Asianet Suvarna News Asianet Suvarna News

UP Elections: ಸಿಎಂ ಯೋಗಿಗೆ ಅಯೋಧ್ಯೆ ಟಿಕೆಟ್‌ ಕೈತಪ್ಪಿದ್ದೇಕೆ? ಬಿಜೆಪಿ ಚದುರಂಗದಾಟ ಹೀಗಿದೆ

* ರಂಗೇರಿದ ಉತ್ತರ ಪ್ರದೇಶ ಚುನಾವಣಾ ಕಣ

* ಯೋಗಿ ಕೈತಪ್ಪಿದ ಅಯೋಧ್ಯೆ ಕ್ಷೇತ್ರದ ಟಿಕೆಟ್

* ಯೋಗಿಗೆ ಗೋರಖ್‌ಪುರ ಟಿಕೆಟ್‌ ಕೊಟ್ಟಿದ್ದೇಕೆ ಬಿಜೆಪಿ?

Reason Why BJP Denied Ayodhya Ticket To Yogi Adityanath pod
Author
Bangalore, First Published Jan 15, 2022, 4:58 PM IST

ಲಕ್ನೋ(ಜ.15): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ಭಾರತೀಯ ಜನತಾ ಪಕ್ಷವು ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್‌ಗೆ ಟಿಕೆಟ್ ನೀಡಿದೆ. ಹೀಗಿರುವಾಗ 2022ರ ವಿಧಾನಸಭಾ ಚುನಾವಣೆಯ ಕೇಂದ್ರ ಸ್ಥಾನವನ್ನಾಗಿ ರೂಪಿಸಲು ಯತ್ನಿಸುತ್ತಿರುವ ಅಯೋಧ್ಯೆಯಿಂದ ಯೋಗಿ ಆದಿತ್ಯನಾಥ್ ಅವರಿಗೆ ಏಕೆ ಟಿಕೆಟ್ ಸಿಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಯೋಗಿ ಆದಿತ್ಯನಾಥ್ ಅವರನ್ನು ಗೋರಖ್‌ಪುರದಿಂದ ಕಣಕ್ಕಿಳಿಸುವ ಮೂಲಕ ಬಿಜೆಪಿ ದೊಡ್ಡ ಪಣತೊಟ್ಟಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸುವ ಮಾತು ಬಂದಾಗ ಗೋರಖ್‌ಪುರದ ಸಾಮಾನ್ಯ ಜನರಲ್ಲಿ ಒಂದು ರೀತಿಯ ಕೋಪವಿತ್ತು ಎಂದು ಹಿರಿಯ ಪತ್ರಕರ್ತ ಯೋಗೇಂದ್ರ ತ್ರಿಪಾಠಿ ಹೇಳುತ್ತಾರೆ. ಗೋರಕ್ಷಪೀಠಾಧೀಶ್ವರನನ್ನು ಗೋರಖ್‌ಪುರದ ರಾಜಕೀಯದಿಂದ ತೊಲಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದಮನಿತರು ಹೇಳುತ್ತಿದ್ದರು. ಆದರೆ ಅಲ್ಲಿನ ಜನರ ಮನಸ್ಸಿನಲ್ಲಿ ಇಂತಹ ಸಂದೇಹವೇನಾದರೂ ನೆಲೆಯೂರಿದ್ದರೆ ಬಿಜೆಪಿಗೆ ನೇರ ನಷ್ಟವಾಗುತ್ತಿತ್ತು.

