Covid-19 Vaccine: ಮಕ್ಕಳ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ

ಒಮಿಕ್ರೋನ್‌ ಅಬ್ಬರದ ನಡುವೆಯೇ 15ರಿಂದ 18 ವಯೋಮಾನದ ಮಕ್ಕಳಿಗೂ ಕೊರೋನಾ ಲಸಿಕೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಶನಿವಾರದಿಂದಲೇ ಲಸಿಕೆ ಪಡೆಯಲು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿನ್‌ ಪೋರ್ಟಲ್‌ ಅಥವಾ ಲಸಿಕೆ ನೀಡುವ ಸ್ಥಳಗಳಿಗೆ ತೆರಳಿ ಹೆಸರು ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.

Registration Begins For Covid Vaccine For Teens Aged 15 to 18 gvd

ನವದೆಹಲಿ (ಜ.2): ಒಮಿಕ್ರೋನ್‌ (omicron) ಅಬ್ಬರದ ನಡುವೆಯೇ 15ರಿಂದ 18 ವಯೋಮಾನದ ಮಕ್ಕಳಿಗೂ ಕೊರೋನಾ ಲಸಿಕೆ (Corona Vaccine) ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಶನಿವಾರದಿಂದಲೇ ಲಸಿಕೆ ಪಡೆಯಲು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿನ್‌ ಪೋರ್ಟಲ್‌ (Cowin Portal) ಅಥವಾ ಲಸಿಕೆ ನೀಡುವ ಸ್ಥಳಗಳಿಗೆ ತೆರಳಿ ಹೆಸರು ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.

ಜ.3ರ ಸೋಮವಾರದಿಂದಲೇ ಮಕ್ಕಳ ಲಸಿಕೆ ಅಭಿಯಾನ ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ದೇಶದಲ್ಲಿ 7.4 ಕೋಟಿ ಮಕ್ಕಳು ಲಸಿಕೆಗೆ ಅರ್ಹವಿದ್ದು, 15 ಕೋಟಿ ಹೆಚ್ಚುವರಿ ಲಸಿಕೆ ಡೋಸ್‌ ಅಗತ್ಯ ಬೀಳಲಿದೆ. ಈ ಬಗ್ಗೆ ಶನಿವಾರ ಟ್ವೀಟ್‌ (Tweet) ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ (Mansukh Mandaviya) ಅವರು, ‘ಹೊಸ ವರ್ಷದ ಶುಭ ಸಂದರ್ಭದಲ್ಲಿ ಮಕ್ಕಳ ನೋಂದಣಿಯ ಕೋವಿನ್‌ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ. ಕುಟುಂಬ ಸದಸ್ಯರು ತಮ್ಮ ಕುಟುಂಬದಲ್ಲಿರುವ ಅರ್ಹ ಮಕ್ಕಳ ಹೆಸರುಗಳನ್ನು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಮಕ್ಕಳು ಲಸಿಕೆ ಪಡೆಯಲು ಆನ್‌ಲೈನ್‌ ಕೋವಿನ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಮಕ್ಕಳಿಗಾಗಿ ಪ್ರತ್ಯೇಕ ಲಸಿಕಾ ಕೇಂದ್ರಗಳು, ಪ್ರತ್ಯೇಕ ಸಿಬ್ಬಂದಿ ಮತ್ತು ಪ್ರತ್ಯೇಕ ಸಾಲುಗಳನ್ನು ಮಾಡಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Covid Vaccination: ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು!

12 ವರ್ಷ ಮೇಲ್ಪಟ್ಟವರಿಗೆ ಝೈಕೋವ್‌-ಡಿ ಲಸಿಕೆ!: ಸದ್ಯ ಝೈಕೋವ್‌-ಡಿ ಲಸಿಕೆಯನ್ನು (ZyCoV-D vaccine) 12 ವರ್ಷ ಮೇಲ್ಪಟ್ಟಎಲ್ಲಾ ಮಕ್ಕಳಿಗೂ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮತ್ತೊಂದೆಡೆ ಕೋವ್ಯಾಕ್ಸಿನ್‌ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿದೆ. ಅದಕ್ಕೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ಇನ್ನು 60 ವರ್ಷದ ದಾಟಿದವರು ಈಗಾಗಲೇ ಎರಡೂ ಡೋಸ್‌ ಪಡೆದುಕೊಂಡು 6-9 ತಿಂಗಳು ತುಂಬುತ್ತಾ ಇರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್‌ ಡೋಸ್‌ ನೀಡಬೇಕಾ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಈ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ತನ್ನ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೂಸ್ಟರ್‌ ಡೋಸ್‌ ಅಗತ್ಯ ಸಾಬೀತಿಗೆ ಪುರಾವೆಯಿಲ್ಲ!: ಕೋವಿಡ್‌- 19ರ ವಿರುದ್ಧ ಬೂಸ್ಟರ್‌ ಲಸಿಕೆಯ ಅಗತ್ಯವನ್ನು ಸಾಬೀತು ಪಡಿಸುವಂತಹ ಯಾವುದೇ ವೈಜ್ಞಾನಿಕ ಪುರಾವೆಗಳು (Scientific Proof) ಇದುವರೆಗೆ ದೊರೆತಿಲ್ಲ. ಹೀಗಾಗಿ ಇದುವರೆಗೂ 2ನೇ ಡೋಸ್‌ ಪಡೆದುಕೊಳ್ಳದೇ ಇದ್ದವರಿಗೆ ಅದನ್ನು ವಿತರಿಸುವುದೇ ಸರ್ಕಾರದ ಆದ್ಯತೆಯಾಗಬೇಕು ಎಂದು ಐಸಿಎಂಆರ್‌ ಮಹಾ ನಿರ್ದೇಶಕ ಡಾ. ಬಲರಾಮ್‌ ಭಾರ್ಗವ ಸೋಮವಾರ ಹೇಳಿದ್ದಾರೆ.

Covid Vaccination : ಮೈಸೂರು ನಗರದಲ್ಲಿ ಶೇ.100 ಮೊದಲ ಡೋಸ್‌ ಲಸಿಕೆ

ಈ ಕುರಿತು ಪಿಟಿಐ (PTI) ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಭಾರ್ಗವ ‘ಬೂಸ್ಟರ್‌ ಡೋಸ್‌ ವಿಷಯದಲ್ಲಿ ಸರ್ಕಾರ ಏಕಪಕ್ಷೀಯವಾಗಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದು. ಈ ಬಗ್ಗೆ ಐಸಿಎಂಆರ್‌ ಮತ್ತು ತಜ್ಞರ ಸಮಿತಿ ಶಿಫಾರಸಿನ ಬಳಿಕಷ್ಟೇ ಸರ್ಕಾರ ಮುಂದಿನ ಹೆಜ್ಜೆ ಇಡಬಹುದು. ಮೇಲಾಗಿ, ಲಸಿಕೆ ಸಂಶೋಧನೆಯಿಂದ ಹಿಡಿದು, ಲಸಿಕೆ ವಿತರಣೆಯ ಎಲ್ಲಾ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ತಜ್ಞರ ಸಮಿತಿಗೇ ಹೆಚ್ಚಿನ ಮನ್ನಣೆ ನೀಡಿದ್ದಾರೆ. ಬೂಸ್ಟರ್‌ ಡೋಸ್‌ ವಿಷಯದಲ್ಲೂ ಅದೇ ಸಂಪ್ರದಾಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios