Asianet Suvarna News Asianet Suvarna News

Manipur Landslide: ವಾಲ್ ರಾಡಾರ್‌ ತಂತ್ರಜ್ಞಾನ ಬಳಕೆ, ಈವರೆಗೂ 20 ಜನರ ಸಾವು!

ಮಣಿಪುರದ ತುಪುಲ್ ಜನರಲ್‌ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಶುಕ್ರವಾರ 8 ಮಂದಿ ಸೈನಿಕರು ಹಾಗೂ ನಾಲ್ವರ ನಾಗರೀಕರ ಶವವನ್ನು ಕೆಸರು ಮಣ್ಣಿನಿಂದ ಹೊರತೆಗೆಯಲಾಗಿದೆ.

Relentless search operations by Indian Army SDRF and NDRF In Manipur Tupul area death toll Mounts To 20 san
Author
Bengaluru, First Published Jul 1, 2022, 9:57 PM IST | Last Updated Jul 1, 2022, 10:03 PM IST

ಇಂಫಾಲ (ಜುಲೈ 1): ಈಶಾನ್ಯ ರಾಜ್ಯ ಮಣಿಪುರದ (Manipur) ನೋನಿ (Noni) ಜಿಲ್ಲೆಯ ಭಾರತೀಯ ಸೇನೆಯ (Indian Army) 107 ಟೆರಿಟೋರಿಯಲ್ ಆರ್ಮಿ (Territorial Army ) ಕಂಪನಿಯನ್ನು ನಿಯೋಜನೆ ಮಾಡಿದ್ದ ಸ್ಥಳದಲ್ಲಿ ಬುಧವಾರ ಮಧ್ಯರಾತ್ರಿ ಭೀಕರ ಭೂಕುಸಿತ ಸಂಭವಿಸಿತ್ತು. ಈವರೆಗೂ ಭೂಕುಸಿತದಲ್ಲಿ (Landslide)  ಒಟ್ಟು 20 ಮಂದಿ ಸಾವಿಗೀಡಾಗಿದ್ದು, 15 ಮಂದಿ ಸೈನಿಕರು ಹಾಗೂ 5 ಮಂದಿ ನಾಗರೀಕರಾಗಿದ್ದಾರೆ.

ಅದರಲ್ಲೂ ಶುಕ್ರವಾರ ಒಂದೇ ದಿನ 8 ಮಂದಿ ಸೈನಿಕರ ಶವವನ್ನು ಭೂಕುಸಿತದ ಕೆಸರು ಮಣ್ಣಿನಿಂದ ಹೊರತೆಗೆಯಲಾಗಿದೆ. ನಾಲ್ಕು ಮಂದು ನಾಗರೀಕರ ಶವವನ್ನೂ ಹೊರತೆಗೆಯಲಾಗಿದೆ. ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟರಿಯಲ್‌ ಆರ್ಮಿ, ರಾಜ್ಯ ವಿಪತ್ತು ನಿರ್ವಹಣೆ ಪಡೆ (ಎಸ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.

ವಾಲ್‌ ರಾಡಾರ್‌ಅನ್ನು  (Wall Radar) ಸ್ಥಳದಲ್ಲಿ ಬಳಕೆ ಮಾಡಲಾಗಿದೆ. ಇದರಿಂದಾಗಿ ಮಣ್ಣಿನ ಆಳದಲ್ಲಿ ಮಾನವನ ಇರುವಿಕೆಯನ್ನು ಪತ್ತೆಹಚ್ಚಲಾಗುತ್ತದೆ. ಇದುವರೆಗೆ 13 ಟೆರಿಟೋರಿಯಲ್ ಆರ್ಮಿ ಸಿಬ್ಬಂದಿ ಮತ್ತು 5 ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 15 ಟೆರಿಟೋರಿಯಲ್ ಆರ್ಮಿ ಸಿಬ್ಬಂದಿ ಮತ್ತು 05 ನಾಗರಿಕರ ಮೃತದೇಹಗಳನ್ನು ಇಲ್ಲಿಯವರೆಗೆ ಹೊರತೆಗೆಯಲಾಗಿದೆ. ಟೆರಿಟೋರಿಯಲ್ ಆರ್ಮಿ ಸಿಬ್ಬಂದಿಯ ಪಾರ್ಥಿವ ಶರೀರವನ್ನು ಸಂಪೂರ್ಣ ಸೇನಾ ಗೌರವಗಳೊಂದಿಗೆ ಆಯಾ ಗೃಹ ಠಾಣೆಗಳಿಗೆ ರವಾನಿಸಲಾಗುತ್ತಿದೆ. ನಾಪತ್ತೆಯಾಗಿರುವ 15 ಟೆರಿಟೋರಿಯಲ್ ಆರ್ಮಿ ಸಿಬ್ಬಂದಿ ಮತ್ತು 29 ನಾಗರಿಕರಿಗಾಗಿ ಹುಡುಕಾಟ ನಿರಂತರವಾಗಿ ಮುಂದುವರಿದಿದೆ.