ಮಹಂತರಾಗಿ ಹೆಚ್ಚಿನ ಗೌರವವನ್ನು ಪಡೆಯುತ್ತಾರೆ

ತ್ರಿಪಾಠಿಯನ್ವಯ, “ಯೋಗಿ ಆದಿತ್ಯನಾಥ್ ಅವರು ಬಿಜೆಪಿ ನಾಯಕರಿಗಿಂತ ಗೋರಖ್‌ಪುರದ ಜನರಿಗೆ ಗೋರಕ್ಷಪೀಠಾಧೀಶ್ವರರಾಗಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತಾರೆ. ಗೋರಕ್ಷಪೀಠಾಧೀಶ್ವರ ಎಂಬ ಕಾರಣಕ್ಕೆ ಜನ ಭಕ್ತಿಯಿಂದ ಗೌರವಿಸುತ್ತಾರೆ. ಇಂದಿಗೂ ಯೋಗಿ ಗೋರಖ್‌ಪುರ ತಲುಪಿದಾಗ ಅವರಿಗೆ ಮುಖ್ಯಮಂತ್ರಿಯಾಗಿ ಅಲ್ಲ, ಸ್ಥಳೀಯ ಮತ್ತು ಪ್ರತಿಷ್ಠಿತ ಮಹಂತ್‌ಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ತ್ರಿಪಾಠಿ ಹೇಳುವಂತೆ, ಈ ವಾತಾವರಣದಲ್ಲಿ ಅಲ್ಲಿರುವ ಸಾಮಾನ್ಯ ಜನರಲ್ಲಿ ಏನಾದರೂ ನಕಾರಾತ್ಮಕ ಅನುಮಾನ ಮೂಡಲು ಆರಂಭಿಸಿದರೆ ಇಡೀ ಪೂರ್ವಾಂಚಲದಲ್ಲಿ ಬಿಜೆಪಿಗೆ ನಷ್ಟವಾಗುತ್ತಿತ್ತು.

ಬಿಜೆಪಿ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಯೋಗಿ

ಇತಿಹಾಸವನ್ನು ನೆನಪಿಸಿಕೊಳ್ಳುತ್ತಾ, ತ್ರಿಪಾಠಿ ಹೇಳುತ್ತಾರೆ, "2002 ರಲ್ಲಿ ಬಿಜೆಪಿಯು ತನ್ನ ಅತ್ಯಂತ ಹಿರಿಯ ನಾಯಕ ಶಿವ ಪ್ರತಾಪ್ ಶುಕ್ಲಾ ಅವರನ್ನು ಇಲ್ಲಿಂದ ಕಣಕ್ಕಿಳಿಸಿತ್ತು ಎಂಬ ಅಂಶದಿಂದ ಆ ಪ್ರದೇಶದಲ್ಲಿ ಯೋಗಿಯ ಜನಪ್ರಿಯತೆಯನ್ನು ಅಳೆಯಬಹುದು. ಆದರೆ ಸಿಎಂ ಯೋಗಿ ಜತೆಗೆ ಅವರ ನಂಟು ಉತ್ತಮವಾಗಿರಲಿಲ್ಲ. ಆಗ ಯೋಗಿ ರಾಧಾ ಮೋಹನ್ ದಾಸ್ ಅವರನ್ನು ಭಾರತದ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಆ ಚುನಾವಣೆಯಲ್ಲಿ ಶಿವಪ್ರತಾಪ್ ಶುಕ್ಲಾ ಮೂರನೇ ಸ್ಥಾನ ಪಡೆದು ರಾಧಾ ಮೋಹನ್ ದಾಸ್ ಗೆಲುವು ಸಾಧಿಸಿದ್ದು ಯೋಗಿಯ ಪ್ರಭಾವದಿಂದ ಎನ್ನಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ನಿರಂತರವಾಗಿ ರಾಧಾಮೋಹನ್ ಶಾಸಕರಾಗಿದ್ದಾರೆ. ಬಳಿಕವೇ ಅವರು ಬಿಜೆಪಿ ಸೇರಿದ್ದರು.

ಗೋರಖ್‌ಪುರದಿಂದ ಸ್ರ್ಧಿಸಿದರೆ ಅವರ ಹಾದಿ ಸುಲಭ, ಇಡೀ ಯುಪಿಗೆ ಸಮಯ ನೀಡಲು ಸಾಧ್ಯವಾಗುತ್ತದೆ

ಪೂರ್ವಾಂಚಲದಲ್ಲಿ 130 ವಿಧಾನಸಭಾ ಸ್ಥಾನಗಳನ್ನು ಗಳಿಸಲು ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ನಂಬಿದ್ದಾರೆ. ವಿಶ್ಲೇಷಕರ ಪ್ರಕಾರ, ಚುನಾವಣೆಯಲ್ಲಿ ಗೆಲ್ಲಲು ಯೋಗಿ ಗೋರಖ್‌ಪುರದಲ್ಲಿ ಹೆಚ್ಚು ಶ್ರಮಿಸಬೇಕಾಗಿಲ್ಲ ಮತ್ತು ಸ್ಟಾರ್ ಪ್ರಚಾರಕರಾಗಿ ಅವರು ಇಡೀ ಯುಪಿಗೆ ಸಮಯ ನೀಡಲು ಸಾಧ್ಯವಾಗುತ್ತದೆ.

Follow Us:
Download App:
  • android
  • ios