Asianet Suvarna News Asianet Suvarna News

Old Banyan Tree ನೆಲಕ್ಕುರಳಿದ 100 ವರ್ಷ ಹಳೆ ಆಲದ ಮರಕ್ಕೆ ಪುನರ್ಜನ್ಮ, ಪರಿಸರ ಪ್ರೇಮಿಗಳ ಕಾರ್ಯಕ್ಕೆ ಮೆಚ್ಚುಗೆ!

  • ಪ್ರಾಣಿ, ಸಸ್ಯ ಸಂಕುಲದ ಸೆಲೆ ಹಾಗೂ ನೆಲೆಯಾಗಿರುವ ಆಲದ ಮರಕ್ಕೆ ಪುನರ್ಜನ್ಮ
  • ಪ್ರವಾಹದಿಂದ ಮಣ್ಣು ಸವಕಳಿ, ನೆಲಕ್ಕುರಳಿತು   ಆಲದ ಮರ 
  • ಪರಿಸರ ಪ್ರೇಮಿ, ದಾನಿಗಳು, ಸಂಸದ ಹಾಗೂ ಸಚಿವರ ಪ್ರಯತ್ನದಿಂದ ಪುನರ್ಜನ್ಮ
Rebirth for 100 year old Banyan tree that fell due to heavy rains  Youth Makes Successful Attempt CKM
Author
Bengaluru, First Published Feb 14, 2022, 7:27 PM IST | Last Updated Feb 14, 2022, 7:28 PM IST

ಸಿರ್ಸಿಲ್ಲಾ(ಫೆ.14): ಭಾರತ ಸೇರಿದಂತೆ ವಿಶ್ವವೇ ಎದುರಿಸುತ್ತಿರುವ ಹಮಾಮಾನ ವೈಪರಿತ್ಯ, ಪ್ರಾಕೃತಿಕ ವಿಕೋಪ, ಜಾಗತಿಕ ತಾಪಮಾನ, ವಾಯು ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಸರ ನಾಶ ಮೂಲ ಕಾರಣ. ಪ್ರತಿ ಮರ ಗಿಡಗಳ ಪ್ರಾಣಿ ಸಂಕುಲದ ನೆಲೆ ಹಾಗೂ ಸೆಲೆಯಾಗಿದೆ. ಈ ಮರದ ಪ್ರಾಮುಖ್ಯತೆ ಅರಿತ ಪರಿಸರ ಪ್ರೇಮಿ 100 ವರ್ಷ ಹಳೆಯ ಆಲದ ಮರಕ್ಕೆ ಮರುಜನ್ಮ ನೀಡಿದ ಘಟನೆ ತೆಲಂಗಾಣದ ರಾಜನ್ನ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಭಾರಿ ಮಳೆ, ಕೊಚ್ಚಿ ಹೋದ ಮಣ್ಣು ಸೇರಿದಂತೆ ಹಲವು ಕಾರಣಗಳಿಂದ 100 ವರ್ಷಕ್ಕೂ ಹಳೆಯದಾದ ಆಲಮದ ಮರ ಧರೆಗುರುಳಿದೆ. ಸ್ಥಳೀಯ ಪರಿಸರ ಪ್ರೇಮಿ ಡಾ. ದೊಬ್ಬಾಲ ಪ್ರಕಾಶ್, ಸಂಸದ ಸಂತೋಶ್ ಕುಮಾರ್, ಸಟಿವ ಕೆಟಿ ರಾಮರಾವ್ ಹಾಗೂ ಪರಿಸ ಸರಂಕ್ಷಣೆ ಯುವಕರ ತಂಡ ಸತತ ಒಂದು ತಿಂಗಳ ಕಾಲ ನಡೆಸಿದ ಪ್ರಯತ್ನದಿಂದ ಆಲದ ಮರ ಪುನರ್ಜನ್ಮ ಪಡೆದುಕೊಂಡಿದೆ. 

ಕಿತ್ತೆಸೆಯಲಾಗಿದ್ದ ಆಲದ ಮರಕ್ಕೆ ಮರುಜೀವ

ಕೊನರಪೇಟೆಯ ಸುದ್ದಲಾ ಗ್ರಾಮದ ಹೊರವಲಯದಲ್ಲಿ ಕೃಷಿಕರಾಗಿರುವ ಬುರಾ ಭೂಮಯ್ಯ ಗೌಡ ಹಾಗೂ ರಮೇಶ್ ಗೌಡ ಅವರ ಜಮೀನಿನಲ್ಲಿದ್ದ ಈ ಆಲದ ಬೇರಿನಲ್ಲಿ ಮಣ್ಣು ಭಾರಿ ಳೆಯಿಂದ ಕೊಚ್ಚಿ ಹೋದ ಕಾರಣ  ಮರ ನೆಲಕ್ಕುರುಳಿದೆ. ನೆಲಕ್ಕುರಳಿದ  ಭಾರಿ ಗಾತ್ರ ಆಲದ ಮರಕ್ಕೆ ನೀರಿನ ಕೊರತೆಯಿಂದ ಒಣಗಲು ಆರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯ ಡಾ. ದೊಬ್ಬಾಲ ಪ್ರಕಾಶ್ ಆಲದ ಮರವನ್ನು ಉಳಿಸಲು ನಿರ್ಧರಿಸಿದ್ದಾರೆ.

"

ಜಮೀನ ಮಾಲೀಕರ ಬಳಿ ಮಾತುಕತೆ ನಡೆಸಿ ಈ ಮರ ಉಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಹಲವು ಪಕ್ಷಿಗಳ ಆಸರೆಯಾಗಿದ್ದ, ಪ್ರಾಣಿ ಸಂಕುಲಕ್ಕೆ ಅತ್ಯುತ್ತಮ ಆಮ್ಲಜನಕ ಒದಗಿಸುವ ಈ ಮರದ ಅವಶ್ಯತೆ ಇದೆ. ಹೀಗಾಗಿ ಇದನ್ನು ಉಳಿಸಲೇಬೇಕು ಎಂದು ಡಾ. ದೊಬ್ಬಾಲ ಪ್ರಕಾಶ್ ಹೇಳಿದ್ದಾರೆ. ಇನ್ನು ಮರ ನೆಲಕ್ಕುರಳಿದ ಪಕ್ಕದ ಜಮೀನಿನಲ್ಲಿನ ದೊಬ್ಬಾಲ ದಾಸ್ ಜೊತೆ ಮಾತುಕತೆ ನಡೆಸಿ ಜಮೀನಿ ಬಾವಿಯಿಂದ ನೀರು ಪಡೆಯಲು ಅನುಮತಿ ಪಡೆದುಕೊಂಡಿದ್ದಾರೆ.

Bengaluru: ಮನೆ ಮಾರಾಟಕ್ಕೆ ಅಡ್ಡವಾಯ್ತೆಂದು ಮರಕ್ಕೆ ವಿಷ!

ಬಾವಿಯಿಂದ ಸತತ ನೀರು ಪಡೆದು ಆಲದ ಮರದ ಬೇರುಗಳಿಗೆ ಹಾಕಿದ್ದಾರೆ. ಒಂದು ತಿಂಗಳ ಬಳಿಕ ಆಲದ ಮರದಲ್ಲಿ ಎಲೆಗಳು ಚಿಗುರಲು ಆರಂಭಿಸಿದೆ. ಮರ ಮತ್ತೆ ಜೀವ ಪಡೆದುಕೊಂಡಿದೆ. ಈ ಸಂತಸದಿಂದ ಹಿರಿ ಹಿಗ್ಗಿದ ಪ್ರಕಾಶ್ ತಮ್ಮ ಪ್ರಯತ್ನ ಮುಂದವರಿಸಿದ್ದಾರೆ. ಆಲದ ಮರ ಜೀವ ಬಂದ ಬೆನ್ನಲ್ಲೇ ಈ ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ದಾನಿಗಳ ನೆರವು ಕೇಳಿದ್ದಾರೆ.

ಇನ್ನು ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿಗಳನ್ನು ಬಿತ್ತರಿಸಲು ಪ್ರಕಟಿಸಲು ಪ್ರಕಾಶ್ ಮನವಿ ಮಾಡಿದ್ದಾರೆ. ಇದರಂತೆ ಮಾಧ್ಯಮಗಳು ಸತತ ಸುದ್ದಿ ಬಿತ್ತರಿಸಿದೆ. ಇದರಿಂದ ಸಚಿವ ಕೆಟಿ  ರಾಮರಾವ್, ಸಂಸದ ಸಂತೋಶ್ ಕುಮಾರ್ ನೆರವಿಗೆ ನಿಂತಿದ್ದಾರೆ. ಟ್ವೀಟ್ ಮೂಲಕ ಸಂತೋಶ್ ಕುಮಾರ್ ನೆರವಿನ ಭರವಸೆ ನೀಡಿದ್ದಾರೆ.  

ಜನವರಿ 17 ರಂದು  ಟ್ವಿಟರ್ ಮೂಲಕ ಸಂತೋಶ್ ಕುಮಾರ್ ಮರವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನೆರವು ನೀಡುವುದಾಗಿ ಹೇಳಿದ್ದಾರೆ. ಇದರಂತೆ ವಾಟಾ ಸಂಸ್ಥಾಪಕ ಉದಯಕೃಷ್ಣ ಪೆದ್ದಿರೆಡ್ಡಿ, ಸದಸ್ಯರಾದ ಮಧನ್ ಸೋಮಾದ್ರಿ, ನಿಶಾ ಖುರಾನ, ಶ್ರೀನಿವಾಸಗೌಡ, ರಾಮಕುಮಾರ ಪುಟ್ಟ, ಕರುಣ್ ನಿಮ್ಮಕಾಯಲ, ಪ್ರಕಾಶ್ ಗಜ್ಜಲ ಅವರ ಭರವಸೆಯಂತೆ ಒಂದು ವಾರ ಕಾಲ ಶ್ರಮವಹಿಸಿ ಕೊಂಬೆಗಳನ್ನು ತೆಗೆದು ಮರವನ್ನು ಮರು ನಾಟಿ  ಮಾಡಲು ಸಜ್ಜಾದರು.

ಸುದ್ದಲ ಗ್ರಾಮದಿಂದ 6 ಕಿಲೋಮೀಟರ್ ದೂರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಲದ ಮರವನ್ನು ನೆಡಲು ಯೋಜನೆ ಸಿದ್ಧಪಡಿಸಲಾಯಿತು. 100 ಟನ್ ಹೆಚ್ಚು ತೂಕದ ಮರವನ್ನು ಮೇಲಕ್ಕೆತ್ತಲು ಎರಡು ಕ್ರೇನ್ ನಿಯೋಜಿಸಲಾಯಿತು.  ಮರವನ್ನು ಸಾಗಿಸಲು ವಿಶೇಷ ಟ್ರಕ್ ವ್ಯವಸ್ಥೆ ಮಾಡಲಾಯಿತು. ಬಳಿಕ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ವಿಯಾಗಿ ಮರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆವರಣದಲ್ಲಿ ನೆಡಲಾಯಿತು. ಇದರ ಎರಡು ದೊಡ್ಡ ಕೊಂಬೆಗಳನ್ನು ತಂಗನ್ನಪಲ್ಲಿ ಮಂಡಲ ಜಿಲ್ಲಾ ಅರಣ್ಯ ಪ್ರದೇಶದಲ್ಲಿ ನೆಡಲಾಗಿದೆ.
 

Latest Videos
Follow Us:
Download App:
  • android
  • ios