ಪ್ರವಾದಿಗೆ ಅವಮಾನ, ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ, ಪ್ರತಿಭಟನೆ!

* ನೂಪುರ್‌ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ

* 8 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ, ಅಲ್ಲಲ್ಲಿ ಹಿಂಸಾಚಾರ

* ಪ್ರಯಾಗರಾಜ್‌, ರಾಂಚಿಯಲ್ಲಿ ಭಾರಿ ಹಿಂಸಾಚಾರ, ಬೆಂಕಿ, ಕಲ್ಲೆಸೆತ

 

Remarks on Prophet Violence breaks out in Ranchi section 144 imposed pod

ನವದೆಹಲಿ(ಜೂ.11): ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ವಜಾ ಆದ ಬಿಜೆಪಿ ಮುಖಂಡ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರದ ನಮಾಜ್‌ ಬಳಿಕ ದೇಶಾದ 8 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರ ಕಲ್ಲು ತೂರಾಟಗಳು ನಡೆದಿವೆ.

ದೆಹಲಿ, ಹೈದರಾಬಾದ್‌, ಉತ್ತರಪ್ರದೇಶ, ತೆಲಂಗಾಣ, ಪ.ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ ಜಮ್ಮು ಕಾಶ್ಮೀರದ ಕೆಲವು ಜಿಲ್ಲೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಫäರ್‍್ಯ ಹೇರಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಹಾಗೂ ಜಾರ್ಖಂಡ್‌ನ ರಾಂಚಿಯಲ್ಲಿ ಹಿಂಸಾಚಾರ ನಡೆದಿದೆ.

ದಿಲ್ಲಿ ಜಾಮಾ ಮಸೀದಿ ಬಳಿ:

ಶುಕ್ರವಾರದ ನಮಾಜ್‌ ಬಳಿಕ ದೆಹಲಿಯ ಜಾಮಾ ಮಸೀದಿಯಲ್ಲಿ ಸುಮಾರು 300 ಜನರು ಮಾಜಿ ಬಿಜೆಪಿ ವಕ್ತಾರೆಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ನೂಪುರ್‌ ಶರ್ಮಾ ಹಾಗೂ ನವೀನ್‌ ಜಿಂದಾಲ್‌ ಅವರ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದ್ದಾರೆ. ಅಹಿತಕರ ಘಟನೆ ನಡೆಯದಂತೇ ಪೊಲೀಸರ ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಸುಮಾರು 15-20 ನಿಮಿಷಗಳ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಪೊಲೀಸರು ಪ್ರತಿಭಟನಾಕಾರರನ್ನು ಅವರು ಚದುರಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಹಿಂಸಾಚಾರ, ಬೆಂಕಿ:

ಉತ್ತರಪ್ರದೇಶದ ರಾಜಧಾನಿ ಲಖನೌ, ಸಹರಾನ್‌ಪುರ, ಮೊರಾದಾಬಾದ್‌, ರಾಮಪುರದಲ್ಲಿ ಜನರು ನೂಪುರ್‌ ಶರ್ಮಾ ವಿರುದ್ಧ ಘೋಷಣೆ ಕೂಗಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ನಮಾಜ್‌ ಬಳಿಕ ಪ್ರಯಾಗರಾಜ್‌ನಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಅಂಗಡಿಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಆಶ್ರುವಾಯು ಪ್ರಯೋಗಿಸಿ ಜನರನ್ನು ಚದುರಿಸಿ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಭೋಜಪುರದಲ್ಲಿ ನೂಪುರ್‌ ಶರ್ಮಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಕಾನ್ಪುರದಲ್ಲಿ ಕಳೆದ ವಾರವೇ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರ ಬಿಗಿ ಬಂದೋಬಸ್ತ ಮಾಡಲಾಗಿದೆ. ರಾಜ್ಯಾದ್ಯಂತ ಹೈ ಅಲರ್ಚ್‌ ಘೋಷಿಸಲಾಗಿದೆ. ಉತ್ತರಪ್ರದೇಶದ ದೇವಬಂದ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದಕ್ಕಾಗಿ 5 ಜನರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯದ ವಿವಿಧೆಡೆ ಕಲ್ಲು ತೂರಾಟ ನಡೆಸಿದ ಗಲಭೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ರಾಂಚಿಯಲ್ಲಿ ಹಿಂಸೆ, ಗಾಳಿಯಲ್ಲಿ ಗುಂಡು:

ಜಾರ್ಖಂಡದ ರಾಂಚಿಯಲ್ಲಿ ಮುಂಜಾನೆಯಿಂದ ಪ್ರತಿಭಟನಾ ಸ್ವರೂಪವಾಗಿ 1,100ಕ್ಕೂ ಹೆಚ್ಚಿನ ಅಂಗಡಿಗಳನ್ನು ಮುಚ್ಚಿ, ಅಂಗಡಿಗಳ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತಿತ್ತು. ಶುಕ್ರವಾರದ ಮಧ್ಯಾಹ್ನದ ನಮಾಜ್‌ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇಲ್ಲಿಯ ಹನುಮಾನ್‌ ದೇವಾಲಯದ ಎದುರು ನೂರಾರು ಜನರು ನೆರೆದು ನೂಪುರ್‌ ಶರ್ಮಾ ವಿರುದ್ಧ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲು ಗುಂಡು ಹಾರಿಸಿದ್ದು, ಲಾಠಿ ಚಾಜ್‌ರ್‍ ನಡೆಸಿದ್ದಾರೆ. ಈ ಗಲಭೆಯಲ್ಲಿ ಹಲವು ಪೊಲೀಸ್‌ ಸಿಬ್ಬಂದಿಗೂ ತೀವ್ರ ಗಾಯಗಳಾಗಿವೆ.

ಕಾಶ್ಮೀರ ಉದ್ವಿಗ್ನ, ಕಫä್ರ್ಯ:

ಶ್ರೀನಗರದ ಬಾಟ್‌ಮಾಲೂ ಹಾಗೂ ಶೋಪಿಯಾನ್‌, ದೋಡಾ, ಕಿಶ್ತವಾರ ಜಿಲ್ಲೆಯಲ್ಲೂ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ವೇಳೆ ಉದ್ವಿಗ್ನಕಾರಿ ಭಾಷಣ ನೀಡಿದ ಹಿನ್ನೆಲೆಯಲ್ಲಿ ಕಫä್ರ್ಯ ಜಾರಿ ಮಾಡಲಾಗಿದ್ದು, ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಕೋಲ್ಕತಾ, ಹೈದರಾಬಾದ್‌ನಲ್ಲಿ..:

ಕೋಲ್ಕತಾದ ಹೌಡಾ ಹಾಗೂ ಪಾರ್ಕ್ ಸರ್ಕಸ್‌ನಲ್ಲಿಯೂ ಭಾರೀ ಪ್ರಮಾಣದಲ್ಲಿ ನೆರದ ಜನರು ನೂಪುರ್‌ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೈದರಾಬಾದಿನ ಮೆಕ್ಕಾ ಮಸೀದಿಯೆದುರಲ್ಲೂ ಭಾರೀ ಪ್ರತಿಭಟನೆ ನಡೆದಿದ್ದು, ಪೊಲೀಸರು ಹಾಗೂ ಸಿಆರ್‌ಪಿಎಫ್‌ರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಪಂಜಾಬಲ್ಲಿ ಪ್ರತಿಭಟನೆ:

ಪಂಜಾಬಿನಾದ್ಯಂತ ಕೂಡಾ ಪ್ರತಿಭಟನೆ ನಡೆದಿದ್ದು, ಲುಧಿಯಾನದ ಜಾಮಾ ಮಸೀದಿಯೆದುರು ಭಾರೀ ಪ್ರಮಾಣದಲ್ಲಿ ಜನರು ನೆರೆದು, ನೂಪುರ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ ಸ್ಥಳೀಯ ಎಐಎಂಐಎಂ ನಾಯಕನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಹಾರಾಷ್ಟ್ರ, ಗುಜರಾತಲ್ಲಿ ಆಕ್ರೋಶ:

ಇದಲ್ಲದೇ ಅಹಮದಾಬಾದ್‌, ಮಹಾರಾಷ್ಟ್ರದಲ್ಲೂ ತೀವ್ರ ಪ್ರತಿಭಟನೆ ನಡೆದಿದೆ. ನವೀ ಮುಂಬೈಯಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿಯೇ ಬೀದಿಗಿಳಿದು ನೂಪುರ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಲ್ಲಾಪುರದಲ್ಲೂ ನೂರಾರು ಜನರು ಭಾರೀ ಪ್ರತಿಭಟನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios