ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ಜಡ್ಜ್, ಶಿವಲಿಂಗ ತೆರವು ಮಾಡಿ ಅನ್ನೋ ತೀರ್ಪು ಇನ್ನೇನು ಪ್ರಕಟಿಸಬೇಕು ಅನ್ನುವಷ್ಟರಲ್ಲೇ ಕೋರ್ಟ್ ರಿಜಿಸ್ಟ್ರಾರ್ ಅಸ್ವಸ್ಥಗೊಂಡಿದ್ದಾರೆ. ಪ್ರಜ್ಞೆ ತಪ್ಪಿದ ರಿಜಿಸ್ಟ್ರಾರ್ ನೋಡಿ ಗಾಬರಿಗೊಂಡ ಹೈಕೋರ್ಟ್ ಜಡ್ಜ್ ಆದೇಶ ತಡೆ ಹಿಡಿದ್ದಾರೆ. ಬಳಿಕ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.
ಕೋಲ್ಕತಾ(ಆ.09) ಕಲ್ಕತಾ ಹೈಕೋರ್ಟ್‌ನಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಶಿವಲಿಂಗ ತೆರವು ಮಾಡಿ ಅನ್ನೋ ತೀರ್ಪು ಓದಲು ಆರಂಭಿಸುತ್ತಿದ್ದಂತೆ ಕೋರ್ಟ್ ರಿಜಿಸ್ಟ್ರಾರ್ ಕುಸಿದು ಬಿದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದಾರೆ. ಆತಂಕಗೊಂಡ ಜಡ್ಜ್, ತಕ್ಷಣವೇ ತೀರ್ಪು ಪ್ರಕಟಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಶಿವಲಿಂಗ ತೀರ್ಪು ತಡೆಹಿಡಿದ ಜಡ್ಜ್, ಈ ಪ್ರಕರಣ ಕುರಿತು ಕೆಳ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸೂಚಿಸಿದ್ದಾರೆ.
ಎಂದಿನಂತೆ ಕಲ್ಕತಾ ಹೈಕೋರ್ಟ್‌ನಲ್ಲಿ ವಾದ ವಿವಾದ ನಡೆಯುತ್ತಿತ್ತು. ಜಮೀನು ವಿವಾದದ ಕುರಿತು ಎರಡು ಪಕ್ಷದ ವಕೀಲರು ವಾದ ಮಂಡಿಸಿದ್ದರು. ಇದು ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದ ಇಬ್ಬರ ನಡುವಿನ ಜಮೀನು ವಿವಾದವಾಗಿತ್ತು. ಗೋವಿಂದ್ ಮಂಡಲ್ ಹಾಗೂ ಸುದೀಪ್ ಪಾಲ್ ನಡುವಿನ ಜಗಳ ಕೋರ್ಟ್ ಮೆಟ್ಟೇಲಿರಿತ್ತು. ಪಶ್ಚಿಮ ಬಂಗಾಳದ ಮುಶೀರಾಬಾದ್ ಜಿಲ್ಲೆಯ ಖಾದಿರ್‌ಪುರ್ ಗ್ರಾಮದಲ್ಲಿನ ಜಮೀನು ತಮಗೆ ಸೇರಿದ್ದು ಎಂದು ಇಲ್ಲಿ ಇದೇ ಜಮೀನನಲ್ಲಿದ್ದ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?
ಇತ್ತ ದಾಖಲೆ ಪ್ರಕಾರ ಇದು ನಮ್ಮ ಜಮೀನು ಎಂದು ಸುದೀಪ್ ಪಾಲ್ ಪರ ವಕೀಲರು ವಾದ ಮಂಡಿಸಿದ್ದಾರೆ. ಇಬ್ಬರ ವಾದ ವಿವಾದ ಆಲಿಸಿದ ಹೈಕೋರ್ಟ್ ಜಡ್ಜ್ ಜಾಯ್ ಸೇನಗುಪ್ತ ದಾಖಲೆಗಳ ಪರೀಶೀಲನೆ ನಡೆಸಿದ್ದಾರೆ. ಬಳಿಕ ತೀರ್ಪು ಪ್ರಕಟಿಸಲು ಮುಂದಾಗಿದ್ದಾರೆ. ದಾಖಲೆ ಪ್ರಕಾರ ಇದು ಸುದೀಪ್ ಪಾಲ್ ಅವರ ಜಮೀನು. ಹೀಗಾಗಿ ಇಲ್ಲಿರುವ ಶಿವಲಿಂಗ ತೆರವು ಮಾಡಿ ಎಂದು ತೀರ್ಪು ಓದಲು ಆರಂಭಿಸಿದ ಬೆನ್ನಲ್ಲೇ ಕೋರ್ಟ್ ರಿಜಿಸ್ಟ್ರಾರ್ ಅಸ್ವಸ್ಥಗೊಂಡಿದ್ದಾರೆ. ಕುಸಿದು ಬಿದ್ದ ರಿಜಿಸ್ಟ್ರಾರ್ ನೋಡಿದ ಜಡ್ಜ್ ಗಾಬರಿಗೊಂಡಿದ್ದಾರೆ.
ಶಿವಲಿಂಗ ತೆರವು ಮಾಡಿ ಅನ್ನೋ ತೀರ್ಪು ಓದುವ ಮೊದಲೇ ಯಾವತ್ತೂ ಲವಲವಿಕೆಯಿಂದ ಇದ್ದ ಕೋರ್ಟ್ ರಿಜಿಸ್ಟ್ರಾರ್ ಕುಸಿದು ಬಿದ್ದಿದ್ದಾರೆ. ಹೀಗಾಗಿ ಜಡ್ಜ್ ತಕ್ಷಣವೇ ಆದೇಶ ತಡೆ ಹಿಡಿದಿದ್ದಾರೆ. ಬಳಿಕ ಎರಡೂ ಕಡೆಯ ವಕೀಲರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಈ ಪ್ರಕರಣವನ್ನು ಕೆಳ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಿ.ಕೆಳ ನ್ಯಾಯಾಲಯದಲ್ಲಿ ಪ್ರಕರಣ ಕುರಿತು ಅರ್ಜಿ ಹಾಕಿ ಎಂದು ಸೂಚಿಸಿದ್ದಾರೆ.
Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ವರ್ಷ ಮೇ ತಿಂಗಳಲ್ಲಿ ಇದೇ ಜಮೀನು ವಿಚಾರ ಭಾರಿ ಸಂಘರ್ಷ ನಡೆದಿತ್ತು. ಈ ಕುರಿತು ಸುದೀಪ್ ಪಾಲ್ ಪೊಲೀಸರಿಗೆ ದೂರು ನೀಡಿದ್ದರು. ಕಳೆದೊಂದು ವರ್ಷದಿಂದ ಇದೇ ಜಮೀನು ವಿಚಾರದಲ್ಲಿ ಹಲವು ಬಾರಿ ಗಲಾಟೆಗಳು ನಡೆದಿದೆ. ಹೀಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಶಿವಲಿಂಗವನ್ನು ಗೋವಿಂದ್ ಮಂಡಲ್ ಪ್ರತಿಷ್ಠಾಪಿಸಿಲ್ಲ. ಈ ಜಮೀನಲ್ಲಿದ್ದ ಶಿವಲಿಂಗವಾಗಿದೆ. ಇಲ್ಲೊಂದು ದೇವಾಲಯವಿತ್ತು. ಆದರೆ ಶಿವಲಿಂಗ ಮಾತ್ರ ಉಳಿದಿದೆ ಎಂದು ವಾದ ಮಂಡಿಸಿದ್ದಾರೆ.