Relentless search operations by Indian Army SDRF and NDRF In Manipur Tupul area death toll Mounts To 20 san

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಪ್ರೋತ್ಸಾಹಿಸಲು ಮಣಿಪುರದ ಮುಖ್ಯಮಂತ್ರಿಗಳು ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿದರು. ಕಾಣೆಯಾದ ಪ್ರತಿಯೊಬ್ಬ ಸಿಬ್ಬಂದಿಯನ್ನು ಪತ್ತೆ ಮಾಡುವವರೆಗೆ ಎಲ್ಲಾ ಏಜೆನ್ಸಿಗಳ ನಿರಂತರ ಪ್ರಯತ್ನಗಳು ಮುಂದುವರಿಯುತ್ತವೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ಗುರುವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರೀ ಭೂಕುಸಿತದಲ್ಲಿ ಅಸ್ಸಾಂ  ರಾಜ್ಯದಿಂದ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. "ಮಣಿಪುರ ಭೂಕುಸಿತದಲ್ಲಿ ಅಸ್ಸಾಂನ ಮೊರಿಗಾಂವ್‌ನ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ, 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 16 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ" ಎಂದು ಶರ್ಮಾ ಟ್ವಿಟರ್‌ನಲ್ಲಿ ಬರೆದಿದ್ದಾರೆ. "ಕ್ಯಾಬಿನೆಟ್ ಸಹೋದ್ಯೋಗಿ ಪಿಯೂಷ್‌ ಹಜರಿಕಾ ಅವರು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಮನ್ವಯಗೊಳಿಸಲು ಸಾಧ್ಯವಾದಷ್ಟು ಬೇಗ ಮಣಿಪುರವನ್ನು ತಲುಪುತ್ತಾರೆ" ಎಂದು ಅವರು ಹೇಳಿದ್ದರು.

Relentless search operations by Indian Army SDRF and NDRF In Manipur Tupul area death toll Mounts To 20 san
ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭೂಕುಸಿತ,13 ಯೋಧರು ಹಾಗೂ ಐವರು ನಾಗರೀಕರ ರಕ್ಷಣೆ!

ಜೆಸಿಬಿ ಬಳಕೆ: ಮಣ್ಣಿನ ಆಳದಲ್ಲಿ ಹುದುಗಿರುವ ಶವವನ್ನು ಹೊರತೆಗೆಯಲು ಬೃಹತ್ ಜೆಸಿಬಿಯನ್ನು ಬಳಕೆ ಮಾಡಲಾಗತ್ತಿದೆ. ಭೂಕುಸಿತವಾದ ಪ್ರದೇಶ ಇಳಿಜಾರು ಆಗಿರುವ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ವಾಲ್‌ ರಾಡಾರ್‌ನೊಂದಿಗೆ ಶ್ವಾನದಳವನ್ನೂ ಬಳಕೆ ಮಾಡಲಾಗಿದೆ.

ಈಶಾನ್ಯ ಭಾರತದಲ್ಲಿ ಭಾರಿ ಮಳೆ, ಹಲವೆಡೆ ಜಲಾವೃತ: ಭೂಕುಸಿತಕ್ಕೆ ನಾಲ್ವರು ಬಲಿ

ಏನಿದು ವಾಲ್‌ ರಾಡಾರ್‌:
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹುಟ್ಟಡಗಿಸುವ ಸಲುವಾಗಿ ಭಾರತೀಯ ಸೇನೆ ವಾಲ್‌ ರಾಡರ್‌ನ್ನು ಬಳಕೆ ಮಾಡುತ್ತದೆ. ಇದನ್ನು ಬಳಕೆ ಮಾಡಿದಾಗ, ಯಾವುದೇ ರೀತಿಯ ಗೋಡೆ ಹಾಗೂ ಮಣ್ಣಿನ ಆಳದಲ್ಲಿ ಅಡಗಿರುವ ಮನುಷ್ಯರನ್ನು ಪತ್ತೆ ಮಾಡುತ್ತದೆ. ಇದಕ್ಕೆ ಸಣ್ಣ ವಿದ್ಯುತ್ಕಾಂತೀಯ ಅಲೆಗಳು ಸಹಾಯ ಮಾಡುತ್ತದೆ.  ಮಾನವರಿಂದ ಪ್ರೇರಿತವಾದ ವಿದ್ಯುತ್ಕಾಂತೀಯ ಅಲೆಗಳಲ್ಲಿನ ಸಣ್ಣ ಬದಲಾವಣೆಗಳನ್ನು ಪತ್ತೆಹಚ್ಚಲು ಇದು ಉಪಯುಕ್ತವಾಗಿದೆ; ಇದು ಉಸಿರಾಟದಿಂದ ಉಂಟಾಗುವ ಸೂಕ್ಷ್ಮ-ಚಲನೆಗಳನ್ನು ಸಹ ಗುರುತಿಸುತ್ತದೆ. ಈ ವಾಲ್‌ ರಾಡರ್‌ಅನ್ನೇ ಮಣಿಪುರದಲ್ಲಿ ಬಳಕೆ ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios