯರೆಲ್ಲರೂ ಪಕ್ಷದ ಸಂವಿಧಾನವನ್ನು ಒಪ್ಪಿಕೊಳ್ಳಲೇಬೇಕು’ ಎಂದು ಹೇಳಿದರು.

ಸದಸ್ಯತ್ವ ಅರ್ಜಿಯಲ್ಲಿರುವ ಅಂಶಗಳು

  • ನಾನು ಪ್ರಮಾಣೀಕರಿಸಿದ ಖಾದಿ ಬಟ್ಟೆಯನ್ನು ತೊಡುವ ಅಭ್ಯಾಸ ಇರುವವನು
  • ನನಗೆ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯ ಚಟಗಳಿಲ್ಲ
  • ನಾನು ಸಾಮಾಜಿಕ ಅಸಮಾನತೆಯನ್ನು ನಂಬಲ್ಲ ಮತ್ತು ಪಾಲಿಸಲ್ಲ
  • ಜಾತಿ, ಧರ್ಮ ಎಂಬ ಬೇಧವಿಲ್ಲದೆ ಸಾಮಾಜಿಕ ಏಕತೆಯಲ್ಲಿ ನಂಬಿಕೆಯಿದೆ
  • ಕಾನೂನು ಮೀರಿ ನಾನು ಹೆಚ್ಚಿನ ಆಸ್ತಿಯನ್ನು ಹೊಂದಿಲ್ಲ
  • ಕಾರ್ಯಕಾರಿ ಸಮಿತಿ ನಿರ್ಧರಿಸಿದ ಯಾವುದೇ ಕೆಲಸಕ್ಕೂ ನಾನು ಸಿದ್ಧ
  • ಜಾತ್ಯತೀತ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ
  • ನಾನು ಪಕ್ಷವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಹಿರಂಗವಾಗಿ ಟೀಕಿಸಲ್ಲ