ನವದೆಹಲಿ (ಏ.26): ಕೊರೋನಾ 2ನೇ ಅಲೆಯ ಹೊಡೆತಕ್ಕೆ ಸಿಕ್ಕಿರುವ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಇದೀಗ 2ನೇ ಸ್ಥಾನಕ್ಕೆ ಬಂದು ನಿಂತಿದೆ. ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ದೇಶದ 10 ನಗರಗಳ ಭಾನುವಾರದ ಅಂಕಿ​- ಅಂಶಗಳನ್ನು ಗಮನಿಸಿದರೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಂ.2 ಸ್ಥಾನದಲ್ಲಿದೆ. ಭಾನುವಾರ ದೆಹಲಿಯಲ್ಲಿ 22933 ಕೇಸು ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 20733 ಹೊಸ ಪ್ರಕರಣ ದೃಢಪಟ್ಟಿವೆ. ಇನ್ನೂ ಆತಂಕದ ವಿಷಯವೆಂದರೆ 2ನೇ ಅಲೆಯಲ್ಲಿ ಭಾರೀ ಹೊಡೆತ ತಿಂದ ಮುಂಬೈಗಿಂತ ಇದೀಗ ನಿತ್ಯವೂ ಬೆಂಗಳೂರಿನಲ್ಲಿ 4 ಪಟ್ಟು ಹೆಚ್ಚು ಕೇಸು ದಾಖಲಾಗುತ್ತಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಮುಂಬೈನಲ್ಲಿ ಏ.4ರಂದು 11206 ಕೇಸು ದಾಖಲಾಗಿದ್ದೇ ಈವರೆಗಿನ ದೈನಂದಿನ ಗರಿಷ್ಠ. ಆದರೆ ಕಳೆದ 2 ದಿನಗಳಿಂದ ವಾಣಿಜ್ಯ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದ್ದು, ಕೇವಲ 5000 ಆಸುಪಾಸಿನ ಹೊಸ ಕೇಸು ದೃಢಪಡುತ್ತಿದೆ. ಆದರೆ ಇದೇ ವೇಳೆ ಬೆಂಗಳೂರಿನಲ್ಲಿ ನಿತ್ಯವೂ 2000-4000ದಷ್ಟುಪ್ರಮಾಣದಲ್ಲಿ ಕೇಸು ಏರಿಕೆಯಾಗುತ್ತಿದ್ದು, ಭಾನುವಾರ ಈವರೆಗಿನ ಗರಿಷ್ಠ ಪ್ರಮಾಣವಾದ 20733ಕ್ಕೆ ತಲುಪಿದೆ. ಏರಿಕೆ ಗತಿ ಹೀಗೆ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿ ಇದು 30000ದ ಗಡಿ ದಾಟುವ ಆತಂಕವೂ ಏದುರಾಗಿದೆ.

ವೀಕೆಂಡ್ ಲಾಕ್‌ಡೌನ್‌ ಮಧ್ಯೆ ಕರ್ನಾಟಕದಲ್ಲಿ ಅಬ್ಬರಿಸಿದ ಕೊರೋನಾ! .

ಇನ್ನು ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ 24000ದ ಆಸುಪಾಸಿನ ಕೇಸು ದಾಖಲಾಗುತ್ತಿದೆ. ಉಳಿದಂತೆ ಮಹಾರಾಷ್ಟ್ರದ ಪ್ರಮುಖ ನಗರಗಳಾದ ಪುಣೆಯಲ್ಲಿ 10025, ನಾಗಪುರದಲ್ಲಿ 8033, ಗುಜರಾತ್‌ ರಾಜಧಾನಿ ಅಹಮದಾಬಾದ್‌ನಲ್ಲಿ 5683, ಚೆನ್ನೈನಲ್ಲಿ 4029, ಕೋಲ್ಕತಾದಲ್ಲಿ 2970, ತಿರುವನಂತಪುರದಲ್ಲಿ 2383, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ 2138 ಪ್ರಕರಣಗಳು ದಾಖಲಾಗಿವೆ.

ನಗರ ಕೇಸ್‌ ಸಾವು

ದೆಹಲಿ 22933 350

ಬೆಂಗಳೂರು 20733 77

ಪುಣೆ 10,025 23

ನಾಗ್ಪುರ 8033 57

ಮುಂಬೈ 5867 71

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

ಅಹಮದಾಬಾದ್‌ 5683 26

ಚೆನ್ನೈ 4029 26

ಕೋಲ್ಕತಾ 2970 20

ತಿರುವನಂತಪುರ 2383 03

ರಾಯ್ಪುರ 2138 51