ಮೈಸೂರು(ಜ.28): ನಂಜನಗೂಡಿನಲ್ಲಿ ಹೆದ್ದಾರಿ ವಿಸ್ತರಣೆಗಾಗಿ ಬುಡ ಸಹಿತ ಕಿತ್ತು ಎಸೆಯಲಾಗಿದ್ದ ಆಲದ ಮರಕ್ಕೆ ಯುವ ಬ್ರಿಗೇಡ್‌ ಮರು ಜೀವ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಗೋಳೂರು ಸಮೀಪ ಕಾಮಗಾರಿಗೆ ಅಡ್ಡವಿದ್ದ ಆಲದ ಮರವನ್ನು ಬುಡ ಸಹಿತ ಕಿತ್ತು ಎಸೆಯಲಾಗಿತ್ತು.

ಇದನ್ನು ಗಮನಿಸಿದ ನಂಜನಗೂಡು ಯುವ ಬ್ರಿಗೇಡ್‌ ಕಾರ್ಯಕರ್ತರು ಅದನ್ನು ಬೇರೊಂದು ಜಾಗದಲ್ಲಿ ನೆಡುವ ಆಲೋಚನೆ ಮಾಡಿ ಬೆಂಗಳೂರಿನ ಮರಗಳ ವೈದ್ಯ ವಿಜಯ್‌, ನಿಶಾಂತ್‌ರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಕ್ರೇನ್‌ ಹಾಗೂ ಟ್ರ್ಯಾಕ್ಟರ್‌ ಮೂಲಕ ಗೋಳೂರು ಸಮೀಪದಿಂದ ಮರವನ್ನು ಸ್ಥಳಾಂತರಿಸಿದ್ದಾರೆ.

ಮಂಡ್ಯ ಜಿಲ್ಲೆಯ ದೇವರುಗಳಿಗೆ ಸಂಕಟ, ಬೇರೆ ದಾರಿ ಇಲ್ಲ ಇದು ಸುಪ್ರೀಂ ಆದೇಶ!

ಎರಡು ಕಿಲೋಮೀಟರ್‌ ದೂರ ಟ್ರ್ಯಾಕ್ಟರ್‌ನಲ್ಲಿ ಹೊತ್ತೊಯ್ಯುದು ಕಪಿಲಾ ನದಿ ತೀರದಲ್ಲಿ ನಗರಸಭೆಯ ಜೆಸಿಬಿ ಸಹಾಯದಿಂದ ಬೃಹತ್‌ ಹೊಂಡ ತೋಡಿ ಮರವನ್ನು ವ್ಯವಸ್ಥಿತವಾಗಿ ನೆಟ್ಟಿದ್ದಾರೆ. ಈ ಕಾರ್ಯದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತ ಶ್ರೀನಿವಾಸ್‌, ಅರ್ಜುನ್‌, ಪ್ರಜ್ವಲ್‌, ಮಹೇಶ್‌, ರವಿ, ಶ್ರೀಕಂಠ, ರವಿಶಾಸ್ತ್ರೀ ಭಾಗಿಯಾಗಿದ್ದರು.

ಸಕ್ಕರೆ ನಾಡಲ್ಲಿ ಖೋಟಾ ನೋಟು ಹಾವಳಿ; ರೈತನಿಗೆ ಮಹಾಮೋಸ