ಕೇವಲ ಒಂದು ಬೆಡ್ ರೂಂ ಮನೆ, ಬಾಡಿಗೆ ಬರೋಬ್ಬರಿ 42,000 ರೂಪಾಯಿ. ಬೆಂಗಳೂರು ಸೇರಿದಂತೆ ಎಲ್ಲಾ ನಗರದ ಮನೆ ಬಾಡಿಗೆಯನ್ನು ಹಿಂದಿಕ್ಕಿದ ಭಾರತದ ಈ ನಗರ ಯಾವುದು?

ಗುರುಗಾಂವ್ (ಆ.05) ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಮನೆ ಬಾಡಿಗೆ ಬಲು ದುಬಾರಿ ಅನ್ನೋದು ಹೊಸದೇನಲ್ಲ. ಆದರೂ 1 ಬೆಡ್ ರೂಂ ಮನೆ ಸೇರಿದಂತೆ ಸಣ್ಣ ಮನೆಗಳು ದುಬಾರಿಯಾದರೂ ಅಚ್ಚರಿಯಾಗಲ್ಲ. ಆದರೆ ಇದೀಗ ಭಾರತದ ಈ ನಗರ ದುಬಾರಿ ನಗರಗಳ ಎಲ್ಲಾ ಮನೆ ಬಾಡಿಗೆಯನ್ನು ಮೀರಿಸಿದೆ. ಇಲ್ಲಿ 1BHK ಮನೆ ತಿಂಗಳ ಬಾಡಿಗೆ ಬರೋಬ್ಬರಿ 42,000 ರೂಪಾಯಿ. ಈ ನಗರ ಬೇರೆ ಯಾವುದು ಅಲ್ಲ, ಭಾರತದಲ್ಲಿ ವಾಣಿಜ್ಯ ನಗರ ಮುಂಬೈ. ಈ ಕುರಿತು ರೆಡ್ಡಿಟ್ ಬಳಕೆದಾರ ಮಾಹಿತಿ ನೀಡಿದ್ದಾರೆ. ಮುಂಬೈಗೆ ಸ್ಥಳಾಂತರವಾಗುತ್ತಿರುವ ಈ ರೆಡ್ಡಿಟ್ ಬಳಕೆದಾರ ಬಾಡಿಗೆ ನೋಡಿ ಬೆಚ್ಚಿ ಬಿದ್ದಿದ್ದಾನೆ.

ಒಂದು ಬೆಡ್ ರೂಂ ಮನೆ ಬಲು ದುಬಾರಿ

ಮುಂಬೈನಲ್ಲಿ ದುಬಾರಿ ಬಾಡಿಗೆ ಹೊಸದೇನಲ್ಲ. ಮುಂಬೈ ಹೊರವಲಯದಲ್ಲೂ ಇದೀಗ ದುಬಾರಿ ಬಾಡಿಗೆ ನೀಡಬೇಕು. ಮುಂಬೈ ಹೃದಯ ಭಾಗದಿಂದ 70 ರಿಂದ 80 ಕಿಲೋಮೀಟರ್ ದೂರ ತೆರಳಿದರೂ ಬಾಡಿಗೆ ವಿಚಾರದಲ್ಲಿ ಯಾವುದೂ ಕಡಿಮೆ ಇಲ್ಲ. ಸದ್ಯ ರೆಡ್ಡಿಟ್ ಬಳಕೆದಾರ ಮುಂಬೈನ ಗೋರೇಗಾಂವ್‌ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ವೇತನಕ್ಕೆ ಅನುಗುಣವಾಗಿ ಒಂದು ಬೆಡ್ ರೂಂ ಮನೆ ಬಾಡಿಗೆ ಪಡೆಯಲು ನಿರ್ಧರಿಸಿ ವಿಚಾರಿಸಿದ್ದಾರೆ. ಈ ಪೈಕಿ ಹಲವು ಒಂದು ಬಿಹೆಚ್‌ಕೆ ಮನೆಯನ್ನು ವಿಚಾರಿಸಿದ್ದಾರೆ. ಈ ಪೈಕಿ ಅತೀ ಕಡಿಮೆ ಬಾಡಿಗೆಯ ಮನೆಯೇ ಬಲು ದುಬಾರಿಯಾಗಿದೆ.

