ರಾಷ್ಟ್ರಭಾಷೆ ಹಿಂದಿ ಗೊತ್ತಿರಲೇಬೇಕು ಎಂದ Zomatoಗೆ ತಕ್ಕ ಶಾಸ್ತಿ ಮಾಡಿದ ಗ್ರಾಹಕ!
-ಹಿಂದಿ ನಮ್ಮ ರಾಷ್ಟ್ರ ಭಾಷೆಯೆಂದ Zomato ಎಕ್ಸಿಕ್ಯೂಟಿವ್
-ಟ್ವೀಟ್ ಮೂಲಕ ದೂರು ನೀಡಿದ ಗ್ರಾಹಕ
-#Rejectzomato ಟ್ರೆಂಡ್ ಮೂಲಕ ಜೊಮ್ಯಾಟೋಗೆ ಬಿಸಿ ಮುಟ್ಟಿಸಿದ ನೆಟ್ಟಿಗರು!
ತಮಿಳುನಾಡು (ಅ. 19): ದೇಶದ ಅತ್ಯಂತ ಜನಪ್ರಿಯ ಫೂಡ್ ಡೆಲಿವರಿ (Food Delivery) ಕಂಪನಿ ಜೊಮ್ಯಾಟೋ (Zomato) ಕಸ್ಟಮರ್ ಕೇರ ಎಕ್ಸಿಕ್ಯೂಟಿವ್ (Executive) ʼಭಾರತದಲ್ಲಿ ಪ್ರತಿಯೊಬ್ಬರಿಗೂ ಹಿಂದಿ ಗೊತ್ತಿರಲೇಬೇಕುʼ ಎಂದು ಗ್ರಾಹಕರೊಬ್ಬರಿಗೆ ರಿಪ್ಲೈ ಮಾಡಿದ್ದಾರೆ. ತಮಿಳುನಾಡಿನ (Tamilnadu) ಗ್ರಾಹಕರೊಬ್ಬರ ಸಮಸ್ಯೆಯನ್ನು ಬಗೆಹರಿಸುವಾಗ ಈ ರೀತಿ ರಿಪ್ಲೈ ಮಾಡಲಾಗಿದ್ದು ಗ್ರಾಹಕ ಟ್ವೀಟರ್ ಮೂಲಕ ನೇರವಾಗಿ ಕಂಪನಿಗೆ ದೂರನ್ನು ನೀಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೊಮ್ಯಾಟೋ ಇಂಗ್ಲೀಷ್ ಮತ್ತು ತಮಿಳಿನಲ್ಲಿ ಪತ್ರ ಬರೆದು ಕ್ಷಮಾಪಣೆ ಕೇಳಿದೆ. ಅಲ್ಲದೇ ಈ ರೀತಿ ರಿಪ್ಲೈ ಮಾಡಿದ ಉದ್ಯೋಗಿಯನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಕಂಪನಿ ತಿಳಿಸಿತ್ತು.
ಸೈಕಲ್ ಏರಿ ಫುಡ್ ವಿತರಣೆ ಮಾಡುತ್ತಿದ್ದ ಡೆಲಿವರಿ ಬಾಯ್ ಬದಕು ಬದಲಿಸಿದ ಒಂದು ಆರ್ಡರ್!
ಆದರೆ ಕೆಲವೇ ಹೊತ್ತಿನ ನಂತರ ಟ್ವೀಟ್ ಮಾಡಿರುವ ಕಂಪನಿ ಸಿಇಓ(CEO) ದಿಪಿಂದರ್ ಗೋಯಲ್ (Deepinder Goyal)ಉದ್ಯೋಗಿಯನ್ನು ನಾವು ತೆಗೆದು ಹಾಕಿಲ್ಲ. ನಮ್ಮ ಕಸ್ಟಮರ್ ಕೇರ್ ತಂಡದಲ್ಲಿರುವ ಬಹತೇಕರು ತಮ್ಮ ವೃತ್ತಿ ಜೀವನದ ಆರಂಭದಲ್ಲಿರುತ್ತಾರೆ. ಹಾಗಾಗಿ ಭಾಷೆ ಮತ್ತು ಸ್ಥಳಿಯ ಭಾವನೆಗಳ ಬಗ್ಗೆಅರಿವು ಕಡಿಮೆ. ಹಾಗಾಗಿ ಈ ವಿಷಯದಲ್ಲಿ ಅವಳನ್ನು ಕೆಲಸದಿಂದ ತಗೆದು ಹಾಕುವುದು ಸರಿಯಲ್ಲ, ಈ ಘಟನೆ ಅವಳಿಗೆ ಉತ್ತಮ ಪಾಠವೊಂದನ್ನು ಕಲಿಸಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿರುವವರಿಗೆ ಸ್ವಲ್ಪ ಮಟ್ಟಿಗಾದರು ಹಿಂದಿ ಗೊತ್ತಿರಬೇಕು!
ಸೋಮವಾರ (ಅ. 19) ವಿಕಾಶ್ ಎಂಬುವವರ ಟ್ವೀಟರ್ (Twitter) ನಲ್ಲಿ ಕೆಲವೊಂದು ಸ್ಕ್ರೀನ ಶಾಟ್ ಶೇರ್ ಮಾಡಿ ಜೊಮ್ಯಾಟೋ ಕಂಪನಿಯನ್ನು ಟ್ಯಾಗ್ ಮಾಡಿದ್ದರು. ತಾವು ಆರ್ಡರ್ ಮಾಡಿದ ಆಹಾರದ ಡೆಲಿವರಿ ಪ್ಯಾಕ್‌ನಲ್ಲಿ ಸಮಸ್ಯೆ ಬಂದಾಗ ಕಸ್ಟಮರ್ ಕೇರ್‌ಗೆ ಸಂಪರ್ಕಿಸಿ ಹೋಟೆಲ್‌ರವರ ಬಳಿ ವಿಚಾರಿಸುವಂತೆ ಕೇಳಿಕೊಂಡಿದ್ದರು. ಆದರೆ ಜೊಮ್ಯಾಟೋ ಎಕ್ಸಿಕ್ಯೂಟಿವ್ 'ಹೊಟೆಲ್‌ಗೆ ಐದು ಬಾರಿ ಸಂಪರ್ಕಿಸಿದರು ಹೋಟೆಲ್‌ನ ಸ್ಟಾಫ್ ಜತೆ ಭಾಷೆಯ ತಡೆಗೋಡೆಯಿಂದ ಮಾತನಾಡಲು ಸಾಧ್ಯವಾಗಲಿಲ್ಲ' ಎಂದು ರಿಪ್ಲೈ ಮಾಡಿದ್ದರು.
ತಮಿಳುನಾಡಿನಲ್ಲಿ ಜೊಮ್ಯಾಟೋ ಸರ್ವಿಸ್ ನೀಡುವುದಾದರೆ ತಮಿಳು ಭಾಷೆ ಗೊತ್ತಿರುವ ಉದ್ಯೊಗಿಗಳನ್ನು ನೇಮಕ ಮಾಡಬೇಕಿತ್ತು ಎಂದು ಹೇಳಿ ತಮ್ಮ ಸಮಸ್ಯೆಯನ್ನು ಬಗೆಹರಿಸಿ ತಮ್ಮ ಹಣ ಮರುಕಳಿಸುವಂತೆ (Refund) ಹೇಳಿದರು. ಇದಕ್ಕೆ ಪ್ರತ್ತ್ಯುತ್ತರ ನೀಡಿದ ಎಕ್ಸಿಕ್ಯೂಟಿವ್ ʼನಿಮ್ಮ ಮಾಹಿತಿಗಾಗಿ ಹೇಳುತ್ತಿದ್ದೇನೆ, ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದ್ದು ಪ್ರತಿಯೊಬ್ಬರು ಸ್ವಲ್ಪ ಮಟ್ಟಿಗಾದರೂ ಹಿಂದಿ ಕಲಿಯಬೇಕುʼ ಎಂದು ಹೇಳಿ ವಿಕಾಶ್‌ರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದೇ ವಿಷಯವನ್ನು ಆಕಾಶ್ ಟ್ವೀಟರ್‌ನಲ್ಲಿ ಬರೆದು ಜೊಮ್ಯಾಟೋಗೆ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದ್ದು ಸಾವಿರಾರು ಜನ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
#Rejectzomato ಟ್ರೆಂಡ್!
4,500 ಕ್ಕೂ ಹೆಚ್ಚು ಲೈಕ್ಸ್ ಮತ್ತು 2,500 ಕ್ಕೂ ರಿಟ್ವೀಟ್ ಪಡೆದ ವಿಕಾಶ್ ಟ್ವೀಟ್ ಎಲ್ಲೆಡೆ ವೈರಲ್ ಆಯಿತು. ಇದರಿಂದ ಆಕ್ರೋಶಗೊಂಡ ನೆಟ್ಟಿಗರು #Rejectzomato ಹ್ಯಾಷ್‌ಟ್ಯಾಗ್ ಮೂಲಕ 20,000 ಕ್ಕೂ ಹೆಚ್ಚು ಟ್ವೀಟ್ಸ ಮಾಡಿದರು. #Rejectzomato ಟ್ವೀಟರ್‌ನಲ್ಲಿ ಟ್ರೆಂಡ್ ಮಾಡುವ ಮೂಲಕ ಜೊಮ್ಯಾಟೋಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧರ್ಮಪುರಿ ಸಂಸದ ಸೆಂಥಿಲ ಕೂಡ ಸಾಥ್ ನೀಡಿ, ಹಿಂದಿ ಯಾವಾಗಿನಿಂದ ನಮ್ಮ ರಾಷ್ಟ್ರ ಭಾಷೆಯಾಯಿತು ಎಂದು ಪ್ರಶ್ನಿಸಿದರು? ಜತೆಗೆ ಸಂಸದೆ ಕಿನಿಮೋಳಿ ಕೂಡ ಟ್ವೀಟ್ ಮಾಡಿ ʼಜನರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡುವುದನ್ನು ಕಡ್ಡಾಯ ಮಾಡಬೇಕುʼ ಎಂದು ಬರೆದಿದ್ದಾರೆ. ಕೊನೆಗೂ ವಿಕಾಶ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಜೊಮ್ಯಾಟೋ ʼಇದು ಒಪ್ಪಲಾಗದ ಘಟನೆಯಾಗಿದೆʼ ಇದನ್ನು ನಾವು ಶೀಘ್ರದಲ್ಲೇ ಬಗೆಹರಿಸುತ್ತೇವೆ ಎಂದು ಹೇಳಿತು.
ಇಂದಿರಾ ನಗರ ಗೂಂಡಾ: ದ್ರಾವಿಡ್ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!
;