ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನವಿದೆ. ನವಭಾರತಕ್ಕಾಗಿ ನವ ಕರ್ನಾಟಕ ಎಂಬ ಧ್ಯೇಯದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು. 

Republic Day flag hoisting in bengaluru by governor thawar chand gehlot in manekshaw parade ground ash

ಬೆಂಗಳೂರು (ಜನವರಿ 26, 2023): ಇಂದು ಗಣರಾಜ್ಯೋತ್ಸವ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಿಎಂ ಬಸವರಾಜ್‌ ಬೊಮ್ಮಾಯಿ ಸೇರಿ ಹಲವರು ಭಾಗಿಯಾಗಿದ್ದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ರಾಜ್ಯಪಾಲ ತಾವರ್ಚಂದ್ ಗೆಹಲೋತ್, ಕರ್ನಾಟಕ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು, ದೇಶದ ಪ್ರಗತಿಪರ ರಾಜ್ಯಗಳಲ್ಲಿ  ಕರ್ನಾಟಕವೂ ಒಂದು. ರಾಜ್ಯದ ಸರ್ವಾಂಗೀಣ ನಿರಂತರ ಅಭಿವೃದ್ಧಿ ಉದ್ದೇಶ ಹೊಂದಿದ್ದು, ಮೂಲಭೂತ ಸೇವೆಗಳನ್ನು ಒದಗಿಸಲು ವಿಭಿನ್ನ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಅಲ್ಲದೆ, ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನವಿದೆ. ನವಭಾರತಕ್ಕಾಗಿ ನವ ಕರ್ನಾಟಕ ಎಂಬ ಧ್ಯೇಯದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲಾಗುತ್ತಿದೆ. ಅಮೃತ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗೃಹ ವಿದ್ಯುತ್ ಬಳಕೆದಾರರಿಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮೇ 1, 2022 ರಿಂದ ಈ ಯೋಜನೆ ಅನ್ವಯವಾಗುತ್ತಿದ್ದು, ಮಾಸಿಕ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನು ಓದಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ
 

Republic Day flag hoisting in bengaluru by governor thawar chand gehlot in manekshaw parade ground ashಅಲ್ಲದೆ, ಅಮೃತ ಶಾಲೆಗಳ ಯೋಜನೆ , ಅಮೃತ ಆರೋಗ್ಯ, ಮೂಲಸೌಕರ್ಯ, ಅಮೃತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ , ಅಮೃತ ಸ್ವಸಹಾಯ ಗುಂಪುಗಳ ಯೋಜನೆ, ಅಮೃತ ನವೋದಯ ಯೋಜನೆ, ಅಮೃತ ಕ್ರೀಡಾ ದತ್ತು ಯೋಜನೆ, 14 ಅಮೃತ ಮಹೋತ್ಸವ ಕಾರ್ಯಕ್ರಮಗಳು ರಾಜ್ಯದಲ್ಲಿ ಯಶಸ್ವಿ ಅನುಷ್ಠಾನಲಾಗಿದೆ. 2020-21 ರಲ್ಲಿ ಎಸ್ಡಿಜಿ ಸೂಚ್ಯಂಕ ವರದಿ ಪ್ರಕಾರ ಕರ್ನಾಟಕಕ್ಕೆ 4ನೇ ಸ್ಥಾನ ಲಭಿಸಿದೆ. ಕರ್ನಾಟಕವು ಸ್ವಚ್ಛಭಾರತ ಅಭಿಯಾನದಡಿ 2ನೇ ಸ್ಥಾನ ಪಡೆದಿದೆ. 2022-23 ಸಾಲಿಗೆ 20.19 ಲಕ್ಷ ರೈತರಿಗೆ ಸಾಲ ನೀಡಲಾಗಿದೆ. 15,066 ಕೋಟಿಗಳಷ್ಟು ಬೆಳೆ ಸ್ಥಾಲವನ್ನು ಡಿಸೆಂಬರ್ 2022 ರೊಳಗೆ  ನೀಡಲಾಗಿದೆ ಎಂದೂ ರಾಜ್ಯಪಾಲ ತಾವರ್ಚಂದ್‌ ಗೆಹಲೋತ್‌ ಮಾಣಿಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಧ್ವಜಾರೋಹಣದ ಬಳಿಕ ಹೇಳಿದರು. 
 
Republic Day flag hoisting in bengaluru by governor thawar chand gehlot in manekshaw parade ground ash

Latest Videos
Follow Us:
Download App:
  • android
  • ios