ಗ್ರಾಹಕರಿಗೆ ಎಲ್‌ಪಿಜಿ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ!
* ಎಲ್‌ಪಿಜಿ ಸಿಲಿಂಡರ್ ಬೆಲೆ 25 ರು. ಹೆಚ್ಚಳ
* ಜನವರಿ ಬಳಿಕ 165 ರು. ಹೆಚ್ಚಳ
* 7 ವರ್ಷದಲ್ಲಿ ಎಲ್ಪಿಜಿ ದರ ಡಬ್ಬಲ್
ನವದೆಹಲಿ(ಆ.19): ಬೆಲೆ ಏರಿಕೆಯ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ನೀಡಿದೆ. ಬುಧವಾರದಿಂದ ಜಾರಿಯಾಗುವಂತೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 25 ರು.ನಷ್ಟುಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 14.5 ಕೆಜಿ ಸಿಲಿಂಡರ್ ಬೆಲೆ 837 ರು.ಗೆ ಏರಿದೆ. ಕಳೆದ ಜು.1ರಂದು 25 ರು. ಏರಿಕೆಯಾಗಿತ್ತು. ಇದೀಗ ಸತತ ಎರಡನೇ ತಿಂಗಳೂ ಬೆಲೆ ಏರಿಕೆ ಮಾಡಲಾಗಿದೆ.
ಸಂಪ್ರದಾಯದಂತೆ ಆ.1ರಂದೇ ಬೆಲೆ ಏರಿಕೆ ಆಗಬೇಕಿತ್ತು. ಆದರೆ ಸಂಸತ್ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಿಪಕ್ಷಗಳ ಟೀಕೆಯಿಂದ ತಪ್ಪಿಸಿಕೊಳ್ಳಲು ದರ ಹೆಚ್ಚಿಸಿರಲಿಲ್ಲ. ಹೀಗಾಗಿ ಇದೀಗ ದರ ಏರಿಕೆ ಪ್ರಕಟಿಸಲಾಗಿದೆ.
ಕಳೆದ ಜ.1ರ ಬಳಿಕ ಎಲ್‌ಪಿಜಿ ಸಿಲಿಂಡರ್ ಬೆಲೆ ಭರ್ಜರಿ 165 ರು.ನಷ್ಟುಹೆಚ್ಚಾಗಿದೆ. ಇನ್ನು ಕಳೆದ 7 ವರ್ಷಗಳಲ್ಲಿ ಎಲ್‌ಪಿಜಿ ದರ ದುಪ್ಪಟ್ಟಾಗಿದೆ. 2014ರ ಮಾಚ್‌ರ್‍ನಲ್ಲಿ ಎಲ್‌ಪಿಜಿ ಬೆಲೆ 410 ರೂ ಆಗಿತ್ತು.