Asianet Suvarna News Asianet Suvarna News

ತುಂಬಿದ ಸಿಲಿಂಡರ್ ಬಂದಾಗ ಚೆಕ್ ಮಾಡಿಕೊಳ್ಳಿ, ವಿತರಣೆ ನಡುವೆ ಸೋರಿಕೆ ವೀಡಿಯೋ ವೈರಲ್!

  • ಅಡುಗೆ ಗ್ಯಾಸ್ ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ದರ ಏರಿಕೆ
  • ದುಬಾರಿ ಬೆಲೆ ತೆತ್ತು ಗ್ಯಾಸ್ ಖರೀದಿಸಿದ ಗ್ರಾಹಕರಿಗೆ 5 ರಿಂದ 5 ಕೆಜಿ ಕಡಿಮೆ ಕೊರತೆ
  • ವಿತರಣೆ ನಡುವೆ ಸೋರಿಯಾಗತ್ತಿರುವ ವಿಡಿಯೋ ವೈರಲ್
     
Re Filling gas cylinder from filled one illegally before delivery video goes viral ckm
Author
Bengaluru, First Published Aug 22, 2021, 3:57 PM IST

ಬೆಂಗಳೂರು(ಆ.22): ಎಲ್‌ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಗ್ಯಾಸ್ ರೀಫಿಲ್ ಇದೀಗ ಜನರಿಗೆ ಕಣ್ಣೀರು ತರಿಸುತ್ತಿದೆ. ಇದರ ಜೊತೆಗೆ ತಿಂಗಳಿಗೆ ಕನಿಷ್ಠ ಎರಡು ಬಾರಿ ಗ್ಯಾಸ್ ದರ ಏರಿಕೆಯಾಗುತ್ತಿದೆ. ಕೊರೋನಾ ಆತಂಕ, ಆರ್ಥಿಕ ಸಂಕಷ್ಟದ ನಡುವೆ ಜನರಿಗೆ ಎಲ್‌ಪಿಜಿ ಗ್ಯಾಸ್ ತುಂಬಿಸುವುದು ಆರ್ಥಿಕ ಹೊರೆ ಹೆಚ್ಚಿಸುತ್ತಿದೆ. ಇದರ ನಡುವೆ ಮನೆಗೆ ವಿತರಣೆ ಮಾಡಿದ ತುಂಬಿದ ಸಿಲಿಂಡರ್‌ನಲ್ಲಿ 4 ರಿಂದ 5 ಕೆಜಿ ಗ್ಯಾಸ್ ಕಡಿಮೆ ಇದ್ದರೆ  ಪರಿಸ್ಥಿತಿ ಹೇಗಾಗಬೇಡ. ಹೀಗೆ ವಿತರಣೆ ನಡುವೆ ಗ್ಯಾಸ್ ಸೋರಿಕೆ ಮಾಡಿ ಗ್ರಾಹಕರಿಗೆ 4 ರಿಂದ 5 ಕೆಜಿ ಕಡಿಮೆ ತೂಕದ ಸಿಲಿಂಡರ್ ನೀಡುವ ಕುರಿತ ವಿಡಿಯೋಂದು ಭಾರಿ ವೈರಲ್ ಆಗಿದೆ. 

ಗ್ರಾಹಕರಿಗೆ ಎಲ್‌ಪಿಜಿ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ!

ಗ್ಯಾಸ್ ಸಿಲಿಂಡರ್ ರೀಫಿಲ್ ವಿಧಾನ ಅತ್ಯಂತ ಸರಳ. ಮೊಬೈಲ್ ಮೂಲಕ ಸಿಲಿಂಡರ್ ರೀಫಿಲ್ ಬುಕಿಂಗ್ ಮಾಡಬಹುದು. ಬುಕ್ ಮಾಡಿದ ಸಿಲಿಂಡರ್ ಅಷ್ಟೇ ವೇಗದಲ್ಲಿ ಮನೆಗೆ ಡೆಲಿವರಿಯಾಗಲಿದೆ. ಆದರೆ ಡೆಲಿವರಿ ನಡುವೆ  ತುಂಬಿದ ಗ್ಯಾಸ್ ಸಿಲಿಂಡರ್‌ನಿಂದ ಖಾಲಿ ಸಿಲಿಂಡರ್‌ಗೆ ಅಕ್ರಮವಾಗಿ ಗ್ಯಾಸ್ ತುಂಬಿಸುತ್ತಿರುವ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಸಿಲಿಂಡರ್ ಮನೆಗೆ ಬಂದಾಗ ಚೆಕ್ ಮಾಡಿಕೊಳ್ಳಿ. ಕಾರಣ 4 ರಿಂದ 5 ಕೆಜಿ ಕಡಿಮೆ ಇದ್ದರೆ ಮರಳಿ ನೀಡಿ. ಈ ವಿಡಿಯೋದಲ್ಲಿ ಖಾಲಿ ಸಿಲಿಂಡರ್‌ಗೆ ಹೇಗೆ ತುಂಬಿಸಲಾಗುತ್ತಿದೆ ಎಂಬುದನ್ನು ನೋಡಿ ಎಂದು ಈ ವಿಡಿಯೋಗೆ ವಿವರಣೆ ನೀಡಲಾಗಿದೆ.

ಇನ್ನೆಷ್ಟು ಗ್ಯಾಸ್ ಇದೆ ಎಂದು ತಿಳಿಸುವ ಸ್ಮಾರ್ಟ್ ಸಿಲಿಂಡರ್ ಬಿಡುಗಡೆ

ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ವಿತರಿಸಿದಾಗ ಪರೀಶಿಲನೆ ಅಸಾಧ್ಯ. ಹೀಗಾಗಿ ವಿತರಣೆ ಮಾಡುವವರೆ ಗ್ಯಾಸ್ ತೂಕವನ್ನು ಚೆಕ್ ಮಾಡಿ ವಿತರಿಸಬೇಕು. ಅಥವಾ ಸರ್ಕಾರವೇ ಇದಕ್ಕೆ ಸೂಕ್ತ ನಿಯಮ ಜಾರಿಗೆ ತರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಆಗ್ರಹಿಸಿದ್ದಾರೆ.ಇನ್ನೂ ಕೆಲವರು ಇದು ಫೇಕ್ ವಿಡಿಯೋ ಎಂದು ಅಭಿಪ್ರಾಯಪಟ್ಟಿದ್ದಾರೆ. 

 

ವಿಡಿಯೋ ಸತ್ಯಾಸತ್ಯತೆ ಕುರಿತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಈ ವಿಡಿಯೋ ನಿಜವಾಗಿದ್ದಲ್ಲಿ, ಗ್ರಾಹಕರಿಗೆ ಗ್ಯಾಸ್ ಬೆಲೆ ಏರಿಕೆ ಜೊತೆಗೆ ಸೋರಿಕೆ ಕೂಡ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ. 

Follow Us:
Download App:
  • android
  • ios