Asianet Suvarna News Asianet Suvarna News

Kids Vaccination: 10 ಕೋಟಿ ಜನರ ಟಾರ್ಗೆಟ್

  • 15-18ರ ವಯೋಮಾನದ 7.4 ಕೋಟಿ ಮಕ್ಕಳಿಗೆ ಲಸಿಕೆ ಗುರಿ
  • ಮೊದಲ ಹಂತದಲ್ಲಿ ಮಕ್ಕಳಿಗೆ ಕೇವಲ ಕೋವ್ಯಾಕ್ಸಿನ್‌ ವಿತರಣೆ
Registration for kids 15 18 begins for their first shot from 3rd January 10 crore target population dpl
Author
Bangalore, First Published Jan 3, 2022, 2:18 AM IST

ನವದೆಹಲಿ(ಝ.03): ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿರುವ ಭಾರತ, ಸೋಮವಾರದಿಂದ 15-18ರ ವಯೋಮಾನದ 7.4 ಕೋಟಿ ಮಕ್ಕಳಿಗೆ ಲಸಿಕೆ ವಿತರಣೆ ಆರಂಭಿಸಲಿದೆ. ದೇಶಾದ್ಯಂತ ಒಮಿಕ್ರೋನ್‌ ಅಲೆಯ ಭೀತಿ ಎದ್ದಿರುವ ನಡುವೆಯೇ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಕೋವಿಡ್‌ನಿಂದ ಮಕ್ಕಳನ್ನುರಕ್ಷಿಸಲು ಸರ್ಕಾರ ಮುಂದಾಗಿದೆ.

ಕಳೆದ ಡಿ.25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 2022ರ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಮತ್ತು ಜ.10ರಿಂದ 60 ವರ್ಷ ದಾಟಿದವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ ನೀಡುವುದಾಗಿ ಪ್ರಕಟಿಸಿದ್ದರು.

ಅದರಂತೆ ಜ.1ರ ಶನಿವಾರದಿಂದಲೇ ಕೋವಿನ್‌ ಪೋರ್ಟಲ್‌ನಲ್ಲಿ ಲಸಿಕೆ ಪಡೆಯಲು ಆಸಕ್ತಿ ಹೊಂದಿರುವ ಮಕ್ಕಳ ಹೆಸರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಜೊತೆ ಲಸಿಕಾ ಕೇಂದ್ರಗಳಿಗೆ ಅಲ್ಲಿಯೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ.

'ಕೋವಿಡ್‌ 3ನೇ ಅಲೆ ನಿಶ್ಚಿತ: ಮೈ ಮರೆತರೆ ಅಪಾಯ ತಪ್ಪಿದ್ದಲ್ಲ'

ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿರುವ ಎರಡು ಡೋಸ್‌ ಲಸಿಕೆಯು, ಒಮಿಕ್ರೋನ್‌ ಸೇರಿದಂತೆ ರೂಪಾಂತರಿ ವೈರಸ್‌ನಿಂದ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಖಚಿತ ಪಟ್ಟಬೆನ್ನಲ್ಲೇ, ಕೇಂದ್ರ ಸರ್ಕಾರ ಇದೀಗ ಮಕ್ಕಳಿಗೂ ಲಸಿಕಾ ಅಭಿಯಾನ ಆರಂಭಿಸಿದೆ.

ಸದ್ಯ ಭಾರತದಲ್ಲಿ ಝೈಕೋವ್‌ ಡಿ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಮಾತ್ರವೇ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿವೆ. ಆದರೆ ಝೈಕೋವ್‌ ಡಿ ಅನ್ನು ಇನ್ನು ಹಿರಿಯರಿಗೆ ನೀಡದೇ ಇರುವ ಕಾರಣ, ಮೊದಲಿಗೆ ಮಕ್ಕಳಿಗೆ ನೀಡಲು ಸರ್ಕಾರ ಸ್ಪಲ್ಪ ಹಿಂದೇಟು ಹಾಕಿದೆ. ಹೀಗಾಗಿ ಆರಂಭದಲ್ಲಿ ಮಕ್ಕಳಿಗೆ ಕೇವಲ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರವೇ ನೀಡಲಾಗುವುದು.

ಲಸಿಕಾ ಅಭಿಯಾನದ ಹಾದಿ

ಜ.16: ಆರೋಗ್ಯ ಕಾರ್ಯಕರ್ತರು

ಫೆ.02: ಮುಂಚೂಣಿ ಕಾರ್ಯಕರ್ತರು

ಮಾ 01: 60 ವರ್ಷ, 45 ವರ್ಷ ಮೇಲ್ಪಟ್ಟಅನಾರೋಗ್ಯ ಪೀಡಿತರು

ಏ. 01: 45 ವರ್ಷ ಮೇಲ್ಪಟ್ಟಎಲ್ಲರಿಗೂ

ಮೇ.01: 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ

Follow Us:
Download App:
  • android
  • ios