ಹಳೇ ಕಟ್ಟಡ ಬೆಲೆ ಮಾತ್ರ ದುಬಾರಿ

ರೆಡ್ಡಿಟ್ ಬಳಕೆದಾರನ ಪೋಸ್ಟ್ ಪ್ರಕಾರ, ಈ ತಿಂಗಳು ಸ್ಥಳಾಂತರಗೊಳ್ಳುತ್ತಿದ್ದೇನೆ. ಮುಂಬೈ ನನಗೆ ಹೊಸದಲ್ಲ. ಕಳೆದ 2 ವರ್ಷಗಳ ಹಿಂದೆ ಮುಂಬೈನಲ್ಲಿ ನೆಲೆಸಿದ್ದ. ಇದೀಗ ಮತ್ತೆ ಮುಂಬೈಗೆ ಶಿಫ್ಟ್ ಆಗುತ್ತಿದ್ದೇನೆ. ಆದರೆ ಮುಂಬೈನ ಮನೆ ಬಾಡಿಗೆ ನೋಡಿ ಬೆಚ್ಚಿ ಬಿದ್ದೆ. ನಾನು ಗೊರೇಗಾಂವ್ ಬಳಿ 1 ಬೆಡ್ ರೂಂ ಮನೆ ಬಾಡಿಗೆ ಪಡೆಯಲು ವಿಚಾರಿಸಿದ್ದೇನೆ. ಇದು ಹಳೇ ಕಟ್ಟಡ. ಹೆಚ್ಚಿನ ಸೌಲಭ್ಯಗಳಿಲ್ಲ. ಒಂದು ಬೆಡ್ ರೂಂ, ಸಣ್ಣ ಹಾಲ್, ಅತೀ ಸಣ್ಣ ಕಿಚ್ ಹಾಗೂ ವಾಶ್‌ರೂಂ ಸೇರಿದ ಸಣ್ಣ ರೂಂ ಇದಾಗಿದೆ. ಆದರೆ ಬಾಡಿಗೆ 42,000 ರೂಪಾಯಿ ಹೇಳುತ್ತಿದ್ದಾರೆ. ಬ್ರೋಕರ್ ಬಳಿ ನನ್ನ ಬಜೆಟ್ 35 ಸಾವಿರದಿಂದ 38 ಸಾವರ ಗರಿಷ್ಠ ಎಂದಾಗ ಬ್ರೋಕರ್ ಈ ಬೆಲೆಯಲ್ಲಿ ಬಾಡಿಗೆ ಮನೆ ಸಿಗುತ್ತಾ ಎಂದು ಗಹಗಹಿಸಿ ನಕ್ಕಿದ್ದಾನೆ. ಈ ಬೆಲೆಯಲ್ಲಿ ಬಂಕರ್ ರೀತಿ ಇರುವ ಸಣ್ಣ ಸಣ್ಣ ಪಿಜಿ ನೋಡಿಕೊಳ್ಳಬೇಕಷ್ಟೆ ಎಂದಿದ್ದಾನೆ. ಕೆಲ ವರ್ಷಗಳ ಹಿಂದೆ ಮಂಬೈನಲ್ಲಿದ್ದೆ. ಈಗಲೂ ಬಾಡಿಗೆ ದುಬಾರಿಯಾಗಿತ್ತು. ಆದರೆ ಈ ರೀತಿ ಏರಿಕೆಯಾಗರಲಿಲ್ಲ. 1ಬಿಹೆಚ್‌ಕೆ ಉತ್ತಮ ಮನೆಗಳು 30 ರಿಂದ 35 ಸಾವಿರಕ್ಕೆ ಸಿಗುತ್ತಿತ್ತು. ಇದೀಗ ಬಲು ದುಬಾರಿಯಾಗಿದೆ ಎಂದು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾರೆ.

ಜನರ ಪ್ರತಿಕ್ರಿಯೆ ಏನು?

ಈತನ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಗೋರೇಗಾಂವ್ ಇತ್ತೀಚೆಗೆ ರೀಡೆವಲಪ್ ಮಾಡಲಾಗಿದೆ. ಹೀಗಾಗಿ ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಮಲಾಡ್ ಭಾಗದಲ್ಲಿ ಉತ್ತಮ ಮನ ಡೀಸೆಂಟ್ ಬೆಲೆಗೆ ಸಿಗಲಿದೆ. ಇನ್ನು ರೈಲು ಕನೆಕ್ಟಿವಿಟಿ ಮೂಲಕ ಪ್ರಯಾಣ ಮಾಡಬಹುದು. ಕೊಂಚ ಪ್ರಯಾಸವಾದರೂ ಬೇರೆ ಮಾರ್ಗವಿಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ. ಒಂದಷ್ಟು ಮುಂಬೈ ದೆಹಲಿ - ರಾಜಧಾನಿ ವ್ಯಾಪ್ತಿ ಅಥವಾ ಪುಣೆ, ಹೈದರಾಬಾದ್‌ನಲ್ಲಿ ಕೆಲಸ ನೋಡಿದರೆ ಉತ್ತಮ ಜೀವನ ಸಾಗಿಸಲು ಸಾಧ್ಯವಿದೆ. ಇಲ್ಲಿ ಬಾಡಿಗೆ ಪರ್ವಾಗಿಲ್ಲ, ಜೀವನವೂ ಸುಗಮ ಎಂದು ಹಲವರು ಕಮೆಂಟ್ ಮಾಡಿದ್ದಾರೆ